ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಳೆಯರೆ ಬನ್ನಿ ಗೆಳತಿಯರೆ ಆಚಾರ್ಯ ಹಬ್ಬಕ್ಕೆ

By Prasad
|
Google Oneindia Kannada News

ಬೆಂಗಳೂರು, ಮಾ. 4 : ಪ್ರತಿವರ್ಷ ಆಚಾರ್ಯ ವಿದ್ಯಾಸಂಸ್ಥೆ ನಡೆಸುವ ವಾರ್ಷಿಕ 'ಆಚಾರ್ಯ ಹಬ್ಬ'ದ ಸಿದ್ಧತೆಗೆ ಭರ್ಜರಿ ಚಾಲನೆ ದೊರೆತಿದೆ. ಭಾರತದ ಅತಿದೊಡ್ಡ ಕಾಲೇಜು ವಿದ್ಯಾರ್ಥಿಗಳ ಹಬ್ಬ ಎಂದು ಖ್ಯಾತಿ ಪಡೆದಿರುವ ಈ ಸಂಭ್ರಮಕ್ಕೆ ಸಿದ್ಧತೆಯೇ ಈಪರಿಯಾಗಿರಬೇಕಾದರೆ ಮಾ.28 ಮತ್ತು 29ರಂದು ನಡೆಯಲಿರುವ ರಾಷ್ಟ್ರೀಯ ಹಬ್ಬ ಇನ್ನು ಹೇಗಿರುತ್ತದೋ?

ಇದು ಬರೀ ಹಬ್ಬವಲ್ಲ ಇದು ಸಂಪ್ರದಾಯ ಎಂಬ ಅಡಿಬರಹವಿರುವ 'ಆಚಾರ್ಯ ಹಬ್ಬ 2014'ದಲ್ಲಿ ಇಡೀ ಭಾರತದಿಂದ 20 ಸಾವಿರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ಈ ಸಂಭ್ರಮದಲ್ಲಿ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು, ಫ್ಯಾಷನ್ ಶೋ, ನಾಟಕ, ಹಲವಾರು ಕ್ರೀಡೆಗಳು ನಡೆಯಲಿದ್ದು, ಹಲವಾರು ಖ್ಯಾತನಾಮರು ಭಾಗವಹಿಸುತ್ತಿದ್ದಾರೆ.

ಹೆಸರಘಟ್ಟ ರಸ್ತೆಯಲ್ಲಿರುವ ಆಚಾರ್ಯ ಸಮೂಹ ಸಂಸ್ಥೆಯ 11 ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಬ್ಬದ ಸಿದ್ಧತೆಯ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಿದ್ಧತೆಯ ಪ್ರಾರಂಭೋತ್ಸವ ಹೇಗೆ ನಡೆಯಿತು ಎಂಬುದನ್ನು ಈ ಚಿತ್ರಗಳಲ್ಲಿ ನೋಡಿರಿ.

ಗುಡಗುಡನೆ ಬಂದವು ನೋಡಿ ಬ್ಯಾನರ್ ಹಿಡಿದ ಬುಲೆಟ್ಟುಗಳು

ಗುಡಗುಡನೆ ಬಂದವು ನೋಡಿ ಬ್ಯಾನರ್ ಹಿಡಿದ ಬುಲೆಟ್ಟುಗಳು

ಆಚಾರ್ಯ ಹಬ್ಬ 2014ರ ಬ್ಯಾನರ್ ಹಿಡಿದ ಬುಲೆಟ್ ಗಳ ಮೆರವಣಿಗೆಯೊಂದಿಗೆ ಹಬ್ಬಕ್ಕೆ ಭರ್ಜರಿ ಚಾಲನೆ ದೊರೆಯಿತು. ಮೈದಾನದಲ್ಲಿ ಬುಲೆಟ್ಟುಗಳು ಗುಡಗುಡ ಶಬ್ದ ಮಾಡುತ್ತಿದ್ದರೆ, ವಿದ್ಯಾರ್ಥಿಗಳ ಹೃದಯ ಢವಢವ ಎನ್ನುತ್ತ ತಾಳ ತಟ್ಟುತ್ತಿತ್ತು.

ಹುಲಿ ವೇಷವನ್ನು ನೋಡಿ ಪುಳಕಿತರಾದ ವಿದ್ಯಾರ್ಥಿ ಸಮೂಹ

ಹುಲಿ ವೇಷವನ್ನು ನೋಡಿ ಪುಳಕಿತರಾದ ವಿದ್ಯಾರ್ಥಿ ಸಮೂಹ

ಆಚಾರ್ಯ ಹಬ್ಬದ ಲಾಂಛನವಾಗಿರುವ ಹುಲಿಯ ವೇಷ ಧರಿಸಿದ ವ್ಯಕ್ತಿ ವಿದ್ಯಾರ್ಥಿಗಳೊಂದಿಗೆ ಬೆರೆತು ನರ್ತಿಸುತ್ತಿದ್ದಾಗ ವಿದ್ಯುತ್ ಸಂಚಾರವಾದಂತೆ ಭಾಸವಾಗುತ್ತಿತ್ತು.

ಹಬ್ಬದ ಥೀಮ್ ಹಾಡಿಗೆ ಹುಚ್ಚೆದ್ದು ಕುಣಿದ ವಿದ್ಯಾರ್ಥಿಗಳು

ಹಬ್ಬದ ಥೀಮ್ ಹಾಡಿಗೆ ಹುಚ್ಚೆದ್ದು ಕುಣಿದ ವಿದ್ಯಾರ್ಥಿಗಳು

ಕನ್ನಡ ಚಲನಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುತ್ತಿರುವ ಕಾಲೇಜಿನ ವಿದ್ಯಾರ್ಥಿ ಬಿಜು (Rapper) ಬಿಡುಗಡೆ ಮಾಡಿದ ಹಬ್ಬದ ಥೀಮ್ ಹಾಡಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹುಚ್ಚೆದ್ದು ಕುಣಿದರು.

ಬುಲೆಟ್ ಮೇಲೆ ಹುಲಿ ಸವಾರಿ

ಬುಲೆಟ್ ಮೇಲೆ ಹುಲಿ ಸವಾರಿ

ಆಚಾರ್ಯ ಹಬ್ಬ 2014 ಲಾಂಛನವಾಗಿರುವ ಹುಲಿ ವೇಷಧಾರಿ ಬುಲೆಟ್ ಓಡಿಸಿ ಎಲ್ಲರ ಹರ್ಷೋದ್ಘಾರಕ್ಕೆ ಕಾರಣರಾದರು.

ಕಟ್ಟಡದ ಮೇಲಿಂದ ಇಳಿಬಿದ್ದಿರುವ ಬೃಹತ್ ಬ್ಯಾನರ್

ಕಟ್ಟಡದ ಮೇಲಿಂದ ಇಳಿಬಿದ್ದಿರುವ ಬೃಹತ್ ಬ್ಯಾನರ್

ಹಬ್ಬದ ವಿವರಗಳನ್ನು ತಿಳಿಸುವ ಬೃಹತ್ ಬ್ಯಾನರನ್ನು ಕಟ್ಟಡದ ಮೇಲಿಂದ ಇಳಿಬಿಡಲಾಗಿತ್ತು. ಹಬ್ಬ ಮಾರ್ಚ್ 28, 29ರಂದು ನಡೆಯಲಿದೆ.

ಪ್ರಿನ್ಸಿಪಾಲರಿಂದ ವಿದ್ಯಾರ್ಥಿಗಳಿಗೆ ಪ್ರಮಾಣ ಬೋಧನೆ

ಪ್ರಿನ್ಸಿಪಾಲರಿಂದ ವಿದ್ಯಾರ್ಥಿಗಳಿಗೆ ಪ್ರಮಾಣ ಬೋಧನೆ

ಎಲ್ಲ 11 ಕಾಲೇಜುಗಳು ಪ್ರಿನ್ಸಿಪಾಲರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ, ಹಬ್ಬದ ಯಶಸ್ಸಿಗಾಗಿ ಟೊಂಕಕಟ್ಟಿ ದುಡಿಯುವ ಬೋಧನೆಯನ್ನು ಬೋಧಿಸಿದರು.

ಹೋಗೋಣ ಕಾಲೇಜಿಗೆ ಆಚಾರ್ಯ ಹಬ್ಬಕ್ಕೆ

ಹೋಗೋಣ ಕಾಲೇಜಿಗೆ ಆಚಾರ್ಯ ಹಬ್ಬಕ್ಕೆ

20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಈ ಹಬ್ಬಕ್ಕೆ ಸಿದ್ಧತೆ ಆಚಾರ್ಯ ಸಂಸ್ಥೆಯಲ್ಲಿ ಭರ್ಜರಿಯಾಗಿ ಸಾಗಿದೆ.

ರಂಜಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು

ರಂಜಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು

ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟಿದ್ದ ವಿದ್ಯಾರ್ಥಿಗಳು ಮೈದಾನದಲ್ಲಿ ಕಲೆತು ಆಕಾಶ ಭೂಮಿ ಒಂದು ಮಾಡುವಂತೆ ಕೇಕೆ ಹಾಕಿ ರಂಜಿಸಿದರು.

English summary
Acharya Habba is a National Techno- cultural fest hosted by Acharya Institutes every year. Over 20,000 students from various colleges across India will be participating in it. The preparations for Acharya Habba 2014 were launched at Acharya Institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X