Prajwal Revanna: ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಜತೆ ಕೈಜೋಡಿಸಿದ್ದ ಕಾಂಗ್ರೆಸ್‌ನದ್ದು ತಪ್ಪಿದೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಮೇ 01: ಪ್ರಜ್ವಲ್ ರೇವಣ್ಣ ಪ್ರಕರಣ ಇತ್ತೀಚಿನದ್ದಲ್ಲ, ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಅಂದು ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಹಾಗಾದರೆ ಪ್ರಕರಣದ ಕಾಂಗ್ರೆಸ್‌ನವರು ಭಾಗಿಯಾಗಿದ್ದಾರಾ?. ಪ್ರಜ್ವಲ್ ದೇಶ ಬಿಡುವ ವಿಚಾರ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಮೊದಲೇ ಗೊತ್ತಿದ್ದರು ಕಾಂಗ್ರೆಸ್ ಸರ್ಕಾರ ಕತ್ತೆ ಕಾಯುತ್ತಿತ್ತಾ? ಎಂದು ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ವೇಳೆ ಸಾಕಷ್ಟು ದೂರು ಕೇಳಿ ಬರುತ್ತವೆ. ಒಬ್ಬರು ಕೆಲಸದಲ್ಲಿ ಮುಂದೆ ಬರುತ್ತಾರೆ ಎಂದರೆ ದೂರು ಬರೋದು ಸಹಜ ಎಂದು ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪ್ರಜ್ವಲ್ ರೇವಣ್ಣ ಬಗ್ಗೆ ಮೊದಲೇ ಮಾಹಿತಿ ಎಂಬ ಆರೋಪಗಳಿಗೆ ಅವರು ಉತ್ತರಿಸಿದರು.

Pralhad Joshi Alleged JDS alliance Party Congress Wrong also here in Prajwal Revanna Case

ಗಮನಿಸಬೇಕಾದ ವಿಷಯವೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹಿಂದೆ ಮೈತ್ರಿ ಮಾಡಿಕೊಂಡಿತ್ತು. ಆಗ ಈ ಪ್ರಕರಣದಲ್ಲಿ ಕಾಂಗ್ರೆಸ್‌ ಭಾಗಿಯಾಗಿದ್ದಾರಾ? ಎಂದು ಜೋಶಿ ಪ್ರಶ್ನಿಸಿದರು.

ಕುಮಾರಸ್ವಾಮಿ ಸಿಎಂ ಮಾಡಿದ್ದು ಕಾಂಗ್ರೆಸ್‌: ಜೋಶಿ

ಬಿಜೆಪಿ ಇತ್ತೀಚೆಗೆ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆದರೆ ಕಾಂಗ್ರೆಸ್‌ನವರು ಈ ವರ್ಷಗಳ ಹಿಂದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. ಎಚ್‌ಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದರು. ಪ್ರಜ್ವಲ್ ರೇವಣ್ಣ ತಂದೆ ಎಚ್‌ಡಿ ರೇವಣ್ಣ ಅವರನ್ನು ಮಂತ್ರಿ ಮಾಡಿದ್ದರು ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದರು.

ಬಿಜೆಪಿ -ಜೆಡಿಎಸ್ ಮೈತ್ರಿ ಆದ ಮೇಲೆ ಅಶ್ಲೀಲ ವಿಡಿಯೋ ಘಟನೆ ನಡೆದಿರುವುದಲ್ಲ. ಮೇಲ್ನೋಟಕ್ಕೆ ಇದು ಅನೇಕ ವರ್ಷಗಳಿಂದ ನಡೆದಂತೆ ಕಂಡು ಬರುತ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ದೇಶ ಬಿಡುವ ಮಾಹಿತಿ ಮಾಧ್ಯಮಗಳಲ್ಲಿ ವರದಿ ಆದರೂ ಆಡಳಿತದಲ್ಲಿರುವ ಕಾಂಗ್ರೆಸ್‌ನವರು ನೀವು ಏನು ಕತ್ತೆ ಕಾಯುತ್ತಿದ್ದೀರಾ ಎಂದು ಕಿಡಿ ಕಾರಿದರು.

Pralhad Joshi Alleged JDS alliance Party Congress Wrong also here in Prajwal Revanna Case

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಗೊತ್ತಿಲ್ಲ ಆದರೆ 'ದಾಲ್ ಮೇ ಕುಚ್ ಕಾಲಾ ಹೈ' ಏನೋ ಹೊಂದಾಣಿಕೆ ಇರಬಹುದು.

ಕಾಂಗ್ರೆಸ್ ದಾಳಿ ಮಾಡುವುದು ಸರಿಯಲ್ಲ

ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಆದರೆ ಆಡಳಿತ ಪಕ್ಷದಲ್ಲಿರುವವರು ದಾಳಿ ಮಾಡಿ,‌ ಹಲ್ಲೆ ಮಾಡೋದು ಸರಿಯಲ್ಲ. ಸರ್ಕಾರ ನಿಮ್ಮ ಕೈಯಲ್ಲಿದ್ದರೂ ಎಫ್ ಐ ಆರ್ ದಾಖಲಿಸುವುದು ಏಕೆ ತಡವಾಯಿತು? ಕಸಾಯಿಖಾನೆಗಳಲ್ಲಿ 21 ರಿಂದ 28 ರ ತನಕ ಏನು ಮಾಡಿದ್ದೀರಿ ಎಂದರು.

ಪ್ರತಿಭಟನೆಯು ಕಾಂಗ್ರೆಸ್ ಸಂಸ್ಕೃತಿ ತೋರುತ್ತದೆ

ರಾಜ್ಯದ ಸರ್ಕಾರದಿಂದ ಬಂಧಿಸಲು ಆಗದಿದ್ದರೆ, ಕೇಂದ್ರ ಸರ್ಕಾರಕ್ಕೆ ತಿಳಸಬೇಕಿತ್ತು. ಕುಮಾರಸ್ವಾಮಿ ಅವರಿಗೆ ಮೊದಲೇ ಆರೋಗ್ಯ ಸರಿ ಇಲ್ಲಾ. ಈ ರೀತಿ ಪ್ರತಿಭಟನೆ ಮಾಡಿರುವುದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಪ್ರಜ್ವಲ್ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ಆಗಬೇಕು ಎಂದು ಹೇಳಿದರು.

ಕೇಸ್‌ನ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ: ಜೋಶಿ ಆರೋಪ

ಸತ್ಯ ಕಂಡು ಬಂದಲ್ಲಿ ಕಠೋರ ಶಿಕ್ಷೆ ಆಗಲೇಬೇಕು. ರಾಜ್ಯದ ಮಹಿಳೆಯರ ಸುರಕ್ಷಿತೆಯಲ್ಲಿ ಹೊಂದಾಣಿಕೆ ಇಲ್ಲ.

ಕಾಂಗ್ರೆಸ್ ಅನುಕೂಲಕ್ಕೆ ತಕ್ಕಂತೆ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ವಿಡಿಯೋಗಳು ಬಹಳಷ್ಟು ಆಘಾತಕಾರಿಯಾಗಿವೆ. ಇದು ಅತ್ಯಂತ ನಿಂದನೀಯ ಪ್ರಕರಣ ಆರೋಪಿಗೆ ಕಠೋರ ಶಿಕ್ಷೆಯಾಗಲಿ ಎಂದರು.

ಪ್ರಕರಣದಲ್ಲಿ ಕಾಂಗ್ರೆಸ್‌ ಅಪರಾಧವು ಇದೆ

ಪ್ರತಿಭಟನೆಗೆ ಅನುಮತಿ ಇಲ್ಲದೆ ಖಾಸಗಿ ಹೋಟೆಲ್ ಗೆ ಕಾಂಗ್ರೆಸ್ ನವರು ಹೇಗೆ ನುಗ್ಗಿದರು. ಪ್ರಕರಣದಲ್ಲಿ ಕಾಂಗ್ರೆಸ್ ಸಹ ಘೋರ ಅಪರಾಧ ಮಾಡಿದೆ. ಶೇಕಡಾ 50ರಷ್ಟು ಕಾಂಗ್ರೆಸ್ ತಪ್ಪು ಸಹ ಇದೆ. ಇನ್ನು ಈ‌ ಹಿಂದೆ ರಾಜು ಕಾಗೆ ಮೋದಿ ಮೋದಿ‌ ಅಂತಿದ್ದರು ಈಗ ಏನೋ ಬೈಬೇಕು ಎಂದು ಬೈತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಾವು ಎನ್ನುವ ಪದಗಳನ್ನು ಯಾರ ವಿರುದ್ಧವೂ ಬಳಕೆ ಮಾಡಬಾರದು. ನಾನು ನಕಲಿ‌ ಗಾಂಧಿ ಕುಟುಂಬದ ಕಟು ಟೀಕಾಕಾರ ಆದರೆ ಅವರಿಗೆ ವೈಯಕ್ತಿಕವಾಗಿ ಕೆಟ್ಟದ್ದಾಗಲಿ ಅಂತಾ ಎಂದೂ ಬಯಸಲಿಲ್ಲ.

ನೇಹಾ ಮನೆಗೆ ಅಮತ್ ಶಾ ಭೇಟಿ?

ಬುಧವಾರ ಅಮಿತ್ ಶಾ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಹುಬ್ಬಳ್ಳಿ ಜನ ಅಮಿತ್ ಶಾ ಅವರನ್ನು ನೋಡಲು ಉತ್ಸುಕರಾಗಿದ್ದಾರೆ.

ಹುಬ್ಬಳ್ಳಿ- ಧಾರವಾಡದ ಮೇಲೆ ಅಮಿತ್ ಶಾ ಅವರಿಗೆ ವಿಶೇಷ ಪ್ರೇಮವಿದೆ. ಅವರು ನೇಹಾ ಕುಟುಂಬಸ್ಥರನ್ನು ಭೇಟಿ ಮಾಡಲು ಇಚ್ಛೆಪಟ್ಟರೆ ಭೇಟಿ ಮಾಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+