ಆರ್. ಆರ್. ನಗರ ಚುನಾವಣೆ; ವೃದ್ಧರು ಮನೆಯಲ್ಲೇ ಮತದಾನ ಮಾಡಿ

ಬೆಂಗಳೂರು, ಅಕ್ಟೋಬರ್ 30: ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ವೃದ್ಧರು ಮತ್ತು ಅಂಗವಿಕಲರು ಚುನಾವಣೆಯಲ್ಲಿ ಮತದಾನ ಮಾಡಲು ಬಿಬಿಎಂಪಿ ವ್ಯವಸ್ಥೆ ಮಾಡಿದೆ.

ಬಿಬಿಎಂಪಿ ಆಯುಕ್ತ ಮತ್ತು ಆರ್. ಆರ್. ನಗರ ಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. "ವೃದ್ಧರು ಮತ್ತು ಅಂಗವಿಕಲರು ಮನೆಯಲ್ಲಿಯೇ ಮತದಾನ ಮಾಡಬಹುದು. ಮತದಾನ ಕೇಂದ್ರಕ್ಕೆ ಬರುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

"ಮತಗಟ್ಟೆ ಅಧಿಕಾರಿಗಳು ಪೊಲೀಸರ ಜೊತೆ ಮನೆಗೆ ಬರಲಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವೃದ್ಧರು, ಅಂಗವಿಕಲರು ಮತದಾನ ಮಾಡಬಹುದು. ಅದನ್ನು ಗೌಪ್ಯವಾಗಿ ಸಹ ಇಡಲಾಗುತ್ತದೆ" ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

Rajarajeshwari Nagar By Election Senior Citizens Can Vote From Home

ಉಪ ಚುನಾವಣೆ ನಡೆಯುವ ಆರ್. ಆರ್. ನಗರ ಕ್ಷೇತ್ರದಲ್ಲಿರುವ ವೃದ್ಧರು ಮತ್ತು ಅಂಗವಿಕಲರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 488 ವೃದ್ಧರು ಮತ್ತು 33 ಅಂಗವಿಲಕರು ಕ್ಷೇತ್ರದಲ್ಲಿದ್ದಾರೆ. ಮನೆಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

ಕ್ಷೇತ್ರದಲ್ಲಿನ 317 ಮತದಾರರು ಕೋವಿಡ್ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 847 ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. 18 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದಾರೆ. ಇವರೆಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಕೋವಿಡ್ ಸೋಂಕಿತರಿಗೆ ಸಂಜೆ 5 ರಿಂದ 6 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತದಾರರನ್ನು, ಆಸ್ಪತ್ರೆ, ಮನೆ, ಕೋವಿಡ್ ಕೇರ್‌ ಸೆಂಟರ್‌ನಿಂದ ಕರೆದುಕೊಂಡು ಬರಲು, ವಾಪಸ್ ಬಿಡಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಮತದಾನಕ್ಕಾಗಿ ಒಟ್ಟು 678 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ 88 ಸೂಕ್ಷ್ಮ ಮತಗಟ್ಟೆಗಳಾಗಿವೆ. ಮತಗಟ್ಟೆಗಳಲ್ಲಿ ಆರೋಗ್ಯ ಸಿಬ್ಬಂದಿ ಇರಲಿದ್ದು, ಮತದಾರರಿಗೆ ಥರ್ಮಲ್ ಸ್ಲ್ರೀನಿಂಗ್ ಕಡ್ಡಾಯವಾಗಿದೆ. ಮತಗಟ್ಟೆ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+