ಪರಪ್ಪನ ಅಗ್ರಹಾರ ಕೈದಿಗಳಿಗೆ ಒಂದೂವರೆ ವರ್ಷದ ಬಳಿಕ ಸಂಬಳ
ಬೆಂಗಳೂರು, ಏಪ್ರಿಲ್ 03: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನವೇ ಬಿಡುಗಡೆಯಾದ ಸುಮಾರು 600 ಖೈದಿಗಳಿಗೆ ಒಂದೂವರೆ ವರ್ಷದ ಬಳಿಕ ಸಂಬಳ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ಅವರು ತಮ್ಮ ಸಂಬಳ ಪಡೆಯಲಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಸೆಪ್ಟೆಂಬರ್ 2016ರಿಂದ ಜನವರಿ 2018ರವರೆಗೆ ಕೆಲಸ ಮಾಡಿದ ಕೈದಿಗಳಿಗೆ ಒಟ್ಟು 83,59,980ರೂಗಳನ್ನು ಸರ್ಕಾರ ಪಾವತಿಸಬೇಕಿದೆ. ಕೈದಿಗಳ ಒತ್ತಡದ ಮೇರೆಗೆ ಇಲಾಖೆಯು ಅವರ ಸಂಬಳವನ್ನು ಒಂದೂವರೆ ವರ್ಷದ ಬಳಿಕ ನೀಡಲು ಮುಂದಾಗಿದೆ.
ಈ ಮೊದಲು ಪರಪ್ಪನ ಅಗ್ರಹಾರ ಮುಖ್ಯ ಸುಪರಿಂಟೆಂಡೆಂಟ್ ಅವರು ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು ಜತೆಗೆ ಸರ್ಕಾರ ಕೂಡ ಸಮ್ಮತಿ ಸೂಚಿಸಿತ್ತು. ಕೆಲವು ತಾಂತ್ರಿಕ ದೋಷಗಳಿಂದಾಗಿ 83 ಲಕ್ಷದಷ್ಟು ಹಣವನ್ನು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ.

ಕಾರಾಗೃಹ ಇಲಾಖೆಯ ಮಾಹಿತಿ ಪ್ರಕಾರ ದಿನಕ್ಕೆ 30ರೂ ನಿಂದ 50 ರೂವರೆಗೆ ಅವರ ಕೆಲಸಕ್ಕೆ ತಕ್ಕಂತೆ ಸಂಬಳವನ್ನು ಪಡೆಯುತ್ತಿದ್ದರು. ಅದು ಪ್ರಿಸನರ್ಸ್ ಪರ್ಸನಲ್ ಕ್ಯಾಷ್(ಪಿಪಿಸಿ) ಖಾತೆಗೆ ಹೋಗುತ್ತಿತ್ತು. ಅವರ ಎಲ್ಲಾ ಸಂಬಳವು ಈ ಖಾತೆಗೆ ಹೋಗುತ್ತಿತ್ತು.ಆದರೆ ಪ್ರತಿ ಬಾರಿಯೂ ಮೂರು ತಿಂಗಳು, ಆರು ತಿಂಗಳು ಹೆಚ್ಚು ಎಂದರೆ 9 ತಿಂಗಳು ವಿಳಂಬವಾಗುತ್ತಿತ್ತು. ಆದರೆ ಈ ಬಾರಿ ಒಂದೂವರೆ ವರ್ಷ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications