ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ

ಏಪ್ರಿಲ್ 16ರಿಂದ ದಿನ ಬಿಟ್ಟು ದಿನ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಕೊನೆಯ ಬಾರಿ ಮೇ 2ರಂದು ಬೆಂಗಳೂರಿನಲ್ಲಿ ಮಳೆ ಸುರಿದಿದ್ದು ಮೇ 6 ಮತ್ತು 7ರಂದು ಮತ್ತೆ ಮಳೆ ಸುರಿಯಲಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 5: ಬೆಂಗಳೂರಿನಲ್ಲಿ ಹಲವು ದಿನಗಳಿಂದ ಮುಂಗಾರು ಪೂರ್ವ ಮಳೆ ಬೀಳುತ್ತಿದ್ದು ಶನಿವಾರ ಮತ್ತು ಭಾನುವಾರ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಮಾಹಿತಿ ನೀಡುವ 'ಸ್ಕೈಮೆಟ್ ವೆದರ್' ಹೇಳಿದೆ.

ಏಪ್ರಿಲ್ 16ರಿಂದ ದಿನ ಬಿಟ್ಟು ದಿನ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಕೊನೆಯ ಬಾರಿ ಮೇ 2ರಂದು ಬೆಂಗಳೂರಿನಲ್ಲಿ ಮಳೆ ಸುರಿದಿದ್ದು ಮೇ 6 ಮತ್ತು 7ರಂದು ಮತ್ತೆ ಮಳೆ ಸುರಿಯಲಿದೆ.

Pre-Monsoon rains in Bengaluru on this weekend

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶ 36 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 24.4 ಡಿಗ್ರಿಗೆ ಏರಿಕೆಯಾಗಿದ್ದು ಕಾದ ಬಾಣಲಿಯಂತಾದ ನಗರದ ಜನತೆಗೆ ಮಳೆಯ ಸಿಂಚನ ತಂಪೆರೆಚಲಿದೆ.

ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ

ಇದೇ ವೇಳೆ ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಾರುತಗಳು ಬೀಸುತ್ತಿದ್ದು ಕರ್ನಾಟಕದ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯಲಿದೆ.

ಇದಲ್ಲದೆ ದಾವಣಗೆರೆ, ಕಲಬುರ್ಗಿ, ಹಾಸನ, ಉಡುಪಿ, ಕೊಡಗು, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಬೀದರ್, ಚಾಮರಾಜನಗರ, ಬಿಜಾಪುರ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ರಾಜ್ಯದಾದ್ಯಂತ ಇನ್ನೆರಡು ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಜತೆಗೆ ಮಳೆ ಮಾರುತಗಳು ಬೆಂಗಳೂರಿನಲ್ಲಿ ಬಂದು ನೆಲೆ ನಿಲ್ಲಲಿದ್ದು ಮುಂದಿನ 48 ಗಂಟೆಗಳಲ್ಲಿ ಮಳೆ ಸುರಿಯಲಿದೆ. ಇದೇ ರೀತಿ ಮೇ ತಿಂಗಳಾದ್ಯಂತ ಬೆಂಗಳೂರಿನಲ್ಲಿ ಆಗಿಂದಾಗೆ ಮಳೆ ಸುರಿಯಲಿದೆ ಎಂದು ಸ್ಕೈಮೆಟ್ ವೆದರ್ ಹೇಳಿದೆ.

English summary
Now rainy days are foreseen for the Bengaluru. As per Skymet Weather, rains are expected to make an appearance over the city within the next 24 to 48 hours. And also rains were confined to the coastal zones of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X