ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಏಪ್ರಿಲ್ 10ರವರೆಗೆ ಮಳೆ ಮುಂದುವರೆಯಲಿದೆ

|
Google Oneindia Kannada News

Recommended Video

ಬೆಂಗಳೂರಲ್ಲಿ ಏಪ್ರಿಲ್ 10ರವರೆಗೆ ಮಳೆ ಮುಂದುವರೆಯಲಿದೆ | Oneindia Kannada

ಬೆಂಗಳೂರು, ಏಪ್ರಿಲ್ 03: ಸೆಕೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದೆ. ಮಾರ್ಚ್ ಅಂತ್ಯದಲ್ಲಿ ಆದ ಭಾರಿ ಮಳೆಯಿಂದ ಈ ತಿಂಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿತ್ತು. ಇದಾದ ಬಳಿಕ ಏಪ್ರಿಲ್ ಮೊದಲ ದಿನದಿಂದಲೇ ಸೆಕೆ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಆದರೆ ಟ್ರಪ್(ದಟ್ಟ ಮೋಡಗಳ ಸಾಲು) ಇನ್ನೂ ತೀವ್ರವಾಗಿರುವುದರಿಂದ ಮತ್ತೆ ಮಳೆಯಾಗಿದೆ. ಹವಾಮಾನ ತಜ್ಞರ ಪ್ರಕಾರ, ಏ.10ರವರೆಗೂ ಟ್ರಫ್ ತೀವ್ರತೆ ಇರಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಏ.4ರವರೆಗೆ ನಗರದಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ.

ಬೆಂಗಳೂರು: ಇನ್ನೂ ಎರಡು ದಿನ ತುಂತುರು ಮಳೆ ಸಾಧ್ಯತೆ ಬೆಂಗಳೂರು: ಇನ್ನೂ ಎರಡು ದಿನ ತುಂತುರು ಮಳೆ ಸಾಧ್ಯತೆ

ಕೆಲ ಪ್ರದೇಶದಲ್ಲಿ ಸೋಮವಾರ ತುಂತುರು ಮಳೆಯಾಗಿದೆ. ಸಾರಕ್ಕಿಯಲ್ಲಿ 23ಮಿ.ಮೀ, ಕುಮಾರಸ್ವಾಮಿ ಲೇಔಟ್‌ ನಲ್ಲಿ 20.5 ಮಿ.ಮೀ, ಕೋರಮಂಗಲದಲ್ಲಿ 18.5ಮಿ.ಮೀ, ಬಸವನಗುಡಿಯಲ್ಲಿ 17ಮಿ.ಮೀ ನಷ್ಟು ಮಳೆಯಾಗಿದೆ ಗಂಟಿಗಾನಹಳ್ಳಿ, ರಾಜರಾಜೇಶ್ವರಿ ನಗರ, ಶಾಂತಿನಗರ, ಎಂಜಿ ರಸ್ತೆ, ವಿಧಾನಸೌಧ, ಮಹಾಲಕ್ಷ್ಮೀ ಲೇಔಟ್‌ ನಲ್ಲಿ ಸಾಧಾರಣ ಮಳೆಯಾಗಿದೆ.

Rain will continue till April 10 in Bengaluru

ಬೆಂಗಳೂರು ನಗರದಲ್ಲಿ ಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ 23.1 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ನಲ್ಲಿ ಗರಿಷ್ಠ 32.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.4ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ನಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
Indian meteorological department indicated that there are chances of Heavy rain in and around Bengaluru for a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X