ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರ ತಡೆಗೆ ನಾನು ಸಹಿ ಹಾಕಾಯ್ತು, ನಿಮ್ಮದೊಂದು ಸಹಿ ಸೇರಿಸಿ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 15 : ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ 'ಅತ್ಯಾಚಾರ ತಡೆ ಸಹಿ ಅಭಿಯಾನ' ವನ್ನು ಆರಂಭಿಸಿದ್ದು, ಈ ವಾರಾಂತ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ಆನ್ ಲೈನ್ ಮೂಲಕ ಸಹಿ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಪೋಷಕರೇ ನಿಮ್ಮ ಮಕ್ಕಳು ಸುರಕ್ಷಿತರು ಎಂದು ಸಮಾಧಾನಗೊಳ್ಳದಿರಿ. ಇತ್ತೀಚಿಗೆ ಈ ಜಗತ್ತಿನಲ್ಲಿ ಯಾರ ಮಕ್ಕಳು ಸುರಕ್ಷಿತರಲ್ಲ. ಯಾವ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಯಾವ ಅವಘಡ ಕಾದಿರುತ್ತದೋ ಬಲ್ಲವರಿಲ್ಲ. ಹಾಗಾಗಿ ನೈತಿಕ ಕಾರ್ಯಕ್ಕೆ ನಿಮ್ಮದೊಂದು ಸಹಿ ಇರಲಿ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಈ ಅತ್ಯಾಚಾರ ತಡೆ ಸಹಿ ಅಭಿಯಾನಕ್ಕೆ ಮುನ್ನಡಿ ಇಟ್ಟಿದ್ದಾರೆ.[ಮೂರು ವರ್ಷದ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

Rajya Sabha MP Rajeev Chandrashekar starts on control of Sexual abuse sign campaign in Online

'ನಮ್ಮ ಹೆಣ್ಣು ಮಕ್ಕಳು ಸ್ವಂತ ಮನೆಯವರಿಂದ, ಮನೆಯ ನೆರೆಹೊರೆಯವರಿಂದ, ಅಪರಿಚಿತರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದು, ಮಕ್ಕಳು ತಮ್ಮ ಬಾಲ್ಯವನ್ನು ನಿರ್ಭೀತಿಯಿಂದ ಕಳೆಯಲು ಸಾಧ್ಯವಾಗುತ್ತಿಲ್ಲ. ಬಾಲ್ಯದ ಸವಿಯನ್ನು ಅನುಭವಿಸದ ಸ್ಥಿತಿಗೆ ಬಂದಿದ್ದಾರೆ. ಹಾಗಾಗಿ ಈ ಅತ್ಯಾಚಾರವೆಂಬ ಪೀಡೆ ತಡೆಯಲು ಮುಂದಾಗುವ ಅಗತ್ಯತೆ ಇದೆ' ಎಂದು ರಾಜೀವ್ ಚಂದ್ರಶೇಖರ್ ಕರೆ ನೀಡಿದ್ದಾರೆ.

ಸಹಿ ಅಭಿಯಾನದ ಹಿನ್ನೆಲೆ :

ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ 15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 4 ಯುವಕರ ತಂಡ ಅದನ್ನು ಚಿತ್ರಿಕರಿಸಿದ್ದರು. ಈ ಕಾಮುಕರಿಗೆ ಬಲಿಯಾದ ಆಕೆ ತನ್ನ ಪ್ರಾಣ ಕಳೆದುಕೊಂಡಿದ್ದಳು.

ಇಂದಿರಾ ನಗರದಲ್ಲಿ ಪ್ರೀ ನರ್ಸರಿ ಓದುತ್ತಿದ್ದ ಮೂರು ವರ್ಷದ ಬಾಲಕಿ ಶಾಲಾ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಳು. ನವದೆಹಲಿಯಲ್ಲಿ 4 ವರ್ಷದ ಬಾಲೆಯ ಮೇಲೆ ಅತ್ಯಾಚಾರವಾಗಿದೆ.[ಪಾಂಡವಪುರದಲ್ಲಿ ಯುವತಿ ಮೇಲೆ ಪುಂಡರ ಅತ್ಯಾಚಾರ]

ಹೀಗೆ ಹಸುಳೆಗಳು ಅಪ್ರಾಪ್ತರು ಎಂಬ ಭೇದ ತೋರದ ಕಾಮುಕರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಸಾಗಿದೆ. ಈ ಹಿನ್ನೆಲೆಯಲ್ಲಿ ಸಹಿ ಅಭಿಯಾನ ಆರಂಭವಾಗಿದೆ.

ಈ ಅಭಿಯಾನಕ್ಕೆ ನೀವು ಸಹಿ ಹಾಕಿ:

English summary
Rajya Sabha MP Rajeev Chandrashekar starts on control of Sexual abuse sign campaign in Online, Bengaluru. Chandrashekar has asking Prime minister Narendra modi to commit to roadmap to protect children from sexual abuse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X