ಕೊರೊನಾ ಅಲರ್ಟ್: ಮಾಸ್ಕ್ ಬದಲು ಗ್ಲೌಸ್ ಬಳಸಿ ಎಂದ ರಾಗಿಣಿ

ಮುಖಕ್ಕೆ ಮಾಸ್ಕ್ ತೊಡುವುದರಿಂದ ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಬಹುದು ಎಂದು ಅದ್ಹೇಗೆ ಪುಕಾರು ಹಬ್ಬಿತೋ ಗೊತ್ತಿಲ್ಲ. ಆದ್ರೆ, ವಿಶ್ವದಾದ್ಯಂತ ವ್ಯಾಪಕವಾಗಿ ಹಬ್ಬಿರುವ ಕೊರೊನಾ ವೈರಸ್ ಭೀತಿಯಿಂದ ಮಾಸ್ಕ್ ಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ.

ಬೇಡಿಕೆ ಹೆಚ್ಚಾಗಿರುವ ಕಾರಣ, ಎಷ್ಟೋ ಕಡೆ ಮಾಸ್ಕ್ ಗಳಿಗೆ ಕೊರತೆ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಮಾಸ್ಕ್ ಗಳ ಕಳ್ಳತನ ಆಗಿರುವ ಬಗ್ಗೆಯೂ ವರದಿ ಆಗಿದೆ. ಅತ್ತ ಮಾಸ್ಕ್ ಗಳಿಗಾಗಿ ಹಾಹಾಕಾರ ಶುರುವಾಗಿದ್ದರೆ, ಇತ್ತ ''ಮಾಸ್ಕ್ ಬದಲು ಗ್ಲೌಸ್ ಧರಿಸಿ'' ಎಂದು ಕನ್ನಡ ಚಿತ್ರ ನಟಿ ರಾಗಿಣಿ ದ್ವಿವೇದಿ ಟ್ವೀಟ್ ಮಾಡಿದ್ದಾರೆ.

use-gloves-not-masks-advices-kannada-actress-ragini-dwivedi

''ಮಾಸ್ಕ್ ಗಳ ಬದಲು ದಯವಿಟ್ಟು ಎಲ್ಲರೂ ಗ್ಲೌಸ್ ಬಳಸಿ. ಎಲ್ಲರಿಗೂ ಗ್ಲೌಸ್ ಅವಶ್ಯಕ. ನೀವು ಅನಾರೋಗ್ಯಕ್ಕೀಡಾಗಿದ್ದರೆ ಮಾತ್ರ ಮಾಸ್ಕ್ ಬಳಸಿ. ಇಲ್ಲಾಂದ್ರೆ ಮಾಸ್ಕ್ ಗಳ ಅವಶ್ಯಕತೆ ಇಲ್ಲ. ನಾವು ಎಲ್ಲವನ್ನೂ ಮುಟ್ಟುವುದರಿಂದ ನಮ್ಮ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯ'' ಅಂತ ನಟಿ ರಾಗಿಣಿ ದ್ವಿವೇದಿ ಟ್ವೀಟಿಸಿದ್ದಾರೆ.

ರಾಗಿಣಿ ಹೇಳಿದಂತೆ, ಹೆಚ್ಚಿನ ಜನರು ಮಾಸ್ಕ್ ಧರಿಸುವುದರಲ್ಲಿ ಅರ್ಥ ಇಲ್ಲ. ಕೊರೊನಾ ವೈರಸ್ ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ತೊಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಕೂಡ ಸಲಹೆ ನೀಡಿದೆ. ಸೋಂಕು ತಗುಲಿರುವವರು ಮಾತ್ರ ವೈರಸ್ ಹರಡದಂತೆ ತಡೆಯಲು ಮಾಸ್ಕ್ ತೊಟ್ಟರೆ ಸಾಕು ಎಂದು ಆರೋಗ್ಯ ಸಂಸ್ಥೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+