ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ರೋಡ್ ಶೋ: ಬೆಂಗಳೂರಿನಲ್ಲಿ ಇಂದು ಈ ರಸ್ತೆಗಳು ಬಂದ್!
ಬೆಂಗಳೂರಿನಲ್ಲಿ ಇಂದು ಒಂದು ಕಡೆ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರೆ ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಭರ್ಜರಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದೆ. ಭಾನುವಾರ ಸಂಜೆ ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ರೋಡ್ ಶೋ ಹಿನ್ನಲೆಯಲ್ಲಿ ಹಲವು ರಸ್ತೆಗಳನ್ನು ಬಂದ್ ಮಾಡಲಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದೆ. ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಹಳೆ ವಿಮಾನ ರಸ್ತೆ, ಸುರಂಜನ್ ದಾಸ್ ರಸ್ತೆ, ಮಹದೇವಪುರ ಮುಖ್ಯರಸ್ತೆ, ಮಾರತ್ ಹಳ್ಳಿ ಮುಖ್ಯರಸ್ತೆ, ವರ್ತೂರು ಕೋಡಿ ರಸ್ತೆಯಲ್ಲಿ ರೋಡ್ ಶೋ ನಡೆಯಲಿದ್ದು, ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಹೊಂಗಸಂದ್ರ, ಬೊಮ್ಮನಹಳ್ಳಿ ಮುಖ್ಯರಸ್ತೆ, ಬೇಗೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ರೋಡ್ ಶೋ ನಡೆಯಲಿರುವ ಕಾರಣ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ರಸಲ್ ಮಾರ್ಕೆಟ್ ಸ್ಕ್ವೇರ್, ಶಿವಾಜಿನಗರ, ಪೆರಿಯಾರ್ ವೃತ್ತ, ಟ್ಯಾನರಿ ರಸ್ತೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ರೋಡ್ ಶೋ ನಡೆಯಲಿದ್ದು, ಈ ರಸ್ತೆಗಳಲ್ಲಿ ಸಂಚರಿಸದಂತೆ ಸೂಚನೆ ನೀಡಲಾಗಿದೆ.
ಮೋದಿ ರೋಡ್ ಶೋ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದೆ. ನೀಟ್ ಪರೀಕ್ಷೆ ಇರುವ ಕಾರಣ 9.30 ರಿಂದ 11.30 ರವರೆಗೆ ಮಾತ್ರ ರೋಡ್ ಶೋ ನಡೆಸಲು ಅನುಮತಿ ನೀಡಿದೆ. ನ್ಯೂ ತಿಪ್ಪಸಂದ್ರದಿಂದ ರೋಡ್ ಶೋ ಆರಂಭವಾಗಲಿದ್ದು, ಹೆಚ್‌ಎಎಲ್ ಎರಡನೇ ಸ್ಟೇಜ್, 100 ಅಡಿ ರಸ್ತೆ, ಇಎಸ್‌ಐ ಆಸ್ಪತ್ರೆ, ಸಿಎಂಹೆಚ್ ರಸ್ತೆ, ಹಲಸೂರು ಮೆಟ್ರೋ ಸ್ಟೇಷನ್, ಟ್ರಿನಿಟಿ ಸರ್ಕಲ್ ವರೆಗೆ ನಡೆಯಲಿದ್ದು, ಈ ಮಾರ್ಗಗಳನ್ನು ತಪ್ಪಿಸಲು ಕೂಡ ಮನವಿ ಮಾಡಲಾಗಿದೆ.












Click it and Unblock the Notifications