ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಪಿಎಸ್‌ಐ ನೇಮಕಾತಿ ಹಗರಣ: 36ನೇ ಆರೋಪಿ ಮಧ್ಯವರ್ತಿ ಸಿದ್ದರಾಜು ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಒಬ್ಬರಾದ ಮೇಲೆ ಮತ್ತೊಬ್ಬರು ಬಂಧನದ ಸರಣಿ ಮುಂದುವರೆದಿದೆ. ಪಿಎಸ್‌ಐ ನೇಮಕಾತಿ ಹಗರಣದ 36ನೇ ಆರೋಪಿ ಸಿದ್ದರಾಜುವಿನ ಬಂಧನವಾಗಿದೆ.

ಪಿ.ಎಸ್.ಐ ಅಕ್ರಮ ನೇಮಕಾತಿ ಹಗರಣದಲ್ಲಿ ಪ್ರಕರಣದಲ್ಲಿ 36 ನೇ ಆರೋಪಿ ಸಿದ್ದರಾಜು ಅರೆಸ್ಟ್ ಆಗಿದ್ದಾನೆ. ಈತ ಪಿಎಸ್ಐ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಎಂದು ತಿಳಿದು ಬಂದಿದೆ. ಪಿಎಸ್ಐಯಾಗಿ ಸೆಲೆಕ್ಟ್ ಆಗಿದ್ದ ಗಜೇಂದ್ರ, ಮನೋಜ್ ಎಂಬ ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿದ್ದ ಹಣವನ್ನು ಪಡೆದು ಕೆಲವರಿಗೆ ತಲುಪಿಸಿದ್ದ ಎಂಬ ಆರೋಪ ಸಿದ್ದರಾಜುವಿನ ಮೇಲಿದೆ.

ಸಿದ್ದರಾಜು ಮನೆಮುಂದೆ ಟಮಟೆ ಬಾರಿಸಿ ನೋಟಿಸ್
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ಸಿದ್ದರಾಜು ಕಳೆದ ಐದು ತಿಂಗಳಿನಿಂದ ಸಿಐಡಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಆರೋಪಿಯ ಲಗ್ಗೆರೆ ನಿವಾಸದ ಬಳಿ ಸಿಐಡಿ ಅಧಿಕಾರಿಗಳು ತಮಟೆ ಬಾರಿಸಿ ನೋಟಿಸ್ ಅಂಟಿಸಿದ್ದರು. ಕೋರ್ಟ್ ನಿಂದ ಆರೋಪಿ ಪತ್ತೆಗೆ NBW ಜಾಮೀನು ರಹಿತ ವಾರೆಂಟ್ ಜಾರಿ ಆಗಿತ್ತು.

PSI recruitment scam:36th accused Sidda Raju arrested

ಸಿದ್ದರಾಜು ಚರಾಸ್ತಿಯನ್ನ ಜಫ್ತಿ ಮಾಡಿದ್ದ ಸಿಐಡಿ
ಸಿಐಡಿ ಅಧಿಕಾರಿಗಳು ಸಿದ್ದರಾಜು ನಿವಾಸದಲ್ಲಿನ ಚರಾಸ್ತಿಯನ್ನ ಜಫ್ತಿ ಮಾಡಿದ್ದರು. ಸಿದ್ದರಾಜು ಲಗ್ಗೆರೆ ನಿವಾಸದಲ್ಲಿ ಟಿವಿ ಫ್ರಿಜ್ ಸೋಫಾ ಕಾರು ಬೈಕ್ ಸೇರಿ ಚರಾಸ್ತಿ ಜಫ್ತಿ ಮಾಡಲಾಗಿತ್ತು. ಸಿದ್ದರಾಜು ಕೋರ್ಟ್ ಗೆ ನೇರವಾಗಿ ಶರಣಾಗಿದ್ದಾನೆ. ಸಿದ್ದರಾಜುನನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶವನ್ನು ನೀಡಿದೆ.

ಸಿದ್ದರಾಜು ಪೊಲೀಸ್ ಕಸ್ಟಡಿಗೆ ಕೇಳಲು ಸಿಐಡಿ ಸಿದ್ದತೆ
ಸಿದ್ದರಾಜುವನ್ನು ತಮ್ಮ ಕಸ್ಟಡಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಕೇಳಲು ಸಿಐಡಿ ಸಿದ್ದತೆಯನ್ನು ನಡೆಸಿದೆ. ಆರೋಪಿ ಸಿದ್ದರಾಜು ನ್ಯಾಯಾಲಯಕ್ಕೆ ನೇರವಾಗಿ ಬಂದು ಶರಣಾಗಿರುವುದರಿಂದ ಆರೋಪಿಯನ್ನು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಆರೋಪಿಯನ್ನು ತನ್ನ ಕಸ್ಟಡಿಗೆ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಲು ಸಿಐಡಿ ಸಿದ್ದತೆಯನ್ನು ಮಾಡುತ್ತಿದೆ.

PSI recruitment scam:36th accused Sidda Raju arrested

ಸಿದ್ದರಾಜುವಿನಿಂದ ಹಗರಣದ ಮಾಹಿತಿ
ಸಿದ್ದರಾಜು ಮಧ್ಯವರ್ತಿಯಾಗಿ ಕೆಲಸವನ್ನು ಮಾಡಿದ್ದರಿಂದ ಈತ ಎಷ್ಟು ಅಭ್ಯರ್ಥಿಗಳಿಂದ ಹಣವನ್ನು ಪಡೆದಿದ್ದ. ಹಗರಣ ಸಂಬಂಧ ಯಾರಿಗೆ ಹಣವನ್ನು ತಲುಪಿಸಿದ್ದ ಎನ್ನುವುದು ವಿಚಾರಣೆಯ ವೇಳೆ ತಿಳಿದುಬರಲಿದೆ.

English summary
One arrest after another continues in the PSI recruitment scam. The 36th accused in the PSI recruitment scam, Sidda Raju, has been arrested, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X