Lorry Strike in Karnataka: ಇಂದು ಮಧ್ಯಾಹ್ನ ತುರ್ತು ಸಭೆ: ಲಾರಿ ಮಾಲೀಕರ ಮುಷ್ಕರ ನಿಲ್ಲುತ್ತಾ...?
ಬೆಂಗಳೂರು, ಏಪ್ರಿಲ್ 15: ಕರ್ನಾಟಕದಾದ್ಯಂತ ಲಾರಿ ಮಾಲೀಕರ ಸಂಘದಿಂದ ಈಗಾಗಲೇ ಮುಷ್ಕರ ಆರಂಭವಾಗಿದೆ. ದರ ಹೆಚ್ಚಳ, ಆರ್ಥಿಕ ಹೊರೆ ವಿರುದ್ಧ 'ಕರ್ನಾಟಕ ಲಾರಿ ಮಾಲೀಕರ ಫೆಡರೇಷನ್' ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದೆ. ಸ್ಟ್ರೈಕ್‌ಗೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಎಚ್ಚೆತ್ತ ರಾಜ್ಯ ಸರ್ಕಾರ ಇಂದು ಮಧ್ಯಾಹ್ನ ತುರ್ತು ಸಭೆ ಕರೆದಿದೆ.
ಹೌದು, ಲಾರಿ ಮುಷ್ಕರ ಆರಂಭವಾಗಿದ್ದು ಸಾರಿಗೆ ಸಚಿವರ ರಾಮಲಿಂಗಾ ರೆಡ್ಡಿ ಅವರು ಇಂದು ಮಂಗಳವಾರ ಏಪ್ರಿಲ್ 15 ರಂದು ಮಧ್ಯಾಹ್ನ 1.15ಕ್ಕೆ ಬೆಂಗಳೂರಿನ ಶಾಂತಿನಗರ ಟಿಟಿಎಂಸಿ ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದಾರೆ. ಲಾರಿ ಮಾಲೀಕರೊಂದಿಗೆ ಸಚಿವರು ಮಾತುಕತೆ ನಡೆಸಿ, ಮುಷ್ಕರ ಕೈ ಬಿಡುವಂತೆ ಮನವಿ ಮಾಡಲಿದ್ದಾರೆ. ಸರಕು, ಗೂಡ್ಸ್ ವಾಹನಗಳ ಮಾಲೀರಿಗೆ ಒಂದಷ್ಟು ಬೇಡಿಕೆ ಈಡೇರಿಗೆ ಭರವಸೆ ನೀಡಿ ಮನವೊಲಿಸುವ ಪ್ರಯತ್ನ ನಡೆಯಲಿದೆ ಎನ್ನಲಾಗಿದೆ.

ಸಚಿವ ಮನವಿ, ಭರವಸೆಗಳಿಗೆ ರಾಜ್ಯ ಲಾರಿ ಮಾಲೀಕರು ಒಪ್ಪುತ್ತಾರಾ? ಎಂದು ಕಾದು ನೋಡಬೇಕಿದೆ. ಒಪ್ಪಿದರೆ ಒಂದೇ ದಿನಕ್ಕೆ ಮುಷ್ಕರ ನಿಂತು ಎಂದಿನಂತೆ ಸರಕು ಸೇವೆ ಪೂರೈಕೆ ಲಭ್ಯವಾಗಲಿವೆ. ಇಲ್ಲವಾದಲ್ಲಿ ಪರಿಸ್ಥಿತಿ ಕಷ್ಟವಾಗಲಿದೆ. ಸರಕು ಸೇವೆ ನಿಂತು, ಪೂರೈಕೆ ಕೊರತೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆ ಆಗಲಿವೆ. ಈ ಸಂಬಂಧ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ.
ಸದ್ಯ ಚಾಮರಾಜನಗರ ಜಿಲ್ಲೆ ಗಡಿ ಭಾಗದಲ್ಲಿ, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯ ಮೂಲೆ ಮೂಲೆಗಳಲ್ಲಿ ಸರಕು ಮತ್ತು ಗೂಡ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ರಸ್ತೆ ಬಸಿ, ಎಪಿಎಂಸಿ, ಶೆಡ್, ಮೈದಾನಗಳಲ್ಲಿ ಅಲ್ಲಲ್ಲಿ ಲಾರಿಗಳು ಸಂಚರಿಸದೇ ನಿಂತಲ್ಲೇ ನಿಂತಿವೆ. ತಿಂಗಳುಗಳಿಂದ ಮನವಿ ಮಾಡಿದರೂ ಖ್ಯಾರೆ ಎನ್ನದ ಸರ್ಕಾರದ ವಿರುದ್ಧ ಲಾರಿ ಮಾಲೀಕರು ಕಠಿಣ ನಿಲುವು ತಾಳಿದಂತಿದೆ. ಸಭೆ ಬಳಿಕ ಮುಂದಿನ ಅವರ ನಡೆ ಏನೆಂಬುದು ಗೊತ್ತಾಗಲಿದೆ.













Click it and Unblock the Notifications