Puneeth Rajkumar: ಅರ್ಧ ಕರ್ನಾಟಕದಲ್ಲಿ 'ಹೃದಯಜ್ಯೋತಿ' ಆರೋಗ್ಯ ಸೌಲಭ್ಯ ಯಶಸ್ವಿ ಜಾರಿ
ಬೆಂಗಳೂರು, ಜೂನ್ 27: ಕೋವಿಡ್ ಪಿಡುಗಿನ ಬಳಿಕ ಹೆಚ್ಚಾಗುತ್ತಿರುವ ಹೃದಯಾಘಾತ ತಡೆಯುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಜನ ಜೀವ ಉಳಿಸುವ 'ಹೃದಯಜ್ಯೋತಿ' ಯೋಜನೆ ಜಾರಿಗೊಳಿಸಿತ್ತು. ಅದರ ಭಾಗವಾಗಿ ಅರ್ಧ ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ.
ಹೌದು, ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಅಭಿವೃದ್ಧಿಯ ಪಥದಲ್ಲಿ ಗ್ಯಾರಂಟಿ ಸರ್ಕಾರ ಸಾಗುತ್ತಿದೆ ಹೃದಯಾಘಾತದಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ 'ಹೃದಯಜ್ಯೋತಿ ಯೋಜನೆ'ಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಲಾಗಿದೆ.

ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ ಈಗಾಗಲೇ ಕರ್ನಾಟಕದ 15 ಜಿಲ್ಲೆಗಳ 45 ಆಸ್ಪತ್ರೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಇಲ್ಲಿ ತುರ್ತು ಹೃದಯಾಘಾತದಂತಹ ಸಂದರ್ಭದಲ್ಲಿ ಗೊಲ್ಡನ್ ಹವರ್‌ನಲ್ಲಿ ಚಿಕಿತ್ಸೆ ನೀಡಲು ಈ ಹೃದಯಜ್ಯೋತಿ ಕೇಂದ್ರ ಮಹತ್ವದ ಕಾರ್ಯ ಮಾಡುತ್ತಿದೆ. ಇಲ್ಲೆಲ್ಲ ಅಗತ್ಯ ವೈದ್ಯಕೀಯ ಸೌಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ.
15 ಜಿಲ್ಲೆಗಳ 41 ಆಸ್ಪತ್ರೆಗಳಿಗೆ ವಿಸ್ತರಣೆ ಶೀಘ್ರ
ಸದ್ಯ ಅರ್ಧ ರಾಜ್ಯಗಳಲ್ಲಿ ಈ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಅಂದರೆ ಎರಡನೇ ಹಂತದಲ್ಲಿ ರಾಜ್ಯದಲ್ಲಿ ಉಳಿದ 15 ಜಿಲ್ಲೆಗಳ 41 ಆಸ್ಪತ್ರೆಗಳಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಂತಹ ಪ್ರಕರಣಗಳು ಅಧಿಕವಾಗಿ ವರದಿ ಆಗುತ್ತಿವೆ. ಹದಿಹರೆಯದವರಲ್ಲೂ ಅದರಲ್ಲೂ 40ವರ್ಷ ವಯಸ್ಸಿಗಿಂತಲೂ ಕಡಿಮೆ ವಯೋಮಾನದವರಲ್ಲೂ ಹೃದಯಾಘಾತದಂತಹ ಸಮಸ್ಯೆ ಕಂಡು ಬರುತ್ತಿದೆ. ಈ ಸಂಬಂಧ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದೇ ವಿಚಾರವಾಗಿಯೇ ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ ಸ್ಮರಣಾರ್ಥ ಅವರ ಹೆಸರಿನಲ್ಲಿ ಜಿಲ್ಲೆಗಳಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ 'ಹೃದಯ ಜ್ಯೋತಿ ಕೇಂದ್ರ' ಸ್ಥಾಪಿಸಲು ನಿರ್ಧರಿಸಲಾಯಿತು.

50 ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ
ಸರ್ಕಾರದ ಈ ಯೋಜನೆಯಡಿ ಹೃದಯಜ್ಯೋತಿ ಆರೋಗ್ಯ ಸೌಲಭ್ಯ ರಾಜ್ಯದ 50 ಖಾಸಗಿ ಆಸ್ಪತ್ರೆಗಳಲ್ಲಿ ಜಾರಿಗೆ ಬರಲಿದೆ. ಸಾಮಾಜಿಕವಾಗಿ, ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿ, ಯುವ ಸಮೂಹಕ್ಕೆ ಸ್ಪೂರ್ತಿಯಾದ ಅಪ್ಪು ಅವರನ್ನ ಹೆಸರನ್ನು ಈ ಇಡಲು ನಿರ್ಧರಿಸಿದ ಸರ್ಕಾರ 'ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ' ಸೇವೆ ರಾಜ್ಯದ ಆಸ್ಪತ್ರೆಗಳಲ್ಲಿ ತೆರೆಯಲು ನಿರ್ಧರಿಸಿತು. ಈ ಯೋಜನೆ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ.












Click it and Unblock the Notifications