Rain alert meaning: ಐಎಂಡಿ ನೀಡುವ ರೆಡ್ ಅಲರ್ಟ್, ಆರೆಂಜ್ & ಯೆಲ್ಲೋ ಅಲರ್ಟ್‌ಗಳ ಅರ್ಥವೇನು ?
Rain alert meaning: ಕರ್ನಾಟಕದಲ್ಲಿ ಇದೀಗ ಮತ್ತೆ ಮಳೆಯಾರ್ಭಟದ ಆತಂಕ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಪೆಂಗಾಲ್ ಚಂಡಮಾರುತದ ಪ್ರಭಾವದಿಂದ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ನೀಡಿದೆ. ಜೋರು ಮಳೆಯಾದಾಗೆಲ್ಲ ಹವಾಮಾನ ಇಲಾಖೆಯು ಮಳೆ ಅಲರ್ಟ್‌ಗಳನ್ನು ಕೊಡುತ್ತದೆ. ಹಾಗಾಗದೆ, ಆರೆಂಜ್ ಅಲರ್ಟ್, ರೆಡ್ ಅಲರ್ಟ್, ಯೆಲ್ಲೋ ಅಲರ್ಟ್ ಹಾಗೂ ಬ್ಲೂಅಲರ್ಟ್ ಎಂದರೇನು. ಯಾವ ಕಾರಣಕ್ಕೆ ಭಾರತೀಯ ಹವಾಮಾನ ಇಲಾಖೆ ಈ ರೀತಿ ಅಲರ್ಟ್‌ಗಳನ್ನು ಕೊಡುತ್ತದೆ. ಇದರ ಅರ್ಥವೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಮಳೆ ಮುನ್ಸೂಚನೆಗೆ ಸಂಬಂಧಿಸಿದಂತೆ ಭಾರತೀಯ ಹವಾಮಾನ ಇಲಾಖೆಯು ಆಗಾಗ್ಗೆ ವೆದರ್ ಅಲರ್ಟ್‌ಗಳನ್ನು ನೀಡುತ್ತದೆ. ಮಳೆ ಹಾಗೂ ಹವಾಮಾನಕ್ಕೆ ಅನುಗುಣವಾಗಿ ವೆದರ್ ಅಲರ್ಟ್‌ಗಳನ್ನು ನೀಡಲಾಗುತ್ತದೆ. ಮಳೆ ಅಲರ್ಟ್‌ಗಳಲ್ಲಿ ನಾಲ್ಕು ಪ್ರಮುಖ ಅಲರ್ಟ್‌ಗಳಿವೆ. ಅದರಲ್ಲಿ ರೆಡ್ (ಕೆಂಪು) ಅಲರ್ಟ್, ಯೆಲ್ಲೋ (ಹಳದಿ) ಅಲರ್ಟ್, ಆರೆಂಜ್ (ಕಿತ್ತಳೆ) ಅಲರ್ಟ್ ಹಾಗೂ ಗ್ರೀನ್ (ಹಸಿರು) ಹಾಗೂ ಬ್ಲೂ (ನೀಲಿ) ಅಲರ್ಟ್‌ಗಳು ಇವೆ.

ಈ ಅಲರ್ಟ್‌ಗಳಲ್ಲಿ ರೆಡ್ ಅಲರ್ಟ್ ಅನ್ನು ಗಂಭೀರವಾದ ಅಲರ್ಟ್ ಎಂದೇ ಹೇಳಲಾಗುತ್ತದೆ. ಪ್ರತಿ ಅಲರ್ಟ್‌ನ ಅರ್ಥ ಹಾಗೂ ಯಾವ ಸಂದರ್ಭದಲ್ಲಿ ಯಾವ ಅಲರ್ಟ್‌ಗಳನ್ನು ನೀಡಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ರೆಡ್ (Red alert) ಅಲರ್ಟ್: ಹವಾಮಾನ ಇಲಾಖೆ ನೀಡುವ ಅಲರ್ಟ್‌ಗಳಲ್ಲಿ ರೆಡ್ ಅಲರ್ಟ್ ಅನ್ನು ಅತ್ಯಂತ ಗಂಭೀರ ಅಲರ್ಟ್‌ಗಳಲ್ಲಿ ಒಂದು ಎಂದೇ ಹೇಳಲಾಗುತ್ತದೆ. 204.5 ಮಿ.ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ನೀಡಲಾಗುತ್ತದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಯಾವುದೇ ಪ್ರಯಾಣ ಮಾಡುವುದು ಸೂಕ್ತವಲ್ಲ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಸಹ ಇರಲಿದೆ ಎನ್ನುವುದರ ಮುನ್ಸೂಚನೆ ಇದಾಗಿರುತ್ತದೆ. ಅಲ್ಲದೇ ಈ ಸಂದರ್ಭದಲ್ಲಿ ಯಾವುದೇ ಮರಗಳ ಕೆಳಗೆ ಅಥವಾ ಲೈಟ್ ಕಂಬಗಳ ಕೆಳಗೆ ನಿಲ್ಲಲೇ ಬಾರದು. ಇನ್ನು ಈ ಅಲರ್ಟ್ ನೀಡುವ ಸಂದರ್ಭದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುತ್ತದೆ.
ಆರೆಂಜ್ (Orange Alert) ಅಲರ್ಟ್: ರೆಡ್‌ನ ನಂತರದ ಸ್ಥಾನದಲ್ಲಿ ಆರೆಂಜ್ ಅಲರ್ಟ್ ಇದೆ. ಈ ಅಲರ್ಟ್‌ನಲ್ಲೂ ಧಾರಾಕಾರ ಮಳೆಯಾಗುವುದರ ಮುನ್ಸೂಚನೆ ಇದೆ. ಸಾಮಾನ್ಯವಾಗಿ ಆರೆಂಜ್ (ಕಿತ್ತಳೆ) ಅಲರ್ಟ್ ನೀಡುವಾಗ ಯಾವುದೇ ಭಾಗದಲ್ಲಿ 64.5 ಮಿ.ಮೀನಿಂದ 115.5 ಮಿ.ಮೀ ಮಳೆಯಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲೂ ನೀವು ಪ್ರಯಾಣವನ್ನು ತಪ್ಪಿಸುವುದು ಒಳ್ಳೆಯದು.

ಯೆಲ್ಲೋ (Yellow Alert) ಅಲರ್ಟ್: ರೆಡ್ ಹಾಗೂ ಆರೆಂಜ್ ಅಲರ್ಟ್‌ನ ನಂತರದಲ್ಲಿ ಯೆಲ್ಲೋ ಅಲರ್ಟ್ ಬರುತ್ತದೆ. ಆದರೆ, ಇದು ಸಹ ಧಾರಾಕಾರ ಮಳೆಯಾಗುವ ಮುನ್ಸೂಚನೆಯಾಗಿರುತ್ತದೆ. ಯಾವುದೇ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಆ ಸಂದರ್ಭದಲ್ಲಿ ಯೆಲ್ಲೋ (ಹಳದಿ) ಅಲರ್ಟ್ ನೀಡಲಾಗುತ್ತದೆ. ಈ ಅಲರ್ಟ್ ಕೊಟ್ಟರೆ, ಸಾಮಾನ್ಯವಾಗಿ 64.5 ಮಿ.ಮೀಟರ್‌ನಿಂದ 115.5 ಮಿ.ಮೀ ನವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯಾಗಿರುತ್ತದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇದರಲ್ಲಿ ಇರುತ್ತದೆ.
ಗ್ರೀನ್ (Green alert) ಅಲರ್ಟ್: ಇನ್ನು ಹಸಿರು ಅಲರ್ಟ್ ಎಂದರೆ, ನೀವು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಇದು ಸಾಮಾನ್ಯ ಹಾಗೂ ಹಗುರ ಮಳೆಯ ಮುನ್ಸೂಚನೆಯಾಗಿರುತ್ತದೆ. ಅಲ್ಲಲ್ಲಿ ಚದುರಿದಂತೆ ಸಾಮಾನ್ಯ ಪ್ರಮಾಣದಲ್ಲಿ ಮಾತ್ರ ಮಳೆಯಾಗುತ್ತದೆ. ಹೀಗಾಗಿ, ಈ ಅಲರ್ಟ್ ಅನ್ನು ಸಾಮಾನ್ಯವಾಗಿ ಮಳೆಯಾಗುವ ಸಂದರ್ಭದಲ್ಲಿ ನೀಡಲಾಗುತ್ತದೆ.
-
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications