ಪಿಎಸ್‌ಐ ನೇಮಕಾತಿ ಅಕ್ರಮ: ಮಾಗಡಿಯೋರು ಗಂಡಸ್ರು, ರಾಮನಗರದವ್ರು ಹೆಂಗಸ್ರು..
ಬೆಂಗಳೂರು ಮೇ2 : ಪಿಎಸ್ ಐ ನೇಮಕಾತಿ ಅಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿಯನ್ನು ನಡೆಸಿದ್ದಾರೆ. ಪರೀಕ್ಷೆಯಲ್ಲಿ ಬೆಂಗಳೂರು ಮೂಲದ ಪ್ರಭಾವಿ ಸಚಿವ ಕೈವಾಡವಿದೆ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಸಚಿವ ಅಶ್ವಥ್ ನಾರಾಯಣ್ ಹೆಸರನ್ನು ಹೇಳದೇ ನಾವೆಲ್ಲಾ ಗಂಡಸರಲ್ಲ, ನಾವು ಹೆಂಗಸರೇ ಎಂದು ಪರೋಕ್ಷವಾಗಿ ಕುಟುಕಿದ್ದಾರೆೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದೇನು..?
ನಮಗೆ ಮಾಹಿತಿ ಇರೋ ಪ್ರಕಾರ ಮಾಗಡಿಯ ಕೆಲವು ಅಭ್ಯರ್ಥಿಗಳಿಗೆ ಸಮಸ್ಯೆ ಆಗಿದೆ. ಅದರಲೊಬ್ಬರ ತಂದೆಗೆ ಪಾರ್ಶ್ವವಾಯು ಆಗಿದೆ. ಮಂತ್ರಿಗಳೇ ಈ ವಿಚಾರ ತನಿಖೆಗೆ ಬಂದಾಗ ಮಂತ್ರಿಗಳೇ ಫೋನ್ ಮಾಡಿ ನಿಲ್ಲಿಸಿದ್ದಾರೆ ಅಂತಾ ಮಾಹಿತಿ ಇದೆ. ತನಿಖೆ ಪೂರ್ತಿ ಆಗದೇ ಪರೀಕ್ಷೆ ನಿಲ್ಲಿಸಿದ್ದಾರೆ. ಸಂಪೂರ್ಣ ಪ್ರಕರಣ ಲಿಟಿಗೇಷನ್ ಅತ್ತ ಸಾಗಿತ್ತು, ಹೀಗಾಗಿ ಪರೀಕ್ಷೆ ನಿಲ್ಲಿಸಿದ್ದಾರೆ. ಡಿಜಿ ಹಾಗೂ ಗೃಹ ಸಚಿವರು ಬೇರೆ ಬೇರೆ ಮಾಹಿತಿ ನೀಡಿದ್ದಾರೆ. ನನಗೆ ಮಾಹಿತಿ ಇರುವ ಪ್ರಕಾರ ಕೆಲವರ ಹೆಸರು ತನಿಖೆ ವೇಳೆ ಗೊತ್ತಾಗಿದೆ. ಕೆಲವರು ನನಗೆ ಫೋನ್ ಮಾಡಿ ಪಾಪಾ ಅವರು ಸಿಎಂ ಆಗಿ ಬಿಡ್ತಾ ಇದ್ದರು. ನೀವು ಅವರ ಹೆಸರು ಹೇಳಿ ಹಾಳು ಮಾಡ್ತಾ ಇದಿರಾ ಅಂತಾ ಬಿಜೆಪಿಯವರೇ ಹೇಳ್ತಾ ಇದಾರೆ. ಅವರು ಸಿಎಂ ರೇಸ್ ನಲ್ಲಿ ಇದಾರೆ ಅಂತಾ ಕೆಲವರು ಬಿಜೆಪಿಯವರೇ ಹೇಳ್ತಾ ಇದಾರೆ ಎಂದು ಸಚಿವ ಅಶ್ವಥ್ ನಾರಾಯಣ ಹೆಸರನ್ನು ಹೇಳದೇ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ನಮಗೆ ಭಯ ಆಗಿದೆ, ಗಡಗಡ ನಡುತ್ತಿದ್ದೇವೆ!
ಸಿಎಂ ನಿಸ್ಪಕ್ಷಪಾತ ತನಿಖೆ ನಡೆಸಲು ಮುಂದಾಗಬೇಕು. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ ಅಂತಾ ನಾನು ಹೇಳಲ್ಲ. ಸಿಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಅದು ನನಗೆ ಚೆನ್ನಾಗಿ ಗೊತ್ತಿದೆ. ಆದ್ರೆ ಸಿಎಂ ಅವರ ಸಚಿವರ ರಕ್ಷಣೆ ಮಾಡಬಾರದು. ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ, ಅಕ್ರಮದಲ್ಲಿರುವ ಒಬ್ಬರನ್ನ ಪೊಲೀಸರಿಂದ ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ. ಯಾರು ಕರೆ ಮಾಡಿದ್ದು, ಏಕೆ ಮಾಡ್ತಿದ್ದಾರೆ, ಅವರ ಪಾತ್ರ ಏನು ತನಿಖೆ ನಡೆಸಲಿ. ಭ್ರಷ್ಟಾಚಾರವನ್ನ ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಅದು ಹೊರಗೆ ಬಂದೇ ಬರುತ್ತೆ. ನಾನು ಹೆಸರು ಹೇಳಲ್ಲ, ನನಗೆ ಭಯ ಆಗುತ್ತಿದೆ. ನಾವೆಲ್ಲ ಗಡಗಡ ನಡುಗುತ್ತಿದ್ದೇವೆ. ನಾವೆಲ್ಲ ಗಂಡಸರಲ್ಲ. ನಾವು ಹೆಂಗಸರೇ. ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್.
ರಾಮನಗರದ ವೇದಿಕೆಯಲ್ಲಿ ಶುರುವಾಗಿದ್ದ ಗಂಡಸುತನದ ವಾಗ್ಯುದ್ಧ.
ರಾಮನಗರದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ವೇಳೆಯಲ್ಲಿ ಡಿಕೆ ಸುರೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಅಶ್ವಥ್ ನಾರಾಯಣ ನಡುವೆ ಸಿಎಂ ಎದುರೇ ಕೈ ಕೈ ಮಿಲಾಯಿಸುವ ಹಂತಕ್ಕೆ ಮಾತಿನ ಯುದ್ಧ ನಡೆದಿತ್ತು. ಈ ವೇದಿಕೆಯಲ್ಲಿಯೇ ಅಶ್ವಥ್ ನಾರಾಯಣ ಗಂಡಸುತನದ ಸವಾಲನ್ನು ಹಾಕಿದ್ದರು. ಇದೀಗ ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಪ್ರಭಾವಿ ಸಚಿವರ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಎಲ್ಲಿಯೂ ಅಶ್ವಥ್ ನಾರಾಯಣರವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಪರೋಕ್ಷವಾಗಿಯೇ ಸಚಿವ ಅಶ್ವಥ್ ನಾರಾಯಣರವರಿಗೆ ಗಂಡಸ್ಥನ ಹಳೇಯ ಮಾತುಗಳನ್ನು ನೆನಪಿಸುತ್ತಾ ವಾಗ್ದಾಳಿಯನ್ನು ನಡೆಸಿದ್ದಲ್ಲದೇ. ಪಿಎಸ್ ಐ ಅಕ್ರಮ ನೇಮಕಾತಿಯಲ್ಲಿ ಪ್ರಭಾವಿ ಸಚಿವರ ಸಹೋದರನ ಕೈವಾಡ ಶಂಕೆಯ ಹಿನ್ನೆಲೆಯಲ್ಲಿ ವಾಗ್ದಾಳಿಯನ್ನು ನಡೆಸಿದ್ದಾರೆ.












Click it and Unblock the Notifications