ಬನ್ನೇರುಘಟ್ಟ ಪಾರ್ಕ್ ನಲ್ಲಿ ಇಸ್ರೇಲ್ ನಿಂದ ತಂದಿದ್ದ ಜೀಬ್ರಾ ಸಾವು
ಬೆಂಗಳೂರು, ಜುಲೈ 25 : ಇಸ್ರೇಲ್ ನಿಂದ ಬಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಂದ ಚೆಂದದಿಂದ ಓಡಾಡಿಕೊಂಡಿದ್ದ ಹೆಣ್ಣು ಜೀಬ್ರಾವೊಂದು ಮೃತಪಟ್ಟಿದೆ.
ಸೋಮವಾರ ರಾತ್ರಿ ಜೀಬ್ರಾ ಓಡಾಡುವಾಗ ಮರ ನೆಡಲೆಂದು ತೆಗಿಸಿದ್ದ ಗುಂಡಿಗೆ ಹಿಮ್ಮುಖವಾಗಿ ಬಿದ್ದು, ಮೇಲೇಳಲು ಸಾಧ್ಯವಾಗದೆ ಮೃತಪಟ್ಟಿದೆ.

2015 ನವೆಂಬರ್ ನಲ್ಲಿ ಇಸ್ರೇಲ್ ನ ಜೈವಿಕ ಕೇಂದ್ರದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಜೀಬ್ರಾಗಳನ್ನು ತರಿಸಲಾಗಿತ್ತು. 6 ತಿಂಗಳ ಕಾಲ ಪ್ರತ್ಯೇಕವಾಗಿರಿಸಿ ನಂತರ ಪ್ರವಾಸಿಗರಿಗೆ ಜೀಬ್ರಾ ವೀಕ್ಷಿಸಲು ಅನುಮತಿ ಕಲ್ಪಿಸಿಕೊಡಲಾಗಿತ್ತು
ಇದೀಗ ಸಾವನಪ್ಪಿದ ಜೀಬ್ರಾ ಗರ್ಭ ಧರಿಸಿತ್ತೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಬೇಸರ ಮೂಡಿಸಿದೆ.












Click it and Unblock the Notifications