ನೆರೆಹೊರೆಯವರಲ್ಲಿ ಸಂವಹನ ಕಡಿಮೆಯಾಗಿರುವುದು ವಿಷಾದನೀಯ: ನಟಿ ರಾಗಿಣಿ ದ್ವಿವೇದಿ

ಬೆಂಗಳೂರು ಜೂನ್ 30: ಬೆಂಗಳೂರು ನಗರದಲ್ಲಿ ನೆರೆ ಹೊರೆಯವರ ಮಧ್ಯೆ ಸಂವಹನ ಕಡಿಮೆಯಾಗಿದೆ. ಮೊದಲೆಲ್ಲಾ ಎಲ್ಲರ ಮಧ್ಯೆ ನಗುವಿನ ವಿನಿಮಯವಾಗುತ್ತಿತ್ತು. ಆದರೆ ಈಗ ಮುಖ ನೋಡುವುದೇ ಕಡಿಮೆಯಾಗಿದೆ. ಅಲ್ಲದೆ, ಅಪಾರ್ಟ್‍ಮೆಂಟ್ ಗಳಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಇರುವುದನ್ನ ತಮ್ಮ ಘನತೆಯಾಗಿ ತಗೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದು ನಟಿ ರಾಗಿಣಿ ದ್ವಿವೇದಿ ಅಭಿಪ್ರಾಯಪಟ್ಟರು.

ನಗರದ ಇಟ್ಟಮಡುವಿನಲ್ಲಿ ಎನ್ ಕಾರ್ಪ್ ಹಾಗೂ ವಿ2 ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸ್ಕೈವಾಕ್ ಅಪಾರ್ಟ್ ಮೆಂಟ್ ಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು. ನೆರೆಹೊರೆಯವರಲ್ಲಿ ಉತ್ತಮ ಸಂವಹನ ಬೆಳೆಸಿಕೊಳ್ಳಬೇಕು. ಅಕ್ಕ ಪಕ್ಕದವರೊಂದಿಗಿನ ಉತ್ತಮ ಸಂಬಂಧ ಬೆಳೆಸಿಕೊಳ್ಳುವಂತಹ ಪರಿಸರ ನಿರ್ಮಾಣ ಮಾಡುವಂತಹ ಅಪಾರ್ಟಮೆಂಟ್ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ಬಹಳ ಸಂತಸದ ವಿಷಯ ಎಂದರು.

Ragini Dwivedi does bhoomi pooja SKY Walk Apartments at Ittamadu

ಇತ್ತೀಚಿನ ದಿನಗಳಲ್ಲಿ ಸಿನೆಮಾಗಳಲ್ಲಿ ಅವಕಾಶ ಕಡಿಮೆಯಾಗಿದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, 10 ಕೆಟ್ಟ ಸಿನೆಮಾಗಳಿಗಿಂತಾ ಒಂದು ಒಳ್ಳೆಯ ಸಿನೆಮಾಕ್ಕಾಗಿ ಕಾಯವುದು ನನ್ನ ಸ್ಟೈಲ್. ಈಗಿನ ದಿನಗಳಲ್ಲಿ ನಟರು ಇಂತಹ ಒಳ್ಳೆಯ ಅವಕಾಶಕ್ಕಾಗಿ ಕಾಯತ್ತೇವೆ. ಒಳ್ಳೆಯ ಸಿನೆಮಾ ಮಾಡುವುದು ನನ್ನ ಸ್ಟೈಲ್ ಎಂದು ಉತ್ತರಿಸಿದರು.

Ragini Dwivedi does bhoomi pooja SKY Walk Apartments at Ittamadu

ವಿ2 ಹೋಲ್ಡಿಂಗ್ ನ ವ್ಯವಸ್ಥಾಪಕ ನಿರ್ದೇಶಕರಾದ ಪಿ ಎಲ್ ವೆಂಕಟರಾಮ ರೆಡ್ಡಿ ಮಾತನಾಡಿ, ಒಂದು ಎಕರೆಯಲ್ಲಿ ನಿರ್ಮಿಸಲಾಗುತ್ತಿರುವ ಈ ಸ್ಕೈವಾಕ್ ಅಪಾರ್ಟ್‍ಮೆಂಟಿನಲ್ಲಿ ನೆರೆ ಹೊರೆಯವರಲ್ಲಿ ಒಳ್ಳೆಯ ಸಂಹವನ ಬೆಳೆಸುವ ಉದ್ದೇಶದಿಂದ ಡಿಸೈನ್ ಮಾಡಲಾಗಿದೆ. ಶೇಕಡಾ 50 ರಷ್ಟು ಜಾಗದಲ್ಲಿ ಅಪಾರ್ಟ್‍ಮೆಂಟ್ ನಿರ್ಮಿಸುತ್ತಿದ್ದು, ಇನ್ನುಳಿದ ಶೇಕಡಾ 45 ರಷ್ಟು ಜಾಗದಲ್ಲಿ ಮಕ್ಕಳಿಗೆ ಆಟ ಆಡುವ ಜಾಗ, ಸ್ವಿಮ್ಮಿಂಗ್ ಪೂಲ್ ನ್ನು ನಿರ್ಮಿಸಲಾಗತ್ತಿದೆ. ಒಂದು ಫ್ಲಾಟ್ ಗೂ ಇನ್ನೊಂದಕ್ಕೂ ಮಧ್ಯೆ ಒಳ್ಳೆ ಜಾಗವನ್ನು ಬಿಡಲಾಗಿದೆ ಎಂದು ಹೇಳಿದರು.

Ragini Dwivedi does bhoomi pooja SKY Walk Apartments at Ittamadu

ಎನ್ ಕಾರ್ಪ್‍ನ ನವೀನ್ ಮಾತನಾಡಿ, ಎಲ್ಲಾ ಬ್ಯಾಂಕುಗಳಿಂದಲೂ ಸಾಲಸೌಲಭ್ಯ ವನ್ನು ಮಾಡಲಾಗಿದೆ. ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟಿ ದುನಿಯಾ ರಷ್ಮಿ, ಸ್ವರ್ಣಭಾರತಿ ಬ್ಯಾಂಕಿನ ನಿರ್ದೇಶಕರಾದ ರವೀಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+