ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಮೊಮ್ಮಗ ಪ್ರಜ್ವಲ್ ಜೆಡಿಎಸ್ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಫೆ.1 : ಜೆಡಿಎಸ್ ವರಿಷ್ಠ ದೇವೇಗೌಡ ಅವರ ಸಮ್ಮುಖದಲ್ಲಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಜಾತ್ಯಾತೀತ ಜನತಾದಳಕ್ಕೆ ಭಾನುವಾರ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರ ನಿವಾಸದಲ್ಲಿ ನಡೆದ ಜೆಡಿಎಸ್ ಸದಸ್ಯತ ಅಭಿಯಾನದಲ್ಲಿ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಗೆ ಸೇರ್ಪಡೆಗೊಂಡರು. ಅಜ್ಜನ ಆಶೀರ್ವಾದ ಪಡೆದುಕೊಂಡ ನಂತರ ಜಾತ್ಯತೀತ ಜನತಾದಳದ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು.

'ಯಾವುದೇ ಅಧಿಕಾರಕ್ಕೆ ಆತುರ ಪಡದೆ ಪಕ್ಷದ ಅಭಿವೃದ್ಧಿಯನ್ನೇ ಧ್ಯೇಯವಾಗಿಟ್ಟುಕೊಂಡು ರಾಜಕಾರಣ ಮಾಡಿದ್ದೇನೆ. ಇನ್ನು ಈ ಚುನಾವಣೆ ರಾಜಕೀಯದ ಗೊಡವೆ ನನಗೆ ಬೇಡ. ಅದನ್ನು ನನ್ನ ಮಕ್ಕಳು ಮತ್ತು ಮೊಮ್ಮಗ ನೋಡಿಕೊಳ್ಳಲಿ' ಎಂದು ದೇವೇಗೌಡರು ಇದೇ ಸಂದರ್ಭದಲ್ಲಿ ಹೇಳಿದರು.
[ದೇವೇಗೌಡರ ಮೊಮ್ಮಗ ಪ್ರಜ್ವಲ್ ಇತ್ಯೋಪರಿ]

ಜೆಡಿಎಸ್ ಸೇರಲು ಇಚ್ಛಿಸುವ ಯುವ ಜನತೆ ದಿವಾಕರ್ (9538880144) ಅಥವಾ ಮಂಜುನಾಥ್ ಎಚ್ ಎನ್(8892198610) ಅವರನ್ನು ಸಂಪರ್ಕಿಸಬಹುದು. ಅಥವಾ ಜೆಡಿಎಸ್ ಅಧಿಕೃತ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. [ಇನ್ಮುಂದೆ ಚುನಾವಣೆ ಸ್ಪರ್ಧಿಸುವುದಿಲ್ಲ: ದೇವೇಗೌಡ]

ಇಂಜಿನಿಯರಿಂಗ್ ಓದಿ ಸಿಟಿ ಲೈಫ್ ಕಂಡಿರುವ ಪ್ರಜ್ವಲ್ ಗೆ ರೈತರ ಕಷ್ಟ ಸುಖಗಳನ್ನು ಚಿಕ್ಕಂದಿನಿಂದ ಕಂಡಿರುವ ಅನುಭವವಿದೆಯಂತೆ. ಯುವಕರು ಒಗ್ಗೂಡಿದರೆ ದೇಶದ ರಾಜಕೀಯ ದಿಶೆಯನ್ನೇ ಬದಲಾಯಿಸಲು ಸಾಧ್ಯ. ಸರ್ಕಾರ ಹಾಗೂ ಜನ ಸಾಮಾನ್ಯರ ನಡುವೆ ಯುವಕರು ಸೇತುವೆಯಾಗಿ ಕಾರ್ಯ ನಿರ್ವಹಿಸಿದರೆ ಸಮಸ್ಯೆಗಳು ಇನ್ನಿಲ್ಲದಂತೆ ಮಾಯವಾಗಲಿದೆ ಎಂದಿದ್ದಾರೆ. ಹಾಗಾದರೆ ಪ್ರಜ್ವಲ್ ರೇವಣ್ಣ ದೇವೇಗೌಡರ ರಾಜಕೀಯ ಉತ್ತರಾಧಿಕಾರಿಯೇ? ಮುಂದೆ ಓದಿ..

ಸಕ್ರಿಯ ರಾಜಕೀಯ ಸೇರುವ ಸುಳಿವು ಸಿಕ್ಕಿತ್ತು

ಸಕ್ರಿಯ ರಾಜಕೀಯ ಸೇರುವ ಸುಳಿವು ಸಿಕ್ಕಿತ್ತು

ಸಕ್ರಿಯ ರಾಜಕೀಯಕ್ಕೆ ಹಠಾತ್ ಪ್ರವೇಶ ಮಾಡುವ ಆತುರವಿಲ್ಲ. ಎಲ್ಲವೂ ಅಜ್ಜ ದೇವೇಗೌಡರ ಬುದ್ಧಿವಾದದಂತೆ ನಡೆಯಲಿದೆ. ನನಗೆ ರಾಜಕೀಯ ಪಾಠ ಹೇಳಿಕೊಡಲು ಸಾಕಷ್ಟು ಜನ ಗುರುಗಳಿದ್ದಾರೆ. ಅಪ್ಪ ರೇವಣ್ಣ, ಅಮ್ಮ ಭವಾನಿ ಅವರ ಜತೆಗೆ ಚಿಕ್ಕಪ್ಪ ಕುಮಾರಸ್ವಾಮಿ, ಜಮೀರಣ್ಣ ಅವರ ಮಾರ್ಗದರ್ಶನದಲ್ಲಿ ನನ್ನ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು.

ರಾಜಕೀಯ ಸೇರ್ಪಡೆ ಏಕೆ? ಏನು ಉದ್ದೇಶ

ರಾಜಕೀಯ ಸೇರ್ಪಡೆ ಏಕೆ? ಏನು ಉದ್ದೇಶ

ರಾಜಕೀಯದಲ್ಲಿ ಯುವಕರಿಗೆ ಬೆಲೆ ಸಿಗುತ್ತಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಯುವಜನಾಂಗ ಕಾರ್ಯನಿರ್ವಹಿಸಬೇಕಿದೆ.20-35 ವರ್ಷದ ಹುಡುಗರಿಗೆ ರಾಜಕೀಯ ಪಕ್ಷಗಳಲ್ಲಿ ಅಂಥ ಬೆಲೆ ಸಿಗುತ್ತಿಲ್ಲ. ಯುವ ಪೀಳಿಗೆಯ ಆಶಯಕ್ಕೆ ಸ್ಪಂದಿಸುವುದು ನನ್ನ ಕೆಲ್ಸ., ಅವರಿಗೆ ಧ್ವನಿಯಾಗಲು ರಾಜಕೀಯಕ್ಕೆ ಬರುತ್ತಿದ್ದೇನೆ.

ಕುಟುಂಬ ರಾಜಕೀಯ ಎನಿಸುತ್ತಿಲ್ಲವಾ?

ಕುಟುಂಬ ರಾಜಕೀಯ ಎನಿಸುತ್ತಿಲ್ಲವಾ?

ಕುಟುಂಬ ರಾಜಕೀಯ ಇಡೀ ದೇಶದಲ್ಲಿ ವ್ಯಾಪಿಸಿದೆ. ಅದರೆ, ಇದರಿಂದ ಜನಕ್ಕೆ, ನಾಡಿಗೆ ಒಳ್ಳೆಯದಾಗುತ್ತಿದ್ದರೆ ಅದರಲ್ಲಿ ತಪ್ಪೇನಿಲ್ಲ. ಜೆಡಿಎಸ್ ದೇವೇಗೌಡರ ಕುಟುಂಬ ರಾಜಕೀಯಕ್ಕೆ ಇರುವ ಪಕ್ಷವಲ್ಲ. ದೇವೇಗೌಡರಿಗೆ 9 ಜನ ಮೊಮ್ಮಕ್ಕಳಿದ್ದಾರೆ. ಕುಟುಂಬ ರಾಜಕಾರಣ ಇದ್ದರೆ ಅಷ್ಟು ಜನ ಈಗ ರಾಜಕೀಯದಲ್ಲಿರುತ್ತಿದ್ದರು.

ಒಳ್ಳೆ ರಾಜಕಾರಣ ಮಾಡಿದರೆ ಮಾತ್ರ ಇಲ್ಲಿರಲು ಸಾಧ್ಯ

ಒಳ್ಳೆ ರಾಜಕಾರಣ ಮಾಡಿದರೆ ಮಾತ್ರ ಇಲ್ಲಿರಲು ಸಾಧ್ಯ

ದೇಶ ಉದ್ಧಾರವಾಗಬೇಕಾದಿದ್ದರೆ ಜಾತಿ ತೊರೆಯಬೇಕಾಗುತ್ತದೆ. ದೇವೇಗೌಡರು ಎಲ್ಲೂ ಒಕ್ಕಲಿಗರು ಎಂದು ಹೇಳಿಕೊಂಡಿಲ್ಲ. ಅವರು ಅನುದಾನ ಕೊಡಬೇಕಾಗಿದ್ದರೆ ಜಾತಿ ನೋಡಿ ಕೊಟ್ಟಿದ್ದಲ್ಲ.

ಒಳ್ಳೆ ರಾಜಕಾರಣ ಮಾಡಿದರೆ ಹಣ ಹೆಂಡ ಇಲ್ಲದೆ ಮೇಲಕ್ಕೆ ಬರಕ್ಕೆ ಸಾಧ್ಯ. ನಾನು ಜಾತಿ ಲೀಡರ್ ಆಗಿ ಉಳಿಯುವುದಿಲ್ಲ. ನಾನು ಸಮಾಜದ ನಾಯಕ ಎಂದು ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

English summary
Prajwal Revanna son of MLA HD Revanna today entered active politics. Prajwal Revanna who campaigned for his grandfather HD Deve Gowda during Lok Sabha Elections 2014. JDS Supremo Deve Gowda welcomed Prajwal Revanna's decision and blessed him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X