ನಮ್ಮ ಮೆಟ್ರೋ ಹಸಿರು ಲೈನ್ ರಾಷ್ಟ್ರಪತಿಯಿಂದ ಲೋಕಾರ್ಪಣೆ

ಬೆಂಗಳೂರು, ಜೂನ್ 17: ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಮ್ಮ ಮೆಟ್ರೋದ ಸಂಪಿಗೆಯಿಂದ ಯಲಚೇನಹಳ್ಳಿವರೆಗೆ ಮೊದಲನೇ ಹಂತದ ಹಸಿರು ಲೈನ್ ಅನ್ನು ಶನಿವಾರ ಲೋಕಾರ್ಪಣೆ ಮಾಡಿದರು. ದಕ್ಷಿಣ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹಸಿರು ಲೈನ್ ನಿಂದ ಐದು ಲಕ್ಷ ಮಂದಿಗೆ ಅನುಕೂಲವಾಗುತ್ತದೆ.

ಬೆಂಗಳೂರು ಸಂಚಾರದಟ್ಟಣೆ ಸಮಸ್ಯೆಯಾಗಿತ್ತು. "ನಾಲ್ಕು ಗಂಟೆಗಳ ಪ್ರಯಾಣ ಮಾಡಿ ಕಚೇರಿ ಸೇರುವುದು ಬೇಸತ್ತು ಹೋಗಿತ್ತು. ಇನ್ನು ಮುಂದೆ ಅದಿರುವುದಿಲ್ಲ. ನನ್ನ ಕಚೇರಿ ಇರುವುದು ಬೈಯಪ್ಪನಹಳ್ಳಿಯಲ್ಲಿ. ಈ ಸಮಯ ಉಳಿಯುವುದರಿಂದ ಬೇರೆ ಕೆಲಸ ಮಾಡಿಕೊಳ್ಳಬಹುದು. ಇದರಿಂದ ನನ್ನಂಥ ಎಷ್ಟೋ ಮಂದಿಗೆ ಅನುಕೂಲವಾಗುತ್ತದೆ" ಎಂದು ನೇಹಾ ಹೇಳಿದರು.

President Pranabh Mukherjee dedicated Namma Metro's Phase 1 to citizens

ಪ್ರತಿ ದಿನ ಮೆಟ್ರೋದಲ್ಲಿ ಸಂಚರಿಸುವವರಿಗೆ ಮಾತ್ರವಲ್ಲ, ಅಪರೂಪಕ್ಕೆ ಸಂಚರಿಸುವವರಿಗೂ ಅನುಕೂಲವಾಗಲಿದೆ.ವೇಗ, ಕಡಿಮೆ ಖರ್ಚು ಎಂಬ ಕಾರಣಕ್ಕೆ ಬೆಂಗಳೂರು ಜನರ ಪಾಲಿಗೆ ಅಚ್ಚುಮೆಚ್ಚಿನದಾಗಿದೆ. "ನಾನು ಹೆಚ್ಚು ಮೆಟ್ರೋದಲ್ಲಿ ಸಂಚರಿಸುವುದಿಲ್ಲ. ಆದರೆ ಅಪರೂಪಕ್ಕೆ ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗುವಾಗ ಮೆಟ್ರೋದಲ್ಲಿ ಹೋಗ್ತೀನಿ" ಎಂದು ಮಾಯಾ ಎಂಬುವರು ತಿಳಿಸಿದರು.

ಸೂಚನಾ ಫಲಕ, ಮಾಹಿತಿ ಫಲಕಗಳ ಜತೆಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಇಡೀ ಪ್ರಯಾಣಿಕರ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಟಿಕೆಟ್, ದೂರ ಎಷ್ಟು, ಕಳವು ವಸ್ತುಗಳ ಹುಡುಕಾಟ ಎಲ್ಲಕ್ಕೂ ಸಹಾಯ ಮಾಡಲು ಜನರಿರುತ್ತಾರೆ. ಬೆಂಗಳೂರಿನ ಯಾವುದೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ಇಂಟರ್ ಚೇಂಜ್ ನಿಲ್ದಾಣವಾಗಿ ಕೆಲಸ ಮಾಡುತ್ತದೆ.

President Pranabh Mukherjee dedicated Namma Metro's Phase 1 to citizens

ಇನ್ನು ನಿಲ್ದಾಣದ ಎಲ್ಲ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ತುರ್ತು ನಿರ್ಗಮನವೂ ಸೇರಿದಂತೆ ಇತರೆ ಅಗತ್ಯ್ ಸೇವೆಗೆ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+