ಕರ್ನಾಟಕದ ರೈತರಿಗೆ ಬರ ಪರಿಹಾರ ನೀಡಿದ ನಂತರವೇ ಚರ್ಚೆ: ಬಿ.ನಾಗೇಂದ್ರ ವಜಾಗೆ ಸದನದಲ್ಲಿ ಬಿಜೆಪಿ ಪಟ್ಟು

ಬೆಂಗಳೂರು: ರಾಜ್ಯದಲ್ಲಿ ಮಳೆ ಮತ್ತೆ ಕಣ್ಮರೆಯಾಗಿದ್ದು, ಬರಗಾಲ ಸ್ಥಿತಿ ಮುಂದುವರಿದಿದೆ. ಹೀಗಿರುವಾಗಿ ಬರಗಾಲ ನಿರ್ವಹಣೆಗೆ ಅನುದಾನ ನೀಡದೆ, ರೈತರಿಗೆ ಪರಿಹಾರ ಕೊಡದೇ ಸದನದಲ್ಲಿ ಹೇಳಿಕೆ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಬರ ಘೋಷಿಸುವವಂತೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಭೀಕರ ಬರಗಾಲದ ಬಗ್ಗೆ ಬಿಜೆಪಿಯಿಂದ ಅಧ್ಯಯನ ಮಾಡಿ ವರದಿ ನೀಡಲಾಗಿದೆ. ನಾನು ಕೂಡ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಅಧ್ಯಯನ ಮಾಡಿದ್ದೆನೆ. ರಾಜ್ಯದಲ್ಲಿ ನೀರಿನ ಕೊರತೆ ಇದ್ದು, ಮೈಸೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ರೈತರು ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲ ಹೆಚ್ಚಿದೆ. ಆದರೂ ರಾಜ್ಯ ಸರ್ಕಾರ ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಇತ್ತ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಸರಿಯಾದ ವಾದ ಸಹ ಮಂಡಿಸಿಲ್ಲ ಎಂದು ದೂರಿದರು. ರೈತರಿಗೆ ಪರಿಹಾರ ನೀಡುವವರೆಗೂ ಚರ್ಚಿಸಲ್ಲ ಎಂದು ಗುಡುಗಿದರು.

R Ashoka

ಡಿಸಿಎಂ ಡಾ.ಜಿ.ಪರಮೇಶ್ವರ್‌ ಈ ಬಗ್ಗೆ ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಪರಿಹಾರ ಬಿಡುಗಡೆ ಮಾಡಿ, ಗೋಶಾಲೆ ಕಟ್ಟಿದ್ದರೆ ಅದಕ್ಕಾಗಿ ಹೇಳಿಕೆ ನೀಡಬಹುದು. ಏನೂ ಮಾಡದೆಯೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ಬಿ.ನಾಗೇಂದ್ರ ವಜಾಗೆ ಪಟ್ಟು

ಸರ್ಕಾರದ ನಡೆ ಕುರಿತು ಜೆಡಿಎಸ್‌ ಜೊತೆಗೂಡಿ ಸದನದಲ್ಲಿ ಚರ್ಚೆ ಮಾಡಲಾಗುವುದು. ಕಳಂಕಿತ ಸಚಿವ ಬಿ.ನಾಗೇಂದ್ರ ಇರುವಾಗ ಸದನದಲ್ಲಿ ಚರ್ಚೆ ನಡೆಯುವುದು ಕಷ್ಟ. ಮೂರು ಸಿಬಿಐ ಹಾಗೂ ಒಂದು ಇಡಿ ಪ್ರಕರಣ ಅವರ ವಿರುದ್ಧವಿದ್ದರೂ ಅವರನ್ನು ಸಂಪುಟದಿಂದ ಕೈ ಬಿಡುತ್ತಿಲ್ಲ. ಈ ವಿಚಾರವನ್ನು ಮೊದಲಿಗೆ ತೆಗೆದುಕೊಂಡು ನಂತರ ಬರಗಾಲ ವಿಷಯ ಚರ್ಚೆ ಮಾಡುತ್ತೇವೆ. ನಾಗೇಂದ್ರ ಅವರನ್ನು ವಜಾ ಮಾಡುವವರೆಗೂ ನಾವು ಸದನದಲ್ಲಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕೆಪಿಎಸ್‌ ಸಿ ಹಗರಣ

ಕೆಪಿಎಸ್‌ಸಿ ಹಗರಣದ ಬಗ್ಗೆ ಈ ಹಿಂದೆ ಸದನದಲ್ಲಿ ಎರಡು ದಿನ ಚರ್ಚೆ ಮಾಡಲಾಗಿತ್ತು. ಉತ್ತರ ಪ್ರದೇಶದಲ್ಲಿ ಎಂಟು ಸದಸ್ಯರಿದ್ದರೆ, ನಮ್ಮಲ್ಲಿ ಸುಮಾರು 18 ಸದಸ್ಯರಿದ್ದಾರೆ. ಸರ್ಕಾರದಿಂದ ಚೀಟಿ ಕಳುಹಿಸಿದವರನ್ನು ನೇಮಕ ಮಾಡಲಾಗುತ್ತದೆ. ಪಶುವೈದ್ಯ, ಪೊಲೀಸ್‌ ಇಲಾಖೆ ಮೊದಲಾದ ಪರೀಕ್ಷೆಗಳಲ್ಲಿ ದೊಡ್ಡ ಅಕ್ರಮ ನಡೆದಿದೆ. ಅಧ್ಯಕ್ಷರು ಹಾಗೂ ಅವರ ತಂಡ ನೂರಾರು ಕೋಟಿ ರೂ. ಲೂಟಿ ಮಾಡಿದೆ. ಇಡಿ ದಾಳಿಯಿಂದ ತಪ್ಪಿತಸ್ಥರ ಪತ್ತೆಯಾಗಲಿದೆ.

ಕಾಂಗ್ರೆಸ್‌ ಸರ್ಕಾರ ಯಾರದ್ದೋ ಮುಲಾಜಿನಲ್ಲಿ ಇದ್ದಂತೆ ಕಾಣುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸದಸ್ಯರ ಸಂಖ್ಯೆ ಕಡಿಮೆ ಮಾಡುತ್ತೇನೆಂದರೂ ಅದು ಜಾರಿಯಾಗಲೇ ಇಲ್ಲ. ಎಸ್‌ಐಟಿ ತನಿಖೆ ಮಾಡಿ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ. ಇದನ್ನು ಸಿಬಿಐ ತನಿಖೆ ಮಾಡಿದ್ದರೆ ನಿಜಾಂಶ ಪತ್ತೆಯಾಗುತ್ತಿತ್ತು. ಖಜಾನೆಗೆ ಹಣವನ್ನು ಮರಳಿ ತರುವ ಕೆಲಸವನ್ನು ಇಡಿ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ರಾಜಧಾನಿ ಸಮಸ್ಯೆ ನಿವಾರಿಸಿ

ಬೆಂಗಳೂರಿನಲ್ಲಿರುವ ಸಮಸ್ಯೆಗಳನ್ನು ಮೊದಲು ನಿವಾರಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ನಂತರ ಬೇಕಿದ್ದರೆ ಬೇರೆ ದೇಶದ ಜನರಿಗೆ ಇಲ್ಲಿ ಅನುಕೂಲ ಕಲ್ಪಿಸಬಹುದು. ಬೆಂಗಳೂರಿನಲ್ಲಿ ಅನೇಕ ಸವಾಲುಗಳಿವೆ. ಗುಂಡಿ ಇರುವ ರಸ್ತೆಗಳು, ಕಸ ತುಂಬಿದ ರಸ್ತೆಗಳು ಮೊದಲಾದ ಸಮಸ್ಯೆಗಳಿವೆ. ಸಚಿವ ಕೃಷ್ಣ ಬೈರೇಗೌಡರು ರಸ್ತೆ ಬದಿ ನಿಲ್ಲಿಸಿದ ಹಳೆ ಕಾರುಗಳನ್ನು ತೆಗೆಸುತ್ತೇವೆ ಎಂದಿದ್ದರು. ಈಗ ಲಕ್ಷಾಂತರ ಕಾರುಗಳು ಅಲ್ಲೇ ಇವೆ. ಪಾದಚಾರಿ ಮಾರ್ಗದ ಒತ್ತುವರಿ ತೆರವು ಮಾಡುತ್ತೇನೆ ಎಂದಿದ್ದರು. ಈಗ ನೋಡಿದರೆ ಮತ್ತೆ ಒತ್ತುವರಿ ನಡೆದಿದೆ.

ಸ್ವಚ್ಛ ಬೆಂಗಳೂರು ಎಂಬ ಅಭಿಯಾನ ನಡೆಯುತ್ತಿದೆ. ಕಸ ಇಲ್ಲದ ಒಂದು ರಸ್ತೆಯನ್ನು ತೋರಿಸಿದರೆ ನಾನೇ ಸರ್ಕಾರಕ್ಕೆ ಪ್ರಶಸ್ತಿ ಕೊಡುತ್ತೇನೆ. ಬೆಂಗಳೂರನ್ನು ಸುಂದರ ಮಾಡುತ್ತೇವೆ ಎಂದರೆ, ಮೊದಲು ಇಲ್ಲಿನ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು. ಹೊರಗಿನ ಜನರಿಗೆ ಅನುಕೂಲ ಕಲ್ಪಿಸುವುದು ಬೇರೆ ಮಾತು. ಇಂತಹ ಕಾರ್ಯಗಳನ್ನು ಸರ್ಕಾರ ಮಾಡಿದರೆ ನಾನು ಕೂಡ ಬೆಂಬಲಿಸುತ್ತೇನೆ ಎಂದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಉಪಸಭಾಧ್ಯಕ್ಷ ಸ್ಥಾನ

ಮಂಕಾಳ ವೈದ್ಯರ ಹೆಸರು ಮೊದಲಿಗೆ ಸಚಿವರ ಪಟ್ಟಿಯಲ್ಲಿತ್ತು. ಅವರಿಗೆ ಸರಿಯಾಗಿ ಮೀನು ಸಿಗದೆ ದೋಣಿ ಮುಳುಗಿದೆ. ಆದ್ದರಿಂದ ಅವರು ಉಪಸಭಾಧ್ಯಕ್ಷರಾಗಿದ್ದಾರೆ. ಸಭಾಧ್ಯಕ್ಷರು ಆಗಾಗ ತಮ್ಮ ಅವಕಾಶವನ್ನು ಉಪಸಭಾಧ್ಯಕ್ಷರಿಗೆ ನೀಡಿ ತರಬೇತಿ ಕೊಡಬೇಕು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಎಲ್ಲರನ್ನೂ ಬೆಳೆಸುತ್ತಿದ್ದರು. ಅದೇ ರೀತಿ ಮಂಕಾಳ ವೈದ್ಯರಿಗೂ ತರಬೇತಿ ಕೊಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಲ್ಲರಿಗೂ ತುಪ್ಪ ಸವರುತ್ತಿದ್ದಾರೆ. ಸ್ಪೀಕರ್‌ ಕೂಡ ಮುಂದೆ ಸಿಎಂ ಆಗುತ್ತಾರೆ ಎನ್ನುತ್ತಿದ್ದಾರೆ. ಕೊನೆಗೆ ಅವರ ಕೆಲಸವನ್ನು ಮಾಡಿಕೊಳ್ಳುತ್ತಾರೆ. ಆ ಚಾಕಚಕ್ಯತೆ ಅವರಿಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರೈಲು ತಪ್ಪಿಸಿಕೊಂಡು ಅರ್ಧ ದಾರಿಯಲ್ಲಿ ರೈಲು ಹತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಯೋಜನೆಗಳನ್ನು ಜಾರಿ ಮಾಡುವುದು, ಎಲ್ಲ ಶಾಸಕರನ್ನು ಒಂದಾಗಿ ಕರೆದುಕೊಂಡು ಹೋಗುವುದು ಸವಾಲಿನ ಕೆಲಸ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+