ಬೆಂಗಳೂರು : ಗ್ರೆನೇಡ್ ಸಿಕ್ಕ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ, ವದಂತಿಗೆ ತೆರೆ

ಬೆಂಗಳೂರು, ಜೂನ್ 03 : ಬೆಂಗಳೂರು ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ಗ್ರೆನೇಡ್ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲ್ವೆ ಇಲಾಖೆ ಗ್ರೆನೇಡ್ ಸಿಕ್ಕ ಬಗ್ಗೆ ಸ್ಪಷ್ಟನೆ ನೀಡಿದ್ದು, ವದಂತಿಗಳಿಗೆ ತೆರೆ ಎಳೆದಿದೆ.

ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಫ್ಲಾಟ್‌ ಫಾರ್ಮ್‌ನಲ್ಲಿ ಪತ್ತೆಯಾದ ಗ್ರೆನೇಡ್‌ಅನ್ನು ಸಮಾಜಘಾತುಕ ಶಕ್ತಿಗಳು ತಂದಿರಲಿಲ್ಲ. ಯೋಧರು ತರಬೇತಿಗಾಗಿ ತೆಗೆದುಕೊಂಡು ಹೋಗುವಾಗ ಒಂದು ಕೆಳಗೆ ಬಿದ್ದಿದೆ ಎಂದು ಇಲಾಖೆ ಹೇಳಿದೆ.

ಮೇ 29ರಂದು ಯೋಧರ ತರಬೇತಿಗಾಗಿ ಕೊಂಡೊಯ್ಯುವಾಗ ಕೆಳಗೆ ಬಿದ್ದ ಗ್ರನೇಡ್‌ ಅನ್ನು ಸಿಬ್ಬಂದಿ ಗಮನಿಸದೇ ಮುಂದೆ ಸಾಗಿದ್ದಾರೆ. ಅದು ಸ್ಫೋಟಗೊಳ್ಳದ ಗ್ರೆನೇಡ್‌ ಎಂದು ಸೇನಾಪಡೆ ಅಧಿಕಾರಿಗಳು ಹೇಳಿದ್ದಾರೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

Railway dept clarification on grenade found in Bengaluru station

ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಫ್ಲಾಟ್‌ ಫಾರ್ಮ್‌ ನಂ 1ರ ಬಳಿ ಗ್ರೆನೇಡ್ ಪತ್ತೆಯಾಗಿತ್ತು. ಇದರಿಂದಾಗಿ ಕೆಲವು ಕಾಲ ರೈಲ್ವೆ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+