'ನೀನೇ ಬಂದು ಗೌರವಯುತವಾಗಿ ಶರಣಾಗು': ಆರೋಪಿಗೆ ಬೇಡಿಕೊಂಡ ಹೋಂ ಮಿನಿಸ್ಟರ್!

ಮಾನ್ಯ ಗೃಹ ಸಚಿವರೇ , ಕರ್ನಾಟಕ ಪೊಲೀಸರಿಗೇ ಸರಿಯಾದ ಸ್ವಾತಂತ್ರ್ಯ ನೀಡಿ. ಆ ದಿವ್ಯಾ ಹಾಗರಗಿ ಅದ್ಯಾವ ಬಿಲದಲ್ಲಿ ಹೊಕ್ಕಿದ್ರು ಹಿಡಿದು ಹೊರೆಗೆ ಎಳೆದು ಬಂದು ಬಿಡ್ತಾರೆ. ಕಾನೂನಾತ್ಮಕವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಗೊತ್ತು. ದಿವ್ಯಾ ಹಾಗರಗಿ ಅಂಡ್ ಪಟಾಲಂ ಅನ್ನು ಆಕೆಗೆ ಅಕ್ರಮ ಎಸಗಲು ಸಹಕಾರವನ್ನು ನೀಡಿದ್ದ, ನೀಡುತ್ತಿರೋ ರಾಜಕೀಯ ಕಾಣದ ಕೈಗಳಿಗೆ ಬೇಡಿ ಹಾಕೋದು ಸಹ ಕರ್ನಾಟಕ ಪೊಲೀಸರಿಗೆ ಗೊತ್ತಿದೆ. ದಿವ್ಯಾ ಹಾಗರಗಿ ಅನ್ನೋ ಆರೋಪಿಗಾಗಿ ಶರಣಾಗುವಂತೆ ಹೇಳಿ ಕರ್ನಾಟಕ ಪೊಲೀಸರ ಮಾರ್ಯಾದೆಯನ್ನು ಕಳೆಯಬೇಡಿ.

"ಗೃಹ ಸಚಿವ ಆರಗ ಜ್ಞಾನೇಂದ್ರರರು ಎಲ್ಲವೂ ತನಿಖೆ ಮಾಡಲು ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ನಾನೇ ಸ್ವತಃ ಈ ಬಗ್ಗೆ ತೀರ್ಮಾನ ಮಾಡಿ, ಸಿಎಂ ಗಮನಕ್ಕೆ ತಂದು ತನಿಖೆಗೆ ಆದೇಶಿಸಲಾಗಿದೆ. ಹಣಕ್ಕೆ ಸರ್ಕಾರಿ ಉದ್ಯೋಗಗಳನ್ನು ಮಾರಾಟ ಮಾಡುವ ಗ್ಯಾಂಗ್‌ನ್ನು ಹೊರಗೆ ತರ್ತೇವೆ,' ಎಂದು ಹೇಳಿದ್ದಾರೆ.

ದಿವ್ಯಾ ಹಾಗರಗಿ ಗೌರವಯುತವಾಗಿ ಶರಣಾಗಬೇಕಂತೆ:

ಪಿಎಸ್‌ಐ ಪರೀಕ್ಷೆಯ ಗೋಲ್ ಮಾಲ್ ಬೆಳಕಿಗೆ ಬಂದು 16 ದಿನಗಳು ಕಳೆದರೂ ದಿವ್ಯಾ ಹಾಗರಗಿರನ್ನು ಬಂಧಿಸಲು ಸಾಧ್ಯವಾಗಿಲ್ಲ. ಈಕೆ ಎಲ್ಲಿದ್ದಾಳೆ ಅನ್ನೋದು ಪೊಲೀಸರಿಗೆ ಗೊತ್ತಿಲ್ಲವಂತೆ ಅದಕ್ಕಾಗಿಯೇ ಸಚಿವರು ದಿವ್ಯಾ ಸ್ಟ್ರಾಂಗ್ ಇಲ್ಲ, ಅವರು ಊರು ಬಿಟ್ಟಿದ್ದಾರೆ. ಈಗಾಗಲೇ ಅರೆಸ್ಟ್ ವಾರೆಂಟ್ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ದಿವ್ಯಾರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ. ಗೌರವಯುತವಾಗಿ ಶರಣಾಗಬೇಕು ಎಂದಿದ್ದಾರೆ. ಆ ಮೂಲಕ ಕರ್ನಾಟಕ ಆರೋಪಿಯನ್ನು ಹಿಡಿಯಲು ಆಗದಷ್ಟು ಅಸಮರ್ಥರು ಎಂಬುದನ್ನು ಗೃಹಸಚಿವರು ಒಪ್ಪಿಕೊಳ್ಳುತ್ತಿದ್ದಾರಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ.

PSI recruitment scam: Home Minister Told Accused to Surrender Raise Doubts Ove The Ability of Karnataka Police

ಪ್ರಿಯಾಂಕ್ ಖರ್ಗೆ ಗೈರು: ಗೃಹಸಚಿವರು ಹೇಳಿದ್ದೇನು?

ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಅವರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ವಾ, ದಾಖಲೆ ಕೊಡಬಹುದು ಅಲ್ವಾ, ಅವರ ತಂದೆ ತಂದೆ ಎಷ್ಟು ದೊಡ್ಡವರು..? ಅವರನ್ನು ಏನು ಅರೆಸ್ಟ್ ಮಾಡ್ತಾರಾ..? ವಿಚಾರಣೆ ತಾನೇ ಮಾಡೋದು, ಅವರ ಬಳಿ ಇರೋ ದಾಖಲೆ ಕೊಡಲಿ. ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ತೀನಿ ಅನ್ನೋದು ಎಷ್ಟು ಸರಿ? ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇನ್ನು ಅಮೃತ್ ಪೌಲ್ ವರ್ಗಾವಣೆ ಸಹಜ ಪ್ರಕ್ರಿಯೆ. ಹಾಗಂತ ಅವರನ್ನು ಅವರನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ. ತನಿಖೆಯಲ್ಲಿ ಯಾರ ಹೆಸರು ಬರುತ್ತೋ ಅವರೇ ತಪ್ಪಿತಸ್ಥರಾಗುತ್ತಾರೆ ಎಂದು ಗೃಹಸಚಿವರು ತಿಳಿಸಿದರು.

PSI recruitment scam: Home Minister Told Accused to Surrender Raise Doubts Ove The Ability of Karnataka Police

ಗೃಹ ಸಚಿವರು ತಮ್ಮಇಲಾಖೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಖಡಕ್ ಆಗಿ ಮಾತನಾಡಬೇಕು. ದಿವ್ಯಾ ಹಾಗರಗಿ ಅದೆಲ್ಲಿ ಅಡಗಿದ್ರು ಹುಡುಕಿ ಎಳೆದು ತಂದೇ ತರ್ತೀವಿ ಎಂದು ಹೇಳಬೇಕು. ಆಗ ನಮ್ಮ ಪೊಲೀಸರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ರಾಜಕೀಯ ಕಾರಣಕ್ಕೆ ಮಾತನಾಡುವ ಬದಲು ತನಿಖೆಯಲ್ಲಿ ಹಸ್ತಕ್ಷೇಪ ಮಾಡದೇ ಪೊಲೀಸರಿಗೆ ಸ್ವಾತಂತ್ರ್ಯ ನೀಡಿದ್ರೆ ನಿಜವಾಗಿ ಬುಟ್ಟಿಯಲ್ಲಿರೋ ಹಾವು ಯಾರು ಅನ್ನೋ ಸತ್ಯವನ್ನು ಹೊರಜಗತ್ತಿಗೆ ಸಾಕ್ಷಿಸಹಿತವಾಗಿ ಪೊಲೀಸರು ಹೊರಗೆ ತಂದು ಆರೋಪಿಗಳನ್ನು ಜೈಲಿಗಟ್ಟುತ್ತಾರೆ.

Recommended Video

      ಪುಷ್ಪಾ ಸಿನಿಮಾದ ಹೂಂ ಅಂಟಾವ ಹಾಡಿಗೆ ಸಖತ್ ಸ್ಟೆಪ್ ಹಾಕಿ ಮಿಂಚಿದ Virat Kohli ವಿಡಿಯೋ ವೈರಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+