Bengaluru Property: ಬೆಂಗಳೂರು ಆಸ್ತಿ ಮಾಲೀಕರು ಈ ತಪ್ಪು ಮಾಡಿದ್ದರೆ ಆಸ್ತಿ ಹರಾಜು ಆಗಲಿದೆ!

Bengaluru Property: ಬೆಂಗಳೂರಿನಲ್ಲಿರುವ ಆಸ್ತಿದಾರರಿಗೆ ಬಿಬಿಎಂಪಿ ಹೊಸ ಶಾಕ್‌ವೊಂದನ್ನು ಕೊಟ್ಟಿದೆ. ಆದರೆ ಇದು ಎಲ್ಲಾ ಹೊಸದಾರರಿಗೆ ಅಲ್ಲ. ಯಾರು ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದು, ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುತ್ತಿಲ್ಲವೊ ಅವರಿಗೆ ಸಂಬಂಧಿಸಿದಂತೆ. ಬೆಂಗಳೂರಿನಲ್ಲಿ ಆಸ್ತಿ ಇದ್ದರೂ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಬಿಬಿಎಂಪಿ ಚುರುಕು ಮುಟ್ಟಿಸಿದೆ. ಈ ಆಸ್ತಿದಾರರು ಬೆಂಗಳೂರಿನಲ್ಲಿ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ಇಷ್ಟಕ್ಕೂ ಬೆಂಗಳೂರಿನ ಈ ಆಸ್ತಿದಾರರು ಆಸ್ತಿ ಕಳೆದುಕೊಳ್ಳುವಂತಹ ಆತಂಕಕ್ಕೆ ಒಳಗಾಗುವುದಕ್ಕೆ ಕಾರಣವೇನು. ಬಿಬಿಎಂಪಿ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿದ್ದು ಯಾಕೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡು ಬಿಬಿಎಂಪಿಗೆ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತಿರುವ ಆಸ್ತಿದಾರರ ಪಟ್ಟಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ವರ್ಷಗಳಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ. ಈ ಬಾರಿ ಆರ್ಥಿಕ ವರ್ಷ 2024-25ರಲ್ಲಿ ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಲವು ನೂತನ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಇ ಖಾತಾ ಜಾರಿ, ಯಾವುದೇ ಖಾತಾ ಇಲ್ಲದವರಿಗೆ ಹೊಸ ಖಾತಾ ಮಾಡಿಸಿಕೊಳ್ಳುವ ಅವಕಾಶ ಸೇರಿದಂತೆ ಹಲವು ಹೊಸ ಕ್ರಮಗಳು ಇವೆ. ಇದೀಗ ಬೆಂಗಳೂರಿನಲ್ಲಿ ಆಸ್ತಿಗಳ ಹರಾಜಿಗೆ ಬಿಬಿಎಂಪಿ ಮುಂದಾಗಿದೆ.

Property Tax Update Big Shock for 2 lakh Property Owners in Bengaluru

2 ಲಕ್ಷ ಆಸ್ತಿಗಳಿಗೆ ಬಿಬಿಎಂಪಿ ಎಚ್ಚರಿಕೆ: ಬಿಬಿಎಂಪಿಯು ಆಸ್ತಿ ಬಾಕಿ ಉಳಿಸಿಕೊಂಡಿರುವ ಬರೋಬ್ಬರಿ 2 ಲಕ್ಷ ಜನರಿಗೆ ಗಂಭೀರವಾದ ಎಚ್ಚರಿಕೆಯೊಂದನ್ನು ಕೊಟ್ಟಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8 ವಲಯಗಳಿದ್ದು ಪ್ರತಿ ವಲಯದಲ್ಲೂ ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಉಳಿಸಿಕೊಂಡಿರುವವರು ಹಾಗೂ ಹಲವು ಬಾರಿ ನೋಟಿಸ್‌ ಕೊಟ್ಟರೂ ಕ್ಯಾರೇ ಎನ್ನದವರ ಆಸ್ತಿದಾರರ ಸ್ಥಿರ ಆಸ್ತಿಯನ್ನು ಹರಾಜು ಹಾಕುವುದಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಪಾಲಿಕೆಯಲ್ಲಿನ 8 ರಿಂದ 10 ಪ್ರಮುಖ ಆಸ್ತಿದಾರರನ್ನು ಪ್ರತಿ ವಲಯದಿಂದ 1ರಿಂದ 2 ಆಸ್ತಿದಾರರನ್ನು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಆಸ್ತಿ ಬಾಕಿ ಉಳಿಸಿಕೊಂಡಿರುವ ಸ್ಥಿರ ಆಸ್ತಿಗಳ ಮಾರಾಟದ ಹರಾಜು ಮಾರಾಟ ದಿನಾಂಕವನ್ನು ನಿಗದಿ ಮಾಡಿ ನೋಟಿಸ್‌ಗಳನ್ನು ನೀಡಲಾಗಿದೆ. ಇದೆಲ್ಲ ದೀರ್ಘಕಾಲದ ಆಸ್ತಿ ತೆರಿಗೆ ಕಟ್ಟದೆ ಇರುವ ಪ್ರಕರಣಗಳಾಗಿವೆ.

ಇನ್ನಷ್ಟು ಆಸ್ತಿಗಳ ಹರಾಜು: ಬೆಂಗಳೂರಿನಲ್ಲಿ ಮುಂದಿನ ವಾರ ಹೆಚ್ಚಿನ ಆಸ್ತಿಗಳನ್ನು ಹರಾಜು ಮಾರಾಟ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಪ್ರತಿ ವಾರ ಹೆಚ್ಚು ಹೆಚ್ಚು ಆಸ್ತಿಗಳನ್ನು (ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು) - ವಾಣಿಜ್ಯ/ಕೈಗಾರಿಕಾ ಹಾಗೂ ವಸತಿ ಎರಡೂ ಸೇರಿದಂತೆ ಆಸ್ತಿ ತೆರಿಗೆ ಬಾಕಿಗಳನ್ನು ವಸೂಲಿ ಮಾಡಲು ಹರಾಜಿಗೆ ಇರಿಸುತ್ತಿರುವುದಾಗಿ ಹೇಳಿದೆ. ಅಲ್ಲದೆ ಮುಖ್ಯವಾಗಿ 2 ಲಕ್ಷ ಆಸ್ತಿಗಳು ಈ ರೀತಿ ಇವೆ. ಬಿಬಿಎಂಪಿಯಿಂದ ಇದೇ ರೀತಿಯ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಬೇಕು ಎಂದಾದರೆ ನೀವು ತಕ್ಷಣವೇ ನಿಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಿ ಎಂದು ಬಿಬಿಎಂಪಿಯು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+