ನಿಮ್ಮ ರೈಲು ಟಿಕೆಟ್‌ನ್ನು ಕುಟುಂಬ ಸದಸ್ಯರಿಗೆ ವರ್ಗಾಯಿಸಬಹುದು!

ಬೆಂಗಳೂರು, ಮೇ 10: ಇಷ್ಟು ದಿನ ರೈಲ್ವೆ ಟಿಕೆಟ್ ಖರೀದಿಸಿ ಒಂದೊಮ್ಮೆ ವಿವಿಧ ಕಾರಣಗಳಿಂದ ರೈಲಿನಲ್ಲಿ ತೆರಳಲು ಸಾಧ್ಯವಾಗದಿದ್ದರೆ, ಹಣ ದಂಡವಾಗುತ್ತಿತ್ತು. ಆದರೆ ಇನ್ನುಮುಂದೆ ಆ ಚಿಂತೆಯಿಲ್ಲ.

ದೃಢಪಟ್ಟಿರುವ ಟಿಕೆಟ್ ಅನ್ನು ಪ್ರಯಾಣಿಕರು ಇನ್ನೊಬ್ಬರಿಗೆ ವರ್ಗಾಯಿಸಲೂ ರೈಲ್ವೆ ಇಲಾಖೆ ಅವಕಾಶ ನೀಡುತ್ತಿದೆ. ಕಳೆದ ಮಾರ್ಚ್‌ನಲ್ಲಿ ಇಲಾಖೆಯು ಈ ಸಂಬಂಧಿ ನೀಡಿಯನ್ನು ಪ್ರಕಟಿಸಿತ್ತು. ಈ ನಿಯಮದ ಪ್ರಕಾರ, ಪ್ರಯಾಣಿಕನು ದೃಢಪಡಿಸಿದ ಟಿಕೆಟ್ ಅನ್ನು ತಂದೆ, ಮಕ್ಕಳು, ಸಂಗಾತಿ ಸೇರಿದಂತೆ ಕುಟುಂಬದ ಇನ್ನೊಬ್ಬ ಸದಸ್ಯರಿಗೆ ವರ್ಗಾಯಿಸಬಹುದು.

Railway ticket transferrable to relatives now

ಜತೆಗೆ ಈ ಬಗ್ಗೆ ರೈಲು ಹೊರಡುವ 24 ಗಂಟೆಗಳ ಮುಂಚೆಯೇ ಮನವಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ , ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯು ತನ್ನ ಟಿಕೆಟ್ ಅನ್ನು ವರ್ಗಾಯಿಸಬಹುದು. ಆದರೆ ವಿದ್ಯಾಸಂಸ್ಥೆಯ ಅನುಮತಿ ಅಗತ್ಯ. ಅದೇ ಸಂಸ್ಥೆಯ ಇನ್ನೊಬ್ಬ ವಿದ್ಯಾರ್ಥಿಗಷ್ಟೇ ಇಲ್ಲಿ ವರ್ಗಾಯಿಸಲು ಅವಕಾಶವಿದೆ. ರೈಲ್ವೆ ಟಿಕೆಟ್‌ಗಳ ಬುಕಿಂಗ್ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿಗಾಗಿ-https://www.irctc.co.in/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+