ಪ್ರಿನ್ಸಿಪಾಲ್ ಬಳಿ ಕೇಳಬಾರದ್ದು ಕೇಳಿ ಕೇಸು ಹಾಕಿಸಿಕೊಂಡ ಅಜ್ಜ !
ಬೆಂಗಳೂರು, ಫೆಬ್ರವರಿ 19: ನೀನು ತುಂಬಾ ಸೆಕ್ಸಿಯಾಗಿ ಕಾಣಿಸುತ್ತೀಯಾ.. ನಾನು ಇಷ್ಟು ಚೆನ್ನಾಗಿ ಕಾಣಿಸುತ್ತೀದ್ದೀನಿ ಯಾಕೆ ಗೊತ್ತಾ ? 27 ವರ್ಷದಿಂದ ನಾನು ನನ್ನ ಹೆಂಡತಿ ಪಕ್ಕ ಮಲಗಿಯೇ ಇಲ್ಲ !
ಬಸವನಗುಡಿ ಕ್ಲಬ್ ಯೂನಿಯನ್ ಉಪಾಧ್ಯಕ್ಷ 67 ವರ್ಷ ವಯಸ್ಸಿನ ಮೋಹನ್ ರಾವ್ ಎಂಬುವರ ವಿರುದ್ಧ ಕ್ಲಬ್ ಸದಸ್ಯೆ, ಪ್ರಾಂಶುಪಾಲೆಯೊಬ್ಬರು ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಸವನಗುಡಿ ಪೊಲೀಸರು ಲೈಂಗಿಕ ದೌರ್ಜನ್ಯ ಅಡಿ ಕೇಸು ದಾಖಲಿಸಿಕೊಂಡಿದ್ದಾರೆ.
ಕಾಲೇಜಿನ ಪ್ರಾಂಶುಪಾಲರು ಕೆಲ ದಿನಗಳ ಹಿಂದೆ ತನ್ನ ಪತಿ ಸಮೇತ ಬಸವನಗುಡಿ ಕ್ಲಬ್ ಗೆ ಹೋಗಿದ್ದರು. ಅಗತ್ಯ ವಸ್ತುಗಳನ್ನು ತರಿಸಿಕೊಂಡು ಸೇವಿಸಿದ್ದರು. ಪ್ರಾಂಶುಪಾಲೆ ಶೌಚಾಲಯಕ್ಕೆ ಹೋಗುವಾಗ ಎದುರು ಬಂದಿದ್ದ ಮೋಹನ್ ರಾವ್ ಎಂಬುವರು, ಹೇಗೆ ನಾನು ಕಾಣುತ್ತಿದ್ದೀನಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಾಂಶುಪಾಲೆ ಚೆನ್ನಾಗಿದ್ದೀರಿ, ಸಂಕಲ್ಪ ಎಂದಿದ್ದಾರೆ. ಯಾಕೆ ಚೆನ್ನಾಗಿದ್ದೀನಿ ಗೊತ್ತಾ ? ನಾನು ನನ್ನ ಹೆಂಡ್ತಿ ಜತೆ 27 ವರ್ಷಗಳಿಂದ ಮಲಗಿಲ್ಲ. ಅದ್ಕೆ ಚೆನ್ನಾಗಿದ್ದೀನಿ ಎಂದು ಹೇಳಿದ್ದಾರೆ.

Recommended Video
ವಯಸ್ಸಾದವರು ಎಂದು ಪ್ರಾಂಶುಪಾಲೆ ಸುಮ್ಮನಾಗಿದ್ದಾರೆ. ಊಟ ಮುಗಿಸಿ ಮತ್ತೊಮ್ಮೆ ಶೌಚಾಲಯ ಕಡೆ ಹೋದಾಗ, ಎದುರು ಬಂದಿರುವ ಮೋಹನ್ ರಾವ್, ನನಗೆ ಡ್ರಿಂಕ್ಸ್ ಕೊಡಿಸಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲೆ, ಏನು ಬೇಕೋ ಕೇಳಿ ಅಂಕಲ್ ಅಂದಿದ್ದಾರೆ. ಅದಕ್ಕೆ ನಿನ್ನ ಎದೆ ಹಾಲು ಬೇಕು ಎಂದು 67 ವರ್ಷದ ವೃದ್ಧ ಅಜ್ಜ ತುಂಟತನ ತೋರಿದ್ದಾರೆ. ಇದರಿಂದ ಕುಪಿತಗೊಂಡ ಪ್ರಾಂಶುಪಾಲೆ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ . ಕ್ಲಬ್ ನಲ್ಲಿ ತುಂಟತನ ಮೆರೆದ ಅಜ್ಜಪ್ಪ ಇದೀಗ ಇಳಿ ವಯಸ್ಸಿನಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಇದು ಯೂನಿಯನ್ ಕ್ಲಬ್ ನ ಉಪಾಧ್ಯಕ್ಷ ಎನ್ನುವ ಕಾರಣಕ್ಕೆ ಪಿತೂರಿ ನಡೆದೆಯಾ ? ಇಲ್ಲವೇ ನಿಜವಾಗಿಯೂ ನಡೆದಿದೆಯಾ ಎಂಬುದರ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications