ರಾಷ್ಟ್ರಪತಿ ಚುನಾವಣೆಗಾಗಿ ವಿಧಾನಸೌಧದ ಕೊಠಡಿ ಸಿದ್ಧ
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಯಾಗಲಿರುವ ವಿಧಾನಸೌಧದ 102ನೇ ಕೊಠಡಿ. ಸರ್ಕಾರದಿಂದ ಅಧಿಕೃತ ಪ್ರಕಟಣೆ. ಅಲ್ಲದೆ, ಮತ ಚಲಾಯಿಸಲಿರುವ ಜನಪ್ರತಿನಿಧಿಗಳಿಗೆ ಕೆಲವಾರು ಸೂಚನೆಗಳ ಪ್ರಕಟ.
ಬೆಂಗಳೂರು, ಜೂನ್ 26: ಮುಂದಿನ ತಿಂಗಳ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಬೆಂಗಳೂರಿನಲ್ಲಿ ಮತಗಟ್ಟೆ ಸಿದ್ಧವಾಗಿದೆ.
ವಿಧಾನಸೌಧದ 106ನೇ ಕೊಠಡಿಯನ್ನು ಮತದಾನ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇಲ್ಲಿ ರಾಜ್ಯದ ಶಾಸಕರು, ಸಂಸದರು ಮತ ಚಲಾಯಿಸಬಹುದಾಗಿದೆ.

ಈ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಮತದಾನದ ಅರ್ಹತೆಯುಳ್ಳ ಎಲ್ಲರೂ ಮತದಾನ ದಿನದಂದು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರಬೇಕೆಂದು ಹೇಳಿದೆ.
ಅಲ್ಲದೆ, ಮತದಾನದ ವೇಳೆಯಲ್ಲಿ ಚುನಾವಣಾಧಿಕಾರಿಗಳು ಕೊಡುವ ಪೆನ್ನುಗಳನ್ನೇ ಬಳಸಬೇಕು. ಭಾರತೀಯ ಸಂಖ್ಯಾ ವಾಚಕಗಳು, ರೋಮನ್ ಅಂಕಿಗಳಲ್ಲೇ ಅಥವಾ ಭಾರತದ ಮತ್ಯಾವುದೇ ಭಾಷೆಗಳಲ್ಲಿನ ಅಂಕಿಗಳನ್ನು ಬರೆಯಬೇಕು. ಅಕ್ಷರಗಳನ್ನು ನಮೂದಿಸಬಾರದು ಎಂದು ಸೂಚಿಸಲಾಗಿದೆ.












Click it and Unblock the Notifications