Karnataka Rain: ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಮುಂದಿನ ಐದು ದಿನ ಜೋರು ಮಳೆ!

ಭಾರತದ ಹಲವೆಡೆ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಹಲವು ಭಾಗಗಳಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದರೆ ಇನ್ನೂ ಕೆಲವೆಡೆ ತೀವ್ರ ಚಳಿ ಆವರಿಸಿದೆ. ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದೇಶದ ಹಲವೆಡೆ ಮುಂದಿನ ಐದು ದಿನಗಳಲ್ಲಿ ಜೋರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಜೊತೆಗೆ ಹಲವೆಡೆ ದಟ್ಟ ಮಂಜು ಆವರಿಸುವ ಸೂಚನೆಯನ್ನು ನೀಡಲಾಗಿದೆ. ಹಾಗಾದರೆ ದೇಶದ ಯಾವ ಭಾಗದಲ್ಲಿ ಮುಂದಿನ ದಿನಗಳ ಕಾಲ ಮಳೆಯಾಗಲಿದೆ? ಯಾವ ಭಾಗದಲ್ಲಿ ಚಳಿ ಇರಲಿದೆ ಹಾಗೂ ಯಾವ ಸ್ಥಳಗಳಲ್ಲಿ ತಾಪಮಾನ ಹೆಚ್ಚಾಗಲಿದೆ ಎನ್ನುವುದನ್ನು ತಿಳಿಯೋಣ.

Rain update: Heavy rain for the next five days in many parts of the country including Karnataka

ಇಂದಿನಿಂದ ಅಂದರೆ ಫೆಬ್ರವರಿ 9ರಿಂದ ಫೆಬ್ರವರಿ 14ರವರೆಗೆ ಅಂದರೆ ಮುಂದಿನ ಐದು ದಿನಗಳ ಕಾಲ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ವರದಿ ನೀಡಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶದಲ್ಲಿ ಫೆಬ್ರವರಿ 9ರಂದು ಮತ್ತು ಒಡಿಶಾದಲ್ಲಿ ಫೆಬ್ರವರಿ 11 ಮತ್ತು 12 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆ ಇದೆ.

ಭಾರತೀಯ ಹವಾಮಾನ ಇಲಾಖೆ (IMD) ಛತ್ತೀಸ್‌ಗಢದಲ್ಲಿ ಫೆಬ್ರವರಿ 10ರಿಂದ 11ರವರೆಗೆ, ಮರಾಠವಾಡದಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 14, ಜಾರ್ಖಂಡ್‌, ಉತ್ತರಪ್ರದೇಶ, ಬಿಹಾರದಲ್ಲಿ ಫೆಬ್ರವರಿ 13ರಿಂದ ಫೆಬ್ರವರಿ 14ರವರೆಗೆ, ಮಹಾರಾಷ್ಟ್ರದಲ್ಲಿ ಫೆಬ್ರವರಿ 9ರಿಂದ ಫೆಬ್ರವರಿ 11ರವರೆಗೆ ಹಾಗೂ ಮಧ್ಯಪ್ರದೇಶದಲ್ಲಿ ಫೆಬ್ರವರಿ 10ರಿಂದ 14ರವರೆಗೆ, ಫೆಬ್ರವರಿ 14 ರಂದು ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಮಳೆಯಾಗಲಿದೆ.

Rain update: Heavy rain for the next five days in many parts of the country including Karnataka

ಚಂಡಮಾರುತದ ಎಚ್ಚರಿಕೆ:

ಮರಾಠವಾಡ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢದಲ್ಲಿ ಫೆಬ್ರವರಿ 11 ರಂದು ಚಂಡಮಾರುತದ ಸೂಚನೆಯನ್ನು ನೀಡಲಾಗಿದೆ. ಅರುಣಾಚಲ ಪ್ರದೇಶ, ಪೂರ್ವ ಅಸ್ಸಾಂನ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲೂ ಮಳೆ:

ಜೊತೆಗೆ ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಮುಂದಿನ 24ಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಪೂರ್ವ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಲಘು ಮಳೆಯಾಗಲಿದ್ದು ಉಳಿದ ಭಾಗದಲ್ಲಿ ಸಹಜ ವಾತಾವರಣ ಇರಲಿದೆ.

ಮಳೆ ಮತ್ತು ಮಂಜು:

ಛತ್ತೀಸ್‌ಗಢ, ಉತ್ತರ ತೆಲಂಗಾಣ, ಮರಾಠವಾಡದ ಹಲವು ಭಾಗಗಳಲ್ಲಿ ಫೆಬ್ರವರಿ 10 ರಿಂದ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಮಿಜೋರಾಂ, ತ್ರಿಪುರಾ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಉತ್ತರ ಮಧ್ಯಪ್ರದೇಶ, ಅಸ್ಸಾಂ, ಮೇಘಾಲಯದ ಹಲವು ಭಾಗಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+