ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ್ಞಾನ ಮತ್ತು ಸಂಸ್ಕೃತಿಯಲ್ಲಿ ಕರ್ನಾಟಕ ಸಂಪದ್ಭರಿತ: ಕೋವಿಂದ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 30: ಇದು ರಾಜ್ಯಕ್ಕೆ ನನ್ನದು ಎರಡನೇ ಭೇಟಿ. ಜ್ಞಾನ ಮತ್ತು ಸಂಸ್ಕೃತಿಯಲ್ಲಿ ಸಂಪದ್ಭರಿತ ರಾಜ್ಯ ಕರ್ನಾಟಕ. ಇಂಥ ರಾಜ್ಯದಲ್ಲಿ ಅದಮ್ಯ ಚೇತನ ಹಾಗೂ ನ್ಯಾಷನಲ್ ಹೈ ಸ್ಕೂಲ್ ಅಪಾರ ಕೊಡುಗೆ ನೀಡುತ್ತಿವೆ ಎಂದು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಐತಿಹಾಸಿಕ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್ಐತಿಹಾಸಿಕ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಾಗಿದ್ದ ಅದಮ್ಯ ಚೇತನ ಸೇವಾ ಉತ್ಸವ ಮತ್ತು ರಾಷ್ಟ್ರೀಯ ಶಿಕ್ಷಣ ಸಂಘದ ಶತಮಾನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಪರಿಸರ ಉಳಿಸುವುದು ನಮ್ಮ ಆದ್ಯತೆ ಆಗಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕು. ಅದಮ್ಯ ಚೇತನ ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು.

President Ram Nath Kovind inaugurates Adamya Chetana Seva Utsav 2018 in Bengaluru

ಚೇತನ ಫೌಂಡೇಷನ್ ತನ್ನ ಅನ್ನಪೂರ್ಣ ಯೋಜನೆಯ ಮೂಲಕ 100,000 ಕ್ಕಿಂತ ಹೆಚ್ಚು ಮಕ್ಕಳಿಗೆ ಪ್ರತಿ ದಿನದ ಮಧ್ಯಾಹ್ನದ ಊಟವನ್ನು ಒದಗಿಸುತ್ತದೆ ಎಂದು ಶ್ಲಾಘಿಸಿದರು.

President Ram Nath Kovind inaugurates Adamya Chetana Seva Utsav 2018 in Bengaluru

ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ಭಾಗಿ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ 22ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಪದಕ ವಿಜೇತರಾದವರಿಗೆ ಪದಕಗಳನ್ನು ವಿತರಿಸಿ ಶುಭ ಹಾರೈಸಿದರು. ಹಾಗೂ 125 ಹೊಸ ಹಾಸಿಗೆವುಳ್ಳ ಆಡರ್ನ್ ವಾರ್ಡನ್ ನ್ನು ಉದ್ಘಾಟಿಸಿದರು.

English summary
President Ram Nath Kovind inaugurates Adamya Chetana Seva Utsav 2018 and centenary celebrations of National Education Society in Bengaluru December 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X