ಸೋಮನಾಥ ದೇವಾಲಯ ಉದ್ಘಾಟನೆಗೆ ತೆರಳದವರು ಹಿಂದು ದ್ವೇಷಿಗಳು: ಆರ್.ಅಶೋಕ್ ಆರೋಪ
ಬೆಂಗಳೂರು, ಜನವರಿ 12: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗದಿರುವ ಕಾಂಗ್ರೆಸ್ ನಿರ್ಧಾರ ಕುರಿತು ಬಿಜೆಪಿಯು ವಾಗ್ದಾಳಿ ಮುಂದುವರಿಸಿದೆ. ಹಿಂದೂ ದ್ವೇಷ ಕಾಂಗ್ರೆಸ್ ನ ಕಣ ಕಣದಲ್ಲೂ ಇದೆ ಎಂದಿರುವ ಬಿಜೆಪಿಯು, ಸೋಮನಾಥ ದೇವಾಲಯದ ಉದ್ಘಾಟನೆ ಆದಾಗ ಅಂದಿನ ಪ್ರಧಾನಿ ನೆಹರೂ ಅವರು ಅದರಲ್ಲಿ ಭಾಗವಹಿಸಿರಲಿಲ್ಲ ಎಂದು ಪ್ರಸ್ತಾಪ ಮಾಡಿ ಕಾಂಗ್ರೆಸ್ ವಿರುದ್ಧ ದೂರಿದೆ.
ಈ ಕುರಿತು ಬಿಜೆಪಿ ವಿಪಕ್ಷ ಸ್ಥಾನದ ಅಧ್ಯಕ್ಷ ಆರ್. ಅಶೋಕ್ ಅವರು ಟ್ವೀಟ್ ಮಾಡಿ ಇತಿಹಾಸ ಕೆದಕಿದ್ದಾರೆ. ಕಾಂಗ್ರೆಸ್ ಪಕ್ಷದ ಕಣ ಕಣದಲ್ಲೂ ಹಿಂದೂ ದ್ವೇಷ ಇದೆ ಎಂದಿರುವ ಅವರು, 1951ರಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ಉದ್ಘಾಟನೆಗೆ ಕಾಂಗ್ರೆಸ್ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಪಾಲ್ಗೊಂಡಿರಲಿಲ್ಲ.

ಅಷ್ಟೇ ಅಲ್ಲದೆ, ಸೋಮನಾಥ ದೇವಾಲಯದ ಜೀರ್ಣೋದ್ಧಾರವನ್ನೇ ವಿರೋಧಿಸಿದ್ದ ನೆಹರೂ ಅವರು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಸಹ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ಇದಕ್ಕಿಂತ ಸಾಕ್ಷಿ ಬೇಕೆ?: ಆರ್.ಅಶೋಕ್
ಆಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಬಿಜೆಪಿ, ಆರ್ ಎಸ್ಎಸ್ ಕಾರ್ಯಕ್ರಮವಾಗಿದೆ, ಆದ್ದರಿಂದ ನಾವು ಹೋಗುವುದಿಲ್ಲ ಅಂತ ಹೇಳುತ್ತಿರುವ ಕಾಂಗ್ರೆಸ್ ಪಕ್ಷ 1951ರಲ್ಲಿ ಸೋಮನಾಥ ದೇವಾಲಯಕ್ಕೆ ಏಕೆ ಹೋಗಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.
1951ರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇನ್ನೂ ಸ್ಥಾಪನೆಯೇ ಆಗಿರಲಿಲ್ಲ. ಮೇಲಾಗಿ ಅಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು, ಸ್ವತಃ ಅಂದಿನ ಪ್ರಧಾನಿ ನೆಹರೂ ಅವರು ಹೋಗಿರಲಿಲ್ಲ. ಇದೆಲ್ಲ ನೋಡಿದರೆ ಕಾಂಗ್ರೆಸ್ ಪಕ್ಷದ ಹಿಂದೂ ದ್ವೇಷ ಅದರ ಕಣ ಕಣದಲ್ಲೂ ಇದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಅವರು ಕುಟುಕಿದ್ದಾರೆ.
ಹಿಂದೂ ದ್ವೇಷ ಕಾಂಗ್ರೆಸ್ ನ ಕಣ ಕಣದಲ್ಲೂ ಇದೆ
— R. Ashoka (ಆರ್. ಅಶೋಕ) (@RAshokaBJP) January 12, 2024
1951ರಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ಉದ್ಘಾಟನೆ ಆದಾಗ ಅಂದಿನ ಪ್ರಧಾನಿ ನೆಹರೂ ಅವರು ಅದರಲ್ಲಿ ಭಾಗವಹಿಸಿರಲಿಲ್ಲ.
ಅಷ್ಟೇ ಅಲ್ಲದೆ, ಸೋಮನಾಥ ದೇವಾಲಯದ ಜೀರ್ಣೋದ್ಧಾರವನ್ನೇ ವಿರೋಧಿಸಿದ್ದ ನೆಹರೂ ಅವರು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಸಹ… pic.twitter.com/R70zbczsUw
ಉದ್ಘಾಟನೆಗೆ ಹೋಗದಿರಲು ಕಾಂಗ್ರೆಸ್ ನಿರ್ಧಾರ
ಅಯೋಧ್ಯೆ ಶ್ರೀರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ, ಚುನಾವಣೆ ದೃಷ್ಟಿಯಿಂದಲೇ ರಾಮ ಮಂದಿರ ಉದ್ಘಾಟನೆಗೆ ಮುಂದಾಗಿದೆ ಎಂದು ಮೊದಲಿಂದಲೂ ಕಾಂಗ್ರೆಸ್ ದೂರುತ್ತಾ ಬಂದಿದೆ. ಇದೀಗ ರಾಮ ಮಂದಿರ ಉದ್ಘಾಟನೆ ಸಂಬಂಧ ಕಾಂಗ್ರೆಸ್ ಹಲವು ನಾಯಕರಿಗೆ ಆಮಂತ್ರಣ ನೀಡಲಾಗಿತ್ತು ಎನ್ನಲಾಗಿದೆ.

ಆದರೆ ಈ ಕುರಿತು ಮಾತುಕತೆ ನಡೆಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖಗೆ, ವೇಣುಗೋಪಾಲ್ ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗದಂತೆ ನಿರ್ಧಾರ ಕೈಗೊಂಡಿದ್ದಾರೆ.
ಪೂರ್ಣಗೊಳ್ಳದೇ ಉದ್ಘಾಟನೆ: ಗೃಹ ಸಚಿವರು
ಇದನ್ನು ಸಿಎಂ ಸಿದ್ದಾಮಯ್ಯ ಅವರು ಸಹ ಬೆಂಬಲಿಸಿದ್ದಾರೆ. ಪಕ್ಷ ನಿರ್ಧಾರದಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇತ್ತ ಗೃಹ ಸಚಿವ ಜಿ.ಪರಮೇಶ್ವರ್ ಅವರು ಸಹ ಶ್ರೀರಾಮ ಮಂದಿರದ ನಿರ್ಮಾನ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬಿಜೆಪಿಯು ಲೋಕಸಭಾ ಚುನಾವಣೆ ದೃಷ್ಟಿಯಿಂದ ಲೋಕಾರ್ಪಣೆಗೆ ಮುಂದಾಗಿದೆ ಎಂದು ಗುರುವಾರ ಬೆಂಗಳೂರಿನಲ್ಲಿ ಚಾಟಿ ಬೀಸಿದ್ದರು.












Click it and Unblock the Notifications