ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟೆಕಿಗಳ ಜೊತೆ ರಾಹುಲ್ ಗಾಂಧಿ ದೇಶದ ಮಾತು

|
Google Oneindia Kannada News

ಬೆಂಗಳೂರು, ಮಾರ್ಚ್‌ 18: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಮಾನ್ಯತಾ ಟೆಕ್ ಪಾರ್ಕ್‌ ನಲ್ಲಿ ಟೆಕಿಗಳು ಮತ್ತು ಯುವ ಉದ್ಯಮಿಗಳ ಜೊತೆ ಸಂವಾದ ಮಾಡಿದರು.

ಎಐಸಿಸಿ ವತಿಯಿಂದ ಆಯೋಜಿಸಿದ್ದ ಈ ಸಂವಾದದಲ್ಲಿ ಹಲವರು ಯುವ ತಂತ್ರಜ್ಞರು ಮತ್ತು ಯುವ ಉದ್ಯಮಿಗಳು, ತಮಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಮಾತನಾಡಿದರು.

ಜಿಎಸ್‌ಟಿ, ಏಂಜಲ್ ತೆರಿಗೆ, ಉದ್ಯೋಗ, ನವೋದ್ಯಮಿಗಳಿಗೆ ಅವಕಾಶಗಳು, ನವೋದ್ಯಮಿಗಳಿಗೆ ಸಾಲಸೌಲಭ್ಯ, ಇನ್ನೂ ಹಲವು ವಿಷಯಗಳ ಬಗ್ಗೆ ರಾಹುಲ್ ಅವರಿಗೆ ಪ್ರಶ್ನೆಗಳು ಎದುರಾದವು.

Rahul Gandhi conversation with Bengaluru Techies and entrepreneurs

ಜಿಎಸ್‌ಟಿಯನ್ನು ಸರಳಗೊಳಿಸುವುದು, ನವೋದ್ಯಮಿಗಳಿಗೆ ಸಾಲಸೌಲಭ್ಯ ನೀಡುವುದು, ಕನಿಷ್ಟ ಆರೋಗ್ಯ ಭದ್ರತೆ, ಎಲ್ಲರಿಗೂ ಸಮಬಾಳು, ಸಮಪಾಲು ನೀಡುವುದು ಇನ್ನಷ್ಟು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಭರವಸೆ ನೀಡಿದರು.

ರಾಹುಲ್ ಸಂವಾದ ಕಾರ್ಯಕ್ರಮದ ಹೊರಗೆ ಕೈ-ಬಿಜೆಪಿ ಕಾರ್ಯಕರ್ತರ ಗಲಾಟೆರಾಹುಲ್ ಸಂವಾದ ಕಾರ್ಯಕ್ರಮದ ಹೊರಗೆ ಕೈ-ಬಿಜೆಪಿ ಕಾರ್ಯಕರ್ತರ ಗಲಾಟೆ

ರಾಹುಲ್ ಗಾಂಧಿ ಅವರು ಮಾನ್ಯತಾ ಟೆಕ್ ಪಾರ್ಕ್‌ಗೆ ಆಗಮಿಸುವ ಸಂದರ್ಭದಲ್ಲಿ ಕೆಲವು ಮೋದಿ ಬೆಂಬಲಿಗರು, ಮೋದಿ ಪರ ಘೋಷಣೆಗಳನ್ನು ಕೂಗಿ ಅವರಿಗೆ ಮುಜುಗರ ಪಡಿಸಿದರು. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನ ಕಾರ್ಯಕರ್ತರು 'ಚೌಕಿದಾರ್ ಚೋರ್ ಹೇ' ಎಂದು ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಪ್ರಧಾನಿ ಮಾಡಿ ನಿಮ್ಮ ಕಾವಲುಗಾರನಾಗ್ತೇನೆ ಎಂದು, ಆಗಿದ್ದು ಅಂಬಾನಿ, ಅದಾನಿ ಚೌಕೀದಾರ: ರಾಹುಲ್ ಪ್ರಧಾನಿ ಮಾಡಿ ನಿಮ್ಮ ಕಾವಲುಗಾರನಾಗ್ತೇನೆ ಎಂದು, ಆಗಿದ್ದು ಅಂಬಾನಿ, ಅದಾನಿ ಚೌಕೀದಾರ: ರಾಹುಲ್

English summary
AICC president Rahul Gandhi today interacted with techies and entrepreneurs in Bengaluru's Manyatha tech park. He talked about GST, opportunities to entrepreneurs, and many other things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X