ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾರಕಿಹೊಳಿ ಸಿಡಿ ಪ್ರಕರಣ: ಜಾರಕಿಹೊಳಿ ಆಪ್ತ, ಮಾಜಿ ಶಾಸಕ ನಾಗರಾಜ್ ವಿಚಾರಣೆ ಇಂದು

|
Google Oneindia Kannada News

ಬೆಂಗಳೂರು, ಮಾರ್ಚ್ 22: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ಮಾಜಿ ಶಾಸಕ ನಾಗರಾಜ್ ಅವರನ್ನು ವಿಶೇಷ ತನಿಖಾ ತಂಡ ಇಂದು ವಿಚಾರಣೆ ನಡೆಸಲಿದೆ. ರಮೇಶ್ ಜಾರಕಿಹೊಳಿಗೆ ನಾಗರಾಜ್ ಮೂಲಕ ಹಣದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ನಾಗರಾಜ್ ಮೂಲಕವೇ ರಮೇಶ್ ಜಾರಕಿಹೊಳಿ ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದರು. ಇದೀಗ ನಾಗರಾಜ್ ಅವರನ್ನೇ ವಿಚಾರಣೆ ನಡೆಸಿ ಹೇಳಿಕೆ ಪಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿಯನ್ನು ಈಗಾಗಲೇ ಎರಡು ಬಾರಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಇದೊಂದು ನಕಲಿ ಸಿಡಿ ಎಂಬ ವಾದ ಮುಂದಿಟ್ಟಿದ್ದಾರೆ. ಮಹಾನಾಯಕ ಯಾರು ಎಂಬುದನ್ನು ಪ್ರಸ್ತಾಪಿಸಿಲ್ಲ. ಖಾಸಗಿ ಏಜೆನ್ಸಿ ನೀಡಿದ ಮಾಹಿತಿ ಮೇರೆಗೆ 2 +3+ 4 ಗ್ಯಾಂಗ್ ಈ ಕೃತ್ಯ ಮಾಡಿದ್ದಾರೆ. ರಾಜಕೀಯ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸಿದ್ದಾರೆ ಎಂಬ ಹೇಳಿಕೆಗೆ ಸೀಮಿತವಾಗಿದ್ದಾರೆ.

ಅಶ್ಲೀಲ ಸಿಡಿ ಕೇಸಿನಿಂದ ಹೊರ ಬೀಳುತ್ತಿರುವ ಸುಳ್ಳುಗಳಿಂದ ಆಗುವ ಅನಾಹುತ ಎಂಥದ್ದು ಗೊತ್ತಾ ?ಅಶ್ಲೀಲ ಸಿಡಿ ಕೇಸಿನಿಂದ ಹೊರ ಬೀಳುತ್ತಿರುವ ಸುಳ್ಳುಗಳಿಂದ ಆಗುವ ಅನಾಹುತ ಎಂಥದ್ದು ಗೊತ್ತಾ ?

ಸುಮಾರು 60 ಪ್ರಶ್ನೆಗಳ ಪೈಕಿ ಕೇವಲ 20 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಿಡಿ ಸ್ಫೋಟದಿಂದ ಜರ್ಜರಿತವಾಗಿರುವ ರಮೇಶ್ ಜಾರಕಿಹೊಳಿ ಯಾರಿಗೂ ಮುಖ ಕೊಟ್ಟು ಮಾತನಾಡುತ್ತಿಲ್ಲ. ಆ ಆಘಾತದಿಂದ ಇನ್ನೂ ಹೊರ ಬಂದಂತೆ ಕಾಣುತ್ತಿಲ್ಲ. ಜಾರಕಿಹೊಳಿಯಿಂದ ಕೆಲವು ಪ್ರಶ್ನೆಗಳಿಗೆ ಪಡೆಯಲಾಗದ ಉತ್ತರವನ್ನು ಅವರ ಆಪ್ತರ ವಿಚಾರಣೆ ಮೂಲಕ ಪಡೆದುಕೊಳ್ಳಲು ಎಸ್ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

Ramesh jarkiholi cd row: SIT notice to ex MLA Nagaraj for interrogation

ಮಾಜಿ ಶಾಸಕ ನಾಗರಾಜ್ ಅವರನ್ನು ಇಂದು ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ ನಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಕುರಿತು ಭೇಟಿ ಮಾಡಿದ್ದು ಯಾರು ? ಎಷ್ಟು ಹಣಕ್ಕೆ ಬೇಡಿಕೆ ಇಟ್ಟರು. ಆ ಹಣವನ್ನು ಕೊಟ್ಟರೆ, ಕೊಟ್ಟಿದ್ದೇ ಆದಲ್ಲಿ ಯಾವ ಮಾರ್ಗದಲ್ಲಿ ಕೊಟ್ಟಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿದ್ದಾರೆ.

"ಕೈಲಾಸ" ಸ್ವಾಮಿ ನಿತ್ಯಾನಂದ ಪ್ರಕರಣದ ಹಾದಿ ಹಿಡಿಯುತ್ತಾ ಜಾರಕಿಹೊಳಿ ರಾಸಲೀಲೆ ಕೇಸ್ !

ಈ ಮೂಲಕ ಶಂಕಿತ ಅರೋಪಿಗಳ ವಿಚಾರಣಾ ಹಾದಿ ಸುಗಮ ಮಾಡಿಕೊಳ್ಳಲಿದ್ದಾರೆ. ಮಾಜಿ ಶಾಸಕ ನಾಗರಾಜ್ ಅವರನ್ನು ಅವರ ಆಪ್ತ ವಕೀಲರ ಮೂಲಕ ಸಂಪರ್ಕಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅವರ ಹೆಸರು ಪ್ರಸ್ತಾಪ ಮಾಡಲು ಸಾಧ್ಯವೇ ? ಎಂಬುದು ಮೂಡಿರುವ ಪ್ರಶ್ನೆ.

Ramesh Jarkiholi CD row: SIT notice to ex MLA Nagaraj for interrogation

ಜಾರಕಿಹೊಳಿ ಬ್ರದರ್ಸ್ ಚರ್ಚೆ: ಇನ್ನು ಅಶ್ಲೀಲ ಸಿಡಿ ಸ್ಫೋಟ ಬಳಿಕ ಆಪ್ತರಿಗೂ ಮುಖ ದರ್ಶನ ಕೊಡದೇ ರಮೇಶ್ ಜಾರಕಿಹೊಳಿ ಕುಗ್ಗಿ ಹೋಗಿದ್ದಾರೆ. ಇದರ ನಡುವೆ ಎಸ್ಐಟಿ ವಿಚಾರಣೆ ಎದುರಿಸಿದ ರಮೇಶ್ ಜಾರಕಿಹೊಳಿಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಕಾನೂನು ಸಮರ ಕುರಿತು ವಕೀಲರ ಸಲಹೆ ಪಡೆದುಕೊಂಡಿದ್ದಾರೆ. ಇದರ ನಡುವೆ ಲಕನ್ ಜಾರಕಿಹೊಳಿ ಕೂಡ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸಾಮಾಜಿಕವಾಗಿ ಗೌರವ ಕಳೆದುಕೊಂಡಿರುವ ರಮೇಶ್ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಕೊನೆ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ.

English summary
SIT officials have issued notice to Nagaraj, a former MLA, in connection with the Ramesh jarkiholi CD Row case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X