ಶಕ್ತಿಸೌಧದ ಸುತ್ತ ಆಗಸ್ಟ್ 20ರಂದು ಕರ್ಫ್ಯೂ ಜಾರಿ
ಬೆಂಗಳೂರು, ಆ,18: ಕೆಪಿಎಸ್‌ಸಿ ಪಟ್ಟಿ ರದ್ದು ವಿರೋಧಿಸಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಆಗಸ್ಟ್ 20, ಬುಧವಾರ ವಿಧಾನಸೌಧ ಮುತ್ತಿಗೆ ಹಾಕಲಿವೆ. ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 19ರ ಮಧ್ಯರಾತ್ರಿಯಿಂದ 20ರ ಮಧ್ಯರಾತ್ರಿವರಗೆ ವಿಧಾನಸೌಧ ಸುತ್ತ ಒಂದು ಕಿಮೀ ವ್ಯಾಪ್ತಿ ಪ್ರತಿಬಂಧಕ ಆಜ್ಞೆ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.(ಕಾನೂನು ಹೋರಾಟಕ್ಕೆ ಮುಂದಾದ ಕೆಪಿಎಸ್ಸಿ ಅಭ್ಯರ್ಥಿಗಳು)
ಮೆರವಣಿಗೆಯಿಂದ ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯಾಗಬಾರದು, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ನಾಗರಿಕರ ಆಸ್ತಿ ಪಾಸ್ತಿಗೆ ಯಾವುದೇ ಹಾನಿಯಾಗಬಾರದು ಎಂದು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ರೀತಿಯ ನಡವಳಿಕೆ 20ರಂದು ನಿಷಿದ್ಧ
* ಸಭೆ, ಸಮಾರಂಭ, 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ರಸ್ತೆ ಮಧ್ಯೆ ನಿಂತು ಚಚರ್ಚಿಸುವುದು.
* ಚಾಕು, ಕತ್ತಿ ಮುಂತಾದ ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದು.
* ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಸಾಗಿಸುವುದು ಮತ್ತು ಸ್ಪೋಟಿಸುವುದು
*ಪ್ರಚೋದನಕಾರಿ ಘೋಷಣೆ ಕೂಗುವುದು, ಪ್ರತಿಕೃತಿ ದಹನ, ಜೋರಾಗಿ ಶಬ್ದ ಮಾಡುವುದು, ಧ್ವನಿವರ್ಧಕ ಬಳಕೆ ಮಾಡುವುದನ್ನು ನಿಷೇಧಿಸಿ ಎಂ.ಎನ್.ರೆಡ್ಡಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications