Bengaluru-Mysuru Expressway: ಹೆದ್ದಾರಿಯ ಭಯಾನಕ ವಿಡಿಯೋ: ವಾಹನ ಸವಾರರೇ ಎಚ್ಚರ! Viral Video
ಬೆಂಗಳೂರು, ಫೆಬ್ರವರಿ 27: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾನವಾದಾಗಿನಿಂದ ನಿತ್ಯ ಲಕ್ಷಾಂತರ ವಾಹನಗಳು ಇದೇ ರಸ್ತೆ ಮೂಲಕ ಚಲಿಸುತ್ತವೆ. ಅಪಘಾತ, ಜನರ ರಕ್ಷಣೆ ಸಂಬಂಧ ಅಗತ್ಯ ಕ್ರಮ ಕೈಗೊಂಡರು ಸಹಿತ ಕೆಲವು ವಾಹನ ಸವಾರರು ಉಪಟಳ ಮಾತ್ರ ನಿಂತಿಲ್ಲ. ಇದಕ್ಕೆ ಪೂರಕವೆಂಬಂತೆ ಇಲ್ಲೊಂದು ಭಯಾನಕ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ, ಹೆದ್ದಾರಿ ನಿರ್ಮಾಣವಾದ್ರು ಸವಾರರಿಗೆ ನೆಮ್ಮದಿ ಇಲ್ಲವಲ್ಲ ಎಂದು ಅನ್ನಿಸದೇ ಇರದು.
ಹೌದು, ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ವಾಹನ ಚಲಿಸುತ್ತವೆ. ಮಸ್ತ್ ರೋಡ್ ಇದೆ ಎಂದು ನಿಶ್ಚಿಂತೆಯಿಂದ ಹೊರಟರು ಕೆಲವು ವಾಹನ ಸವಾರರು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ವೈರಲ್ ಆಗುತ್ತಿರುವ ವಿಡಿಯೋ ಸಾಕ್ಷಿ ಎಂಬಂತಿದೆ. ಈ ವಿಡಿಯೋವನ್ನು @ಎಕ್ಸ್ ಪೋಸ್ಟ್‌ನಲ್ಲಿ 3rdEyeDude ಹಂಚಿಕೊಂಡಿದೆ.

ಎಕ್ಸ್‌ಪ್ರೆಸ್ ವೇ ಒನ್‌ವೇನಲ್ಲಿ ಹೋಗುತ್ತಿರುವ ವಾಹನಗಳಿಗೆ ಎದುರಾಗಿ ಖಾಸಗಿ ಬಸ್ ವೊಂದು ಸಂಚರಿಸಿದೆ. ಈ ಹೆದ್ದಾರಿಯ ಕುಂಬಳಗೋಡು ಮೇಲ್ಸೇತುವೆ ಮೇಲೆ ಕಾರೊಂದರ ಡ್ಯಾಶ್ ಬೋರ್ಡ್‌ನಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದೆ. ಮುಂದೆ ಕಾರುಗಳು ಹೋಗುವಾಗ ಒಂದು ಪಥದಲ್ಲಿ ದಿಢೀರನೇ ಹಾದು ಹೋಗುವ ದೃಶ್ಯ ನೀವು ನೋಡಬಹುದಾಗಿದೆ.
ಒಟ್ಟು ಆರು ಪಥದ ಹೆದ್ದಾರಿಯಲ್ಲಿ ತಲಾ ಮೂರು ಪಥಗಳು ಒನ್‌ವೇ ಆಗಿವೆ. ಇದರದಲ್ಲಿ ಒಂದು ಪಥದಲ್ಲಿ ಈ ಖಾಸಗಿ ವಾಹನ ಎದುರಾಗಿ, ರಾಂಗ್ ರೂಟ್ ನಲ್ಲಿ ಬರುತ್ತಿರುವುದನ್ನು ಕಾಣಬಹುದಾಗಿದೆ. ಎದುರಿಗೆ ಯಾವುದೇ ವಾಹನ ಬಾರದು ಎಂದು ಆರಾಮಗಾಗಿ ಗಾಡಿ ಓಡಿಸುವವರು ಸ್ವಲ್ಪ ಯಾಮಾರಿದರೂ ರಾಂಗ್ ರೂಟ್‌ನಲ್ಲಿ ಬರುವ ಇಂತಹ ವಾಹನಗಳಿಂದ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಜೀವಕ್ಕೆ ಕುತ್ತು ಉಂಟಾಗಬಹುದು. ಇಂತಹ ವಾಹನಗಳು, ಸವಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಭವನೀಯ ಅಘಡಗಳನ್ನು ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Can you believe this when a bus was caught driving on the wrong side of the BLR-MYS highway? Let’s demand justice and get that reckless driver prosecuted ASAP!
— ThirdEye (@3rdEyeDude) February 27, 2025
Number plate image in the below thread 👇 pic.twitter.com/2FAQcaFGy4
ಎಕ್ಸ್‌ಪ್ರೆಸ್ ವೇನ ಕುಂಬಳಗೋಡು ಬಳಿಕ ನಡೆದಿದೆ ಎಂದು ವಾಹನದ ಸಂಖ್ಯೆಯನ್ನು ಹಂಚಿಕೊಳ್ಳಲಾಗಿದೆ. ಈ ಅಜಾಗರೂಕ ಚಾಲಕ, ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಸಂಚಾರಿ ಪೊಲೀಸರು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಕೋರಲಾಗಿದೆ.












Click it and Unblock the Notifications