Viral Video: ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಚೇಷ್ಟೆ: 20 ಮಿಲಿಯನ್ ಫಾಲೋವರ್ಸ್ ಇರುವ ಯೂನೆಸ್ ಜರೋಗೆ ಸಂಕಷ್ಟ!
Viral Video: ಬರೋಬ್ಬರಿ 20 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಜರ್ಮನ್ ಇನ್ಫೂಯೆನ್ಸರ್ ಯೂನೆಸ್ ಜರೋ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ವಿಡಿಯೋ ಮಾಡಿ ಬೆಂಗಳೂರಿನ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಇರುವ ಹಾಗೂ ಡಿಜಿಟಲ್ ಕ್ರಿಯೇಟರ್ ಯೂನೆಸ್ ಜರೋ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಇನ್ನೂ ಹಸಿರಾಗಿದೆ. ಈ ರೀತಿ ಇರುವಾಗಲೇ ವಿಶ್ವದಾದ್ಯಂತ ಭಾರೀ ಫಾಲೋವರ್ಸ್ ಹೊಂದಿರುವ ಯೂನೆಸ್ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.
ಆರ್‌ಸಿಬಿ ಸಂಭ್ರಮಾಚರಣೆಗೆ ಎಲ್ಲರೂ ಬನ್ನಿ ಎಂದು ಪೋಸ್ಟ್ ಮಾಡಿಕೊಂಡು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಎಡವಟ್ಟು ಮಾಡಿಕೊಂಡಿತ್ತು ಎನ್ನುವಂತೆಯೇ ಇದೀಗ ಯೂನೆಸ್ ಜರೋ ಮಾಡಿರುವ ಕೆಲಸವು ಬೆಂಗಳೂರು ಪೊಲೀಸರಿಗೆ ಭಾರೀ ತಲೆನೋವು ತಂದೊಡ್ಡಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ಗೆ ಬರುವ ಮುಂಚೆ "ಚರ್ಚ್ ಸ್ಟ್ರೀಟ್... ನಾವು ಬರುತ್ತಿದ್ದೇವೆ" ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಚರ್ಚ್ ಸ್ಟ್ರೀಟ್‌ಗೆ ಭೇಟಿ ನೀಡುವ ಬಗ್ಗೆ ಬರೆದುಕೊಂಡಿದ್ದರು. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೂರಾರು ಜನ ಅಭಿಮಾನಿಗಳು ಯೂನೆಸ್ ಜರೋ ಬರುವ ನಿರೀಕ್ಷೆಯಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಪ್ರದೇಶದಲ್ಲಿ ಸೇರಿದ್ದರು.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದಿರುವ ಅನಾಹುತದಿಂದ ಬೆಂಗಳೂರಿನ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇಂದು ಸಹ ಯೂನೆಸ್ ಜರೋ ಅವರನ್ನು ನೋಡುವುದಕ್ಕೆ ಹೆಚ್ಚು ಜನ ಸೇರಿದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಜನಸಂದಣಿ ಹೆಚ್ಚುತ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಮಧ್ಯಪ್ರವೇಶ ಮಾಡಿರುವುದಾಗಿ ಬೆಂಗಳೂರು ಪೊಲೀಸರು ಹೇಳಿದ್ದು.
ಯೂನೆಸ್ ಜರೋ ಅವರನ್ನು ಸ್ಥಳದಿಂದ ಬೇರೆ (ತಾತ್ಕಾಲಿಕವಾಗಿ ಬಂಧಿಸಿದ್ದಾರೆ) ಕಡೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಶೋಗಳನ್ನು ಆಯೋಜನೆಯನ್ನು ಮಾಡುವುದಕ್ಕಿಂತ ಮುಂಚಿತವಾಗಿ ಆಯಾ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಪೊಲೀಸರು ವಿವರಿಸಿದ್ದಾರೆ.
ಬೆಂಗಳೂರಿನ ಹೃದಯಭಾಗ ಎಂದೇ ಖ್ಯಾತಿ ಗಳಿಸಿರುವ ಚರ್ಚ್ ಸ್ಟ್ರೀಟ್ ವಾರಾಂತ್ಯದಲ್ಲಿ ಜನರಿಂದ ತುಂಬಿರುತ್ತದೆ. ವಿವಿಧ ಶೋಗಳು ಹಾಗೂ ವಸ್ತುಗಳ ಮಾರಾಟದಂತಹ ಕೆಲಸಗಳು ಇಲ್ಲಿ ನಡೆಯುತ್ತವೆ. ಆದರೆ, ಅದಕ್ಕೆ ಪೊಲೀಸರಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆಗ ಪೊಲೀಸರು ರಕ್ಷಣೆ ಹಾಗೂ ಜನನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರಿನಲ್ಲಿ ಈಚೆಗೆ ಆರ್‌ಸಿಬಿಯ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಇದಾದ ಮೇಲೆ ಬೆಂಗಳೂರು ಪೊಲೀಸರು ಈ ರೀತಿಯ ವಿಚಾರದಲ್ಲಿ ಇನ್ನಷ್ಟು ಹೆಚ್ಚು ಮುಂಜಾಗ್ರತೆ ವಹಿಸುತ್ತಿದ್ದಾರೆ.












Click it and Unblock the Notifications