Kannada: ಕನ್ನಡ ಮಾತನಾಡಿ ಎಂದರೆ ** ಕನ್ನಡ ಎಂದ ರಾಜಸ್ಥಾನಿ ವ್ಯಾಪಾರಿ, ವಿಡಿಯೋ ವೈರಲ್!
Kannada: ಬೆಂಗಳೂರಿನಲ್ಲಿ ಭಾಷಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ನಿತ್ಯವೂ ಒಂದಿಲ್ಲೊಂದು ಭಾಷಾ ವಿವಾದದ ಬಗ್ಗೆ ಸುದ್ದಿಯಾಗುತ್ತಲ್ಲೇ ಇದೆ. ಇದೀಗ ಬೆಂಗಳೂರಿನ ಹೃದಯಭಾಗ ಎಂದೇ ಪರಿಗಣಿಸಲಾಗಿರುವ ಚಿಕ್ಕಪೇಟೆಯಲ್ಲಿ ವ್ಯಾಪಾರಿಯೊಬ್ಬ "ಕನ್ನಡ ಮಾತನಾಡ್ರಿ" ಎಂದರೆ ಲೌ* ಕನ್ನಡ ಎಂದು ಕೆಟ್ಟ ಪದ ಬಳಸಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ಚೇತನ್ ಸೂರ್ಯ ಎಸ್. ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು. ಕನ್ನಡಿಗರು ಎಷ್ಟರ ಮಟ್ಟಿಗೆ ವಲಸಿಗರ ವ್ಯಾಪಾರ ಬೆಂಬಲಿಸಿದ್ದೇವೆ ಎಂದರೆ, ರಾಜಸ್ಥಾನ್ ನಿಂದ ಬದುಕಲು ಬಂದ ಅಯೋಗ್ಯ ನಮ್ಮ ಭಾಷೆಯ ಬಗ್ಗೆ ಇಷ್ಟೊಂದು ಕೀಳಾಗಿ ಮಾತಾಡಿದ್ರು ಪುನಃ ಅವರನ್ನೇ ಬೆಂಬಲಿಸುವಷ್ಟರ ಮಟ್ಟಿಗೆ..! ದೇಶಪ್ರೇಮದ ಹೆಸರಲ್ಲಿ ನಾಡಪ್ರೇಮ ಮರೆತಾಗ ಇಂತಹ ಘಟನೆಗಳು ಪುನರವರ್ತನೆ ಆಗ್ತಾನೆ ಇರುತ್ತೆ ಎಂದು ಹೇಳಿದ್ದಾರೆ.

ಚಿಕ್ಕಪೇಟೆಯಲ್ಲಿ ವ್ಯಾಪಾರಿಯೊಬ್ಬ ನಾನು ರಾಜಸ್ಥಾನದಿಂದ ಬಂದಿದ್ದೀನಿ. ನೀನು ಬೇಕಾದರೆ ಹಿಂದಿಯಲ್ಲಿ ಮಾತನಾಡು ಎಂದು ಹೇಳಿರುವುದು ವಿಡಿಯೋದಲ್ಲಿ ಇದೆ. ಕನ್ನಡದಲ್ಲಿ ಮಾತನಾಡು ಎಂದು ಕೇಳುತ್ತಿದ್ದರೂ ವ್ಯಕ್ತಿ ಕನ್ನಡದಲ್ಲಿ ಮಾತನಾಡಿಲ್ಲ. ಕನ್ನಡ ಬರಲ್ಲ ನಾನು ಮಾತನಾಡುವುದು ಹಿಂದಿಯಲ್ಲೇ ಎಂದಿದ್ದಾನೆ. ಇದು ಕರ್ನಾಟಕ ಇಲ್ಲಿ ಕನ್ನಡದಲ್ಲಿ ಮಾತನಾಡು ಎಂದು ಕನ್ನಡಿಗರು ಒತ್ತಾಯಿಸಿರುವುದಕ್ಕೆ ರಾಜಸ್ಥಾನಿ ಲೌ* ಕನ್ನಡ ಎಂದು ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿರುವುದು ವಿಡಿಯೋದಲ್ಲಿ ಇದೆ. ಈ ವಿಡಿಯೋಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಆಕ್ರೋಶ: ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಹಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಕನ್ನಡಿಗರು ಈ ರೀತಿ ಅವಾಚ್ಯ ಶಬ್ದ ಬಳಸುವವರಿಗೆ, ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡಿಗರು ಎಷ್ಟರ ಮಟ್ಟಿಗೆ ವಲಸಿಗರ ವ್ಯಾಪಾರ ಬೆಂಬಲಿಸಿದ್ದೇವೆ ಅಂದ್ರೆ
— ಚೇತನ್ ಸೂರ್ಯ ಎಸ್ - Chethan Surya S (@Chethan_Surya_S) December 11, 2025
ರಾಜಸ್ತಾನ್ ನಿಂದ ಬದುಕಲು ಬಂದ ಅಯೋಗ್ಯ ನಮ್ಮ ಭಾಷೆಯ ಬಗ್ಗೆ ಇಷ್ಟೊಂದು ಕೀಳಾಗಿ ಮಾತಾಡಿದ್ರು ಪುನಃ ಅವರನ್ನೇ ಬೆಂಬಲಿಸುವಷ್ಟರ ಮಟ್ಟಿಗೆ..!
ದೇಶಪ್ರೇಮದ ಹೆಸರಲ್ಲಿ
ನಾಡಪ್ರೇಮ ಮರೆತಾಗ ಇಂತಹ ಘಟನೆಗಳು ಪುನರವರ್ತನೆ ಆಗ್ತಾನೆ ಇರುತ್ತೆ..!@BlrCityPolice pic.twitter.com/oTSHO9vK9y
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು, ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications