Prajwal Revanna: ಪ್ರಜ್ವಲ್ ಜೈಲು ಸ್ಥಳಾಂತರಕ್ಕೆ ಬ್ರೇಕ್! ಅಡ್ಡಿಯಾದ ಪ್ರಭಾವಿ ರಾಜಕಾರಣಿ ಯಾರು? ಡಿಜಿಪಿ ಹೇಳಿದ್ದೇನು?

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಮುಖ ಅತ್ಯಾಚಾರ ಪ್ರಕರಣದ ಸಜಾ ಕೈದಿಯಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಗೌಪ್ಯವಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ಪ್ರಭಾವಿ ರಾಜಕಾರಣಿಯೊಬ್ಬರ ಕರೆಯ ಮೇರೆಗೆ ಈ ಸ್ಥಳಾಂತರಕ್ಕೆ ದಿಢೀರ್ ಬ್ರೇಕ್ ಬಿದ್ದಿದೆ. ಹಾಗಾದರೆ ಆ ರಾಜಕಾರಣಿ ಯಾರು? ಗೌಪ್ಯವಾಗಿ ವಾಹನದಲ್ಲಿ ಕರೆದುಕೊಂಡು ಹೋಗುವ ವಿಚಾರ ಲೀಕ್ ಆಗಿದ್ದೇಗೆ?. ಈ ಕುರಿತು ರಾಜ್ಯ ಕಾರಾಗೃಹ, ಸುಧಾರಣಾ ಸೇವಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಇತ್ತೀಚೆಗೆ ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆದಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಸೇರಿದಂತೆ ಕೆಲವು ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಬೇಕೆಂದು ಕಾರಾಗೃಹ ಇಲಾಖೆ ಬೆಂಗಳೂರು ನಗರ ಪೊಲೀಸರು ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬೆಳಗಾವಿಗೆ ನಸುಕಿನ ಜಾವ ಪ್ರಜ್ವಲ್‌ನನ್ನು ಕಾರಾಗೃಹದ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು.

Prajwal Revanna

ಕಾರಾಗೃಹ ಅಧಿಕಾರಿಗಳು, ಪ್ರಜ್ವಲ್ ರೇವಣ್ಣ ಇದ್ದ ವಾಹನ ಬೆಂಗಳೂರಿನಿಂದ ತುಮಕೂರಿನ ಶಿರಾಗೆ ತಲುಪುವ ಹೊತ್ತಿಗೆ ಪ್ರಭಾವಿ ರಾಜಕಾರಣಿಯಿಂದ ಹಿರಿಯ ಪೊಲೀಸ್ ಅಧಿಕಾರಿಗೆ ಕರೆ ಬಂದಿದೆ. ಹೀಗಾಗಿ ಸಿನಿಮೀಯ ರೀತಿಯಲ್ಲಿ ವಾಹನ ಮರಳಿ ಬೆಂಗಳೂರಿನ ಪರಪ್ಪನ ಬಂಧಿಖಾನೆಗೆ ಮರಳಿದೆ. ಈ ಮೂಲಕ ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ಸ್ಥಳಾಂತರ ಮಾಡುವಾಗ ಅರ್ಧಕ್ಕೆ ಮರಳಿದ ಜೈಲಾಧಿಕಾರಿಗಳ ನಡೆ ಮೇಲೆ ಸಾಕಷ್ಟು ಅನುಮಾನಗಳು ಮೂಡಿವೆ. ಘಟನೆ ನಡೆದು ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.

ಪ್ರಭಾವಿ ರಾಜಕಾರಣಿ ಯಾರು?

ಪ್ರಜ್ವಲ್ ಸ್ಥಳಾಂತರ ಬಗ್ಗೆ ಆಕ್ಷೇಪ ಎತ್ತಿದ, ಜೈಲಾಧಿಕಾರಿಗಳಿಗೆ ಪ್ರಭಾವಿ ರಾಜಕಾರಣಿ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದಷ್ಟೇ ಮಾಹಿತಿ ಹೊರ ಬಿದ್ದಿದೆ, ಅಸಲಿಗೆ ಯಾರು ಆ ರಾಜಕಾರಣಿ ಎಂಬುದು ತಿಳಿದು ಬಂದಿಲ್ಲ. ಅವರು ಯಾರೆಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಕಾನೂನು, ಪೊಲೀಸ್, ಕಾರಾಗೃಹ ವ್ಯವಸ್ಥೆಯು ಹಣ, ಅಧಿಕಾರ ಪ್ರಭಾವಕ್ಕೆ ಒಳಗಾಗಬಾರದು ಎಂದು ಅಂತಲೂ ಹಲವರು ಒತ್ತಾಯಿಸಿದ್ದಾರೆ.
15لا
ಕೆಲವು ದಿನಗಳ ಹಿಂದೆ ಕಾರಾಗೃಹದ ಮೇಲೆ ದಾಳಿ ನಡೆದಾಗ ಸಜಾ ಕೈದಿ ಪ್ರಜ್ವಲ್ ಅವರ ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆ ಆಗಿತ್ತು. ಪ್ರಕರಣದಲ್ಲಿ ಬಂಧಿತ ಪ್ರಜ್ವಲ್ ಸೇರಿ ಏಳು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಬೆಂಗಳೂರು ಪೊಲೀಸರು ಶಿಫಾರಸು ಮಾಡಿದ್ದರು. ಡಿಜಿಪಿ ಅಲೋಕ್ ಕುಮಾರ್ ಅವರ ಆದೇಶ ಮೇರೆಗೆ ಪ್ರಜ್ವಲ್ ಸ್ಥಳಾಂತರಕ್ಕೆ ನಿರ್ಧರಿಸಲಾಯಿತು.

ಹಿಂಡಲಗಾ ಜೈಲಿನಲ್ಲಿನ ಭದ್ರತೆ ಹಾಗೂ ಪ್ರಜ್ವಲ್ ವಿರುದ್ಧ ಬೇರೆ ಪ್ರಕರಣಗಳ ವಿಚಾರಣೆಯು ನ್ಯಾಯಾಲಯ ಹಂತದಲ್ಲಿ ನಡೆಯುತ್ತಿದೆ. ಈ ವಿಚಾರ ಮುಂದಿಟ್ಟು ಪ್ರಜ್ವಲ್ ವರ್ಗಾವಣೆ ಆದೇಶವನ್ನು ಕೊನೇ ಕ್ಷಣದಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಪ್ರಜ್ವಲ್‌ಗೆ ತಾತ್ಕಾಲಿಕ ಬ್ರೇಕ್ ಸಿಕ್ಕಂತಾಗಿದೆ.

ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಪೊಲೀಸ್ ಭದ್ರತೆಯಲ್ಲಿ ಪ್ರಜ್ವಲ್ ಸ್ಥಳಾಂತರಕ್ಕೆ ಮುಂದಾಗಿ ವಿಫಲಗೊಂಡು ಮರಳಿ ಬೆಂಗಳೂರಿಗೆ ಕರೆತಂದ ಪ್ರಸಂಗಕ್ಕೆ ರಾಜ್ಯ ಕಾರಾಗೃಹ, ಸುಧಾರಣಾ ಸೇವಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಉತ್ತರಿಸಿದ್ದಾರೆ.

ಇವರು ಪ್ರಭಾವಿಗಳ ಹೆಸರು ಎತ್ತದೇ ಹಿಂಡಲಗಾ ಜೈಲಿನಲ್ಲಿ ಸಜಾ ಕೈದಿ ಪ್ರಜ್ವಲ್ ರೇವಣ್ಣಗೆ ಸೂಕ್ತ ಭದ್ರತೆ ಒದಗಿಸಲು ಒಂದಷ್ಟು ತಾಂತ್ರಿಕ ಸಮಸ್ಯೆಗಳು ಇವೆ. ಈ ಕಾರಣಕ್ಕೆ ಪ್ರಜ್ವಲ್ ಅವರನ್ನು ವರ್ಗಾವಣೆ ಮಾಡಲಾಗಿಲ್ಲ. ಬೆಳಗಾವಿ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡುವ ಕುರಿತು ಪುನರ್ ಪರಿಶೀಲಿಸುತ್ತೇವೆ. ಅಲ್ಲಿನ ತಾಂತ್ರಿಕ ಅಡಚರಣೆ ತಿಳಿದು, ಸೂಕ್ತ ಭದ್ರತೆ ವ್ಯವಸ್ಥೆಯೊಂದಿಗೆ ವರ್ಗಾವಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಡಿಜಿಪಿ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ತಾಂತ್ರಿಕ ಸಮಸ್ಯೆ ಎಂದು ಹೇಳಲಾಗುತ್ತಿದೆ ಆದರೂ, ಪ್ರಜ್ವಲ್‌ನನ್ನು ಬೇರೆಡೆ ಸ್ಥಳಾಂತರಕ್ಕೆ ಸ್ವತಃ ಪ್ರಜ್ವಲ್ ಸೇರಿ ಹಲವರ ಆಕ್ಷೇಪ ಇದೆ ಎನ್ನಲಾತ್ತಿದೆ. ರಾಜಕಾರಣಿಗಳ ಕುಟುಂಬದಿಂದ ಬಂದ ಪ್ರಜ್ವಲ್‌ ಸಂಬಂಧಿ ನಿರ್ಧಾರ ಕೈಗೊಳ್ಳುವಾಗ ಸಾಮಾನ್ಯವಾಗಿ ಇಂತಹ ಪ್ರಭಾವಿಗಳ ಒತ್ತಡ ಇದ್ದೆ ಇರುತ್ತದೆ. ಯಾರೇ ಯಾವ ಒತ್ತಡ ಹಾಕಿದರೂ ಸಹಿತ ಕಾನೂನು ದೃಷ್ಟಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರಿಗಳು ಇಂತಹ ಪ್ರಭಾವಕ್ಕೆ ಒಳಗಾಗದೇ ನಿಷ್ಟುರ ನಿರ್ಧಾರ ಕೈಗೊಳ್ಳಬೇಕಿರುತ್ತದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+