ಬೆಂಗಳೂರು: ಜನವರಿ 18 ಮತ್ತು 22 ಪೋಲಿಯೋ ದಿನ

ಬೆಂಗಳೂರು, ಜ. 15 : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನವರಿ 18 ಮತ್ತು 22 ರಂದು ನಗರದ 11.2 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಬಿಬಿಎಂಪಿ ಸಜ್ಜಾಗಿದೆ.

ಬೆಂಗಳೂರು, ಜ. 15 : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನವರಿ 18 ಮತ್ತು 22 ರಂದು ನಗರದ 11.2 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಬಿಬಿಎಂಪಿ ಸಜ್ಜಾಗಿದೆ.

ರಾಷ್ಟ್ರ ಪೊಲಿಯೋ ಮುಕ್ತ ಎಂದು ಹೇಳಲಾಗಿದ್ದರೂ ನೆರೆಯ ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ರೋಗ ಕಂಡುಬಂದಿರುವುದರಿಂದ ದೇಶಾದ್ಯಂತ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಬಿಬಿಎಂಪಿ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಯಾಗಿ ನಗರದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮೆಯರ್ ಶಾಂತಕುಮಾರಿ ತಿಳಿಸಿದ್ದಾರೆ.

bengaluru

ಬಿಬಿಎಂಪಿ ಆರೋಗ್ಯ ಇಲಾಖೆ ಮತ್ತು ರೋಟರಿಯ ಸ್ವಯಂ ಸೇವಕರು ಸೇರಿದಂತೆ 16 ಸಾವಿರ ಕಾರ್ಯಕರ್ತರು ಪೋಲೀಯೋ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪೂರ್ವಭಾವಿಯಾಗಿ ಜನವರಿ 16 ರಂದು ಜಾಗೃತಿ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಎಷ್ಟೇ ಸಾರಿ ಲಸಿಕೆ ಹಾಕಿಸಿದ್ದರೂ 5 ವರ್ಷದ ಒಳಗಿನ ಮಕ್ಕಳಿಗೆ ಇನ್ನೊಮ್ಮೆ ಹಾಕಿಸಬೇಕು. ಎಂಜಿ ರಸ್ತೆಯಿಂದ ಬಿಬಿಎಂಪಿ ಕಚೇರಿವರೆಗೆ ಜಾಗೃತಿ ಜಾಥಾ ನಡೆಯಲಿದೆ ಎಂದು ತಿಳಿಸಿದರು.

ನಗರದ ಎಲ್ಲ ದೊಡ್ಡ ಆಸ್ಪತ್ರೆಗಳು ಸೇರಿ, ಚಿಕ್ಕ ಕ್ಲಿನಿಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಡಿಕಲ್ ಶಾಪ್ ಸೇರಿದಂತೆ 3390 ಕಡೆ ಪೊಲಿಯೋ ಹನಿ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+