Get Updates
Get notified of breaking news, exclusive insights, and must-see stories!

ಆಡೂರರ 'ಗೊಜ್ಜವಲಕ್ಕಿ' ಛಂದ ಪುಸ್ತಕ ರಿಲೀಸ್

"ಇತ್ತಲಾಗ ಅಕೀವು ಸಾರ್ವಜನಿಕ - ಸಾಮೂಹಿಕ ಕುಬಸ, ಮಂದಿ ಮಾಡೋವು ಹಂಗ ಚಾಲ್ತಿ ಇದ್ದವು. ಒಮ್ಮೊಮ್ಮೆ ಅಂತು ದಿವಸಕ್ಕ ಎರೆಡೆರಡು. ಒಂದ ದಿವಸ ಯಾರದೊ ಮನಿ ಕುಬಸಾ ಮುಗಿಸಿಕೊಂಡ ಬಂದೋಕಿನ

"ರ್ರಿ, ಯಾರದರ ಮನ್ಯಾಗ ತೂಗ ಮಂಚ ಇದ್ದರ ಕೇಳ್ರಿ, ತೂಗ ಮಂಚ ಕುಬಸಾ ಮಾಡ್ಕೋಬೇಕು" ಅಂದ್ಲು. ನಂಗ ಈ ಸರತೆ ಭಾಳ ತಲಿಕೆಟ್ಟತ.

" ಲೇ, ನಿನ್ನೌನ, ನೀ ಒಂದ ಬಸರಾಗೋದರಾಗ ಇದ್ದ ಮನಿ ಮಂಚನ ತುಗ್ಯಾಡಲಿಕತ್ತದ ನಿನ್ನ ವೇಟಿಗೆ, ಮತ್ತ ತೂಗ ಮಂಚ ಅಂತ ತೂಗ ಮಂಚಾ, ಇನ್ನ ಹಡೇಯೋ ತನಕ ಯಾವದರ ಕುಬಸಾ ಅಂದರ ನೋಡ ನಿನ್ನ" ಅಂತ ಸಿಟ್ಟಲೇ ಒದರಿದೆ

"ಅಯ್ಯ, ಒಂದನೇದಕ್ಕ ಇಷ್ಟ ಮಾಡ್ತಾರ, ಅದೇನ ಹಂಗ ಹಗಲಗಲ ಬರತದ ಜೀವನದಾಗ. ಮುಂದ ನಾ ಹತ್ತ ಹಡದರು ನಂಗ ಯಾರು ಮೂಸ ನೋಡಂಗಿಲ್ಲಾ, ಏನೇನ ಪದ್ಧತಿ ಅವ ಅವನೇಲ್ಲಾ ಈಗ ಮಾಡಿ ಮುಗಸಿಬಿಡಬೇಕು" ಅಂತ ನಂಗ ತಿವದು, ಕಡಿಕೆ ಅಲ್ಲೆ ನೇಕಾರ ನಗರದಾಗ ಯಾರದೊ ಸಂಬಂಧ ಇಲ್ಲದವರ ಮನ್ಯಾಗ ತೂಗಮಂಚ ಇತ್ತಂತ ಅವರ ಮನ್ಯಾಗ ಕುಬಸಾ ಮಾಡಿಸಿಗೊಂಡ ಬಂದ್ಲು.

ಬರಬರತ ಇಕಿ ಈ ಪರಿ ಕುಬಸಾ ಮಾಡಿಸ್ಗೋಳೊದ ನೋಡಿ ನಮ್ಮವ್ವಗೂ ತಲಿ ಕೆಟ್ಟತ, ಇನ್ನ ಇಕಿನ್ನ ಹಂಗ ಬಿಟ್ಟರ ಇಕಿ ಹನ್ನೆರಡ ಹದಿಮೂರ ತಿಂಗಳಾದರು ಕುಬಸದ ಆಶಾಕ್ಕ ಹಡಿಲಿಕ್ಕಿಲ್ಲಾ ಅಂತ ಹೆದರಿ ಎಂಟರಾಗ ಭಡಾ-ಭಡಾ ಅತ್ತಿಮನಿ ಸೀಮಂತ ಫಿಕ್ಸ್ ಮಾಡಿಬಿಟ್ಟಳು.

Prashant Adur's Gojjavalakki kannada book chandra prakashana

"ನೋಡ್ವಾ ಹಂಗ ಒಮ್ಮೆ ಅತ್ತಿ ಮನ್ಯಾಗ ಸೀಮಂತ ಆದ ಮ್ಯಾಲೆ ಎಲ್ಲಾ ಕುಬಸ ಬಂದ. ನೀ ಹೊರಗೆಲ್ಲೂ ಹೋಗಂಗಿಲ್ಲಾ, ಮುಂದ ಒಂದ ವಾರಕ್ಕ ನೀ ಹಡಿಲಿಕ್ಕೆ ಹೋಗಬೇಕು, ಇನ್ನ ಸಾಕ ತಿರಗೋದು, ಒಂದ ಸ್ವಲ್ಪ ರೆಸ್ಟ್ ತೊಗೊ. ಕಡಿಕೆ ಒಂದ ಹೋಗಿ ಒಂದ ಮಾಡ್ಕೊಂಡಿ" ಅಂತ ಜೋರ ಮಾಡಿದ್ಲು.

ಪಾಪ, ನನ್ನ ಹೆಂಡತಿ ಮನಸ್ಸಿನಾಗ ಇನ್ನು ಕುಬಸಾ ಭಾಳ ಉಳದಿದ್ವು, ಅವರ ಮೌಶಿಗೊಳ ಇನ್ನೂ ಕುಬಸಾ ಮಾಡಿದ್ದಿಲ್ಲಾ, ಧಾರವಾಡದ ಅತ್ಯಾ ಮಾಡಿದ್ದಿಲ್ಲಾ, ಅವರೇಲ್ಲಾ " ನೀ ಮೊದ್ಲ ಹೊರಗಿನ್ವೇಲ್ಲಾ ಮುಗಿಸಿಗೋವಾ, ನಾವೇನ ಮನಿ ಮಂದಿ ಎಲ್ಲೆ ಓಡಿ ಹೋಗ್ತೇವಿನ? ನೀ ಯಾವಗ ಅಂತಿ ಆವಾಗ ಮಾಡ್ತೇವಿ, ಒಟ್ಟ ಹಡಿಯೊಕಿಂತಾ ಮುಂಚೆ ಹೇಳ ಸಾಕ" ಅಂತ ಹೇಳಿದ್ದರು. ನಮ್ಮವ್ವ ಅತ್ತಿ ಮನಿ ಸೀಮಂತ ಡಿಸೈಡ ಮಾಡಿ ಎಲ್ಲಾದಕ್ಕೂ ಬ್ರೇಕ್ ಹಾಕಿ ಬಿಟ್ಟಳು.

ಇದು ನನ್ನ 'ಗೊಜ್ಜವಲಕ್ಕಿ'ಪುಸ್ತಕದ 'ಸಾಧನೇಯ ಸಮಾವೇಶ' ಪ್ರಬಂಧದ ಆಯ್ದ ಭಾಗ.[ಸಾಯಂಕಾಲದ ತಿಂಡಿ : ಗೊಜ್ಜವಲಕ್ಕಿ]

ಆತ್ಮೀಯರೇ
ಈ ಗೊಜ್ಜವಲಕ್ಕಿ ಪುಸ್ತಕ ಇದೇ ದಿನಾಂಕ 20ರಂದು ಬೆಂಗಳೂರಿನ ಉದಯಭಾನು ಕಲಾ ಸಂಘ, ಗವಿಪುರ ಸಾಲು ಛತ್ರಗಳ ಎದರು, ರಾಮಕೃಷ್ಣ ಆಶ್ರಮದ ಹಿಂಭಾಗ, ಕೆಂಪೆಗೌಡ ನಗರ, ಬೆಂಗಳೂರನಲ್ಲಿ ಸರಿಯಾಗಿ 10.00ಕ್ಕೆ ಬಿಡುಗಡೆಯಾಗಲಿದೆ...ದಯವಿಟ್ಟು ತಾವು ಈ ಕಾರ್ಯಕ್ರಮಕ್ಕ ಸಹಕುಟಂಬ ಪರಿವಾರ ಸಹಿತ ಬರ್ರಿ.

ಈ ಪುಸ್ತಕವನ್ನ 'ಛಂದ'ಪುಸ್ತಕದ ವಸುಧೇಂದ್ರವರು ಪ್ರಕಟಿಸುತ್ತಿದ್ದಾರೆ, ಪುಸ್ತಕದ ಬೆನ್ನುಡಿಯನ್ನ ಗಿರೀಶ ಹತ್ವಾರ (ಜೋಗಿ) ಅವರು ಬರದಿದ್ದು, ಮುಖಪುಟವನ್ನ ವಿನ್ಯಾಸಗೊಳಿಸಿರುವವರು ವಿನಯ ಸಾಯ. ಇನ್ನ ಕರಡು ತಿದ್ದುಪಡಿ ಮಾಡಿದವರು ಅನಂತ ಹುದಂಗಜೆ ಹಾಗೂ ರೇಖಾ ಚಿತ್ರಗಳನ್ನು ಮಾಡಿಕೊಟ್ಟವರು ಮಹಾಂತೇಶ ದೊಡ್ಡಮನಿ. ಹಂಗ ಪೂರ್ತಿ ಬುಕ್ ಬರದಂವ ನಾನ ಮತ್ತ ...:)

ಕನ್ನಡಾ ಒನ್ ಇಂಡಿಯಾದ ಸಮಸ್ತ ಓದುಗರು ಈ ಕಾರ್ಯಕ್ರಮಕ್ಕ ಬಂದು ಗೊಜ್ಜವಲಕ್ಕಿ ತೊಗೊಂಡ ಕಾರ್ಯಕ್ರಮ ಯಶಸ್ವಿ ಮಾಡಿಕೊಡಿ ಅಂತ ನಿಮ್ಮಲ್ಲಿ ವಿನಂತಿಸುತ್ತೇನೆ. ಲಗೂನ ಬಂದವರಿಗೆ ಟಿಫಿನ್ ವ್ಯವಸ್ಥಾನೂ ಅದ ಮತ್ತ...ಲಗೂನ ಬರ್ರಿ.

ನಿಮ್ಮ ಆಗಮನದ ನೀರೀಕ್ಷೆಯಲ್ಲಿ
ಪ್ರಶಾಂತ ಆಡೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+