Get Updates
Get notified of breaking news, exclusive insights, and must-see stories!

ಪಾರ್ಕ್‌ನಲ್ಲಿ ಭದ್ರತೆ, ಮೂಲಸೌಕರ್ಯ ಒದಗಿಸಿ; ಬಿಬಿಎಂಪಿಗೆ ಜನರ ಆಗ್ರಹ

ಬೆಂಗಳೂರು ಜುಲೈ 17: ಬೆಂಗಳೂರಿನ ಉದ್ಯಾನವನಗಳಿಗೆ ಸಾರ್ವಜನಿಕರ ಪ್ರವೇಶ ಸಮಯ ಮಾರ್ಪಾಡು ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಾರ್ವಜನಿಕರು ಉದ್ಯಾನಗಳಲ್ಲಿ ಸೂಕ್ತ ಭದ್ರತೆ, ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಈ ಮೊದಲು ಬೆಳಗ್ಗೆ 5ಗಂಟೆಯಿಂದ 10ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8ಗಂಟೆ ವರಗೆ ಉದ್ಯಾನಗಳಿಗೆ ಪ್ರವೇಶ ನೀಡಲಾಗಿತ್ತು. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಗುರುವಾರ ಬಿಬಿಎಂಪಿ ಹೊಸದಾಗಿ ಆದೇಶ ನೀಡಿದೆ. ಕೆಲ ಮಾರ್ಪಾಡು ಮಾಡಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8ಗಂಟೆ ವರಗೆ ಉದ್ಯಾನಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಉದ್ಯಾನ ನಿರ್ವಹಣೆಗೆ ಸಮಯದ ನಿಗದಿ ಪಡಿಸಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಸಮಯ ಬದಲಾವಣೆ ಸಂಬಂಧ ಉದ್ಯಾನಗಳ ಮುಂದೆ ಯಾವುದೇ ನಾಮಫಲಕ ಹಾಕದಿರುವುದಕ್ಕೆ ಸಾರ್ವಜನಿಕರು ಬೇಸರಕ್ಕೆ ಕಾರಣವಾಗಿದೆ ಎಂದು ಮಲ್ಲೇಶ್ವರಂ ಸ್ವಾಭಿಮಾನ ಸಂಘದ ಅಧ್ಯಕ್ಷೆ ನವೀನಾ ಶ್ರೀಧರ್ ತಿಳಿಸಿದ್ದಾರೆ.

Public urge The BBMP TO provide Proper security and infrastructure in Parks

ಸಾಮಾನ್ಯವಾಗಿ ಹಿರಿಯ ನಾಗರಿಕರು ಬೆಳಗ್ಗೆ 10 ಗಂಟೆ ನಂತರವೇ ಉದ್ಯಾನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅವರಿಗೆ ಬೆಳ್ಳಂಬೆಳಗ್ಗೆ ಚಳಿಯಲ್ಲಿ ಎದ್ದು ಉದ್ಯಾನಕ್ಕೆ ಬರಲು ಆಗದು. ಅಂಥವರಿಗೆ ಬಿಬಿಎಂಪಿ ಹೊಸ ಆದೇಶದಿಂದ ಕಿರಿ-ಕಿರಿ ಆಗಲಿದೆ. ನಿರ್ವಹಣೆಗೆ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಿಗದಿ ಮಾಡಬಹುದಲ್ಲವೇ? ಎಂದು ಅವರು ಹೇಳಿದ್ದಾರೆ.

ಮೂಲಸೌಕರ್ಯ, ಭದ್ರತೆ ಒದಗಿಸಿ; ಬಿಬಿಎಂಪಿ ದಿನವೀಡಿ ಉದ್ಯಾನ ಪ್ರವೇಶಕ್ಕೆ ಅನುಮತಿ ಏನೋ ನೀಡಿದೆ. ಆದರೆ ಕೆಲವು ಉದ್ಯಾನಗಳಲ್ಲಿ ಶೌಚಾಯಗಳು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಹೆಣ್ಣುಮಕ್ಕಳು, ಹಿರಿಯ ನಾಗರಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಜತೆಗೆ ಸೂಕ್ತ ಭದ್ರತೆ ಒದಗಿಸಬೇಕು. ಸಮಯ ಬದಲಾವಣೆ ಕುರಿತು ಆಯಾ ಉದ್ಯಾನಗಳ ಮುಂದೆ ನಾಮಫಲಕ ಅಳವಡಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Public urge The BBMP TO provide Proper security and infrastructure in Parks

ವಿದ್ಯಾರಣ್ಯಪುರ ನಿವಾಸಿಯೊಬ್ಬರು ಈ ಕುರಿತ ಮಾತನಾಡಿ, ಬಿಬಿಎಂಪಿ ಉದ್ಯಾನಗಳ ಪ್ರವೇಶ ನಿರ್ಬಂಧ ಇಲ್ಲವೇ ಪ್ರವೇಶ ಸಮಯ ಬದಲಾವಣೆ ಸಂದರ್ಭದಲ್ಲಿ ಉದ್ಯಾನಗಳ ಸುತ್ತಮುತ್ತಲಿನ ನಾಗರಿಕರನ್ನು, ಪಾಲಿಕೆ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಜನರಿಗೆ ಅಗತ್ಯವಾದದನ್ನು ನೀಡುವಲ್ಲಿ ಅಥವಾ ಕೆಲವು ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ವಿಫಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ ಉದ್ಯಾನಗಳಲ್ಲಿ ಹಾಲಿ ಸೌಲಭ್ಯಗಳು, ಸಿಸಿಟಿವಿಗಳು ಉತ್ತಮ ಸ್ಥಿತಿಯಲ್ಲಿಲ್ಲ. ಪ್ರವೇಶದ ಸಮಯ ವಿಸ್ತರಣೆಯಿಂದಾಗಿ ಉದ್ಯಾನಗಳಲ್ಲಿನ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾರು ಸಿದ್ದರಿಲ್ಲ ಎಂದು ವೈಯಾಲಿಕಾವೆಲ್ ನಿವಾಸಿ ದೂರಿದರು.

ವಸತಿ ಪ್ರದೇಶ ಬಳಿ ಉದ್ಯಾನಕ್ಕೆ ಸಿಸಿಟಿವಿ ಬೇಕಿಲ್ಲ; ಪಾಲಿಕೆ ತೋಟಗಾರಿಕೆ ಉಪನಿರ್ದೇಶಕ ಚಂದ್ರಶೇಖರ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 1,118 ಉದ್ಯಾನಗಳಿದ್ದು, ನಿರ್ವಹಣೆಗೆ ವಾರ್ಷಿಕ ಸುಮಾರು 6-7 ಕೋಟಿ ವೆಚ್ಚವಾಗುತ್ತದೆ. ವಾರ್ಡ್‌ವಾರು ಟೆಂಡರ್ ಕರೆದು ಉದ್ಯಾನ ನಿರ್ವಹಿಸಲಾಗುತ್ತಿದೆ.

ವಸತಿ ಪ್ರದೇಶಗಳಲ್ಲಿನ ಉದ್ಯಾನಗಳಲ್ಲಿ ಸಿಸಿಟಿವಿ ಅಗತ್ಯ ವಿಲ್ಲ. ದೂರದ ಉದ್ಯಾನಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಮೂಲಸೌಕರ್ಯ ಇನ್ನಿತರ ವ್ಯವಸ್ಥೆಗಳು ಸುಧಾರಣೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+