ಕೊಡಗಿನ ಜನರ ಪುನರ್ವಸತಿಗೆ 10 ಲಕ್ಷ ನೀಡಿದ ರಾಜೀವ್ ಚಂದ್ರಶೇಖರ್
Recommended Video

ಬೆಂಗಳೂರು, ಆಗಸ್ಟ್ 21: ಪ್ರವಾಹ ಪೀಡಿತ ಕೊಡಗಿಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು 10 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ತಮ್ಮ, ಹಲವು ಉದ್ಯಮಪತಿ ಗೆಳೆಯರನ್ನು ಸಂಪರ್ಕಿಸಿ ಕೊಡಗು ಕಟ್ಟಲು ಸಹಾಯ ನೀಡುವಂತೆ ಅವರು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
'ಈಗಾಗಲೇ ನಾನು ಹಲವು ಎನ್‌ಜಿಓ ಮತ್ತು ಸಾರ್ವಜನಿಕ ಸಂಘಗಳ ಜೊತೆಯಾಗಿ ಕೊಡಗಿನ ಜನತೆಯ ಸಹಾಯಕ್ಕಾಗಿ ದುಡಿಯುತಿದ್ದೇನೆ' ಎಂದು ಮಾಹಿತಿ ನೀಡಿದ್ದಾರೆ.

ಕೊಡಗಿನ ಜನರಿಗೆ ಪುನರ್ವಸತಿ ಕಲ್ಪಿಸಬೇಕಿರುವುದು ಮೊದಲ ಆದ್ಯತೆ ಆಗಬೇಕು ಎಂದು ಹೇಳಿರುವ ಅವರು, ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಸಂಸದರ ನಿಧಿಯನ್ನು ಕೊಡಗಿನ ಪುನರ್ವಸತಿಗೆ ಬಳಸುವುದಾಗಿಯೂ ಅವರು ಹೇಳಿದ್ದಾರೆ.
ಕೊಡಗಿಗೆ ಹರಿದು ಬರುತ್ತಿರುವ ಸಹಾಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ರಾಜೀವ್ ಚಂದ್ರಶೇಖರ್ ಅವರು, ಕೊಡಗಿನ ನೋವಿಗೆ ಕರ್ನಾಟಕದ ಜನ ಸ್ಪಂದಿಸಿರುವ ರೀತಿ ಭಾವುಕನನ್ನಾಗಿಸಿದೆ ಎಂದಿದ್ದಾರೆ. ಅಲ್ಲದೆ ತಮ್ಮ ಒಡೆತನದ ಸುದ್ದಿ ಪತ್ರಕೆ ಮತ್ತು ಮಾಧ್ಯಮ ಸಂಸ್ಥೆ ಈಗಾಗಲೇ 32 ಲಾರಿ ಲೋಡಿನ ಪರಿಹಾರ ಸಾಮಗ್ರಿಗಳನ್ನು ಕೊಡಗಿಗೆ ತಲುಪಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications