ಪ್ರಧಾನಿ ಮೋದಿ ವಿರುದ್ಧ ಚೀನಾ ಷಡ್ಯಂತ್ರ: ರಾಹುಲ್ ಗಾಂಧಿ ಗೌಪ್ಯ ಸಭೆ: ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಏಪ್ರಿಲ್ 07: ಸದರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿನ್ನಡೆ ಮಾಡಲು ವಿಚಾರ ಕೇಳಿ ಬಂದಿದ್ದು, ಇದರಲ್ಲಿ ಚೀನಾ ದೇಶ ಸಹ ಇದೆ. ಈ ಚೀನಾ ಕಾಂಗ್ರೆಸ್ ಪಕ್ಷದೊಂದಿಗೆ ಹತ್ತಿರದ ಸಂಬಂಧ ಹೊಂದಿದೆ. ಕಾಂಗ್ರೆಸ್ ನಾಯಕ ಹುಲ್ ಗಾಂಧಿ ಅವರು ಈ ಬಗ್ಗೆ ಗೌಪ್ಯ ಸಭೆ ಮಾಡಿದ್ದಾರೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಆರೋಪಿಸಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಹ್ಲಾದ್ ಜೋಶಿಯವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಎಲ್ಲ ರೀತಿಯಲ್ಲಿ ಹಿನ್ನಡೆ ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ಭಾರತ ವಿರೋಧಿ ಹಿತಾಸಕ್ತಿಗಳು ಕೆಲಸ ಮಾಡುತ್ತೇವೆ ಎಂದು ಅವರು ದೂರಿದರು.

ಮೋದಿಯಿಂದ ದೇಶದ ಪ್ರಗತಿ ಆಗದಂತೆ ಷಡ್ಯಂತ್ರ
ಆಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡುವ ಕುರಿತು ಅವರು ಪ್ರತಿಕ್ರಿಯಿಸಿದರು. ಚೀನಾ ಕಾಂಗ್ರೆಸ್ ಜತೆ ಬಹಳ ಹತ್ತಿರದಲ್ಲಿದೆ. ರಾಹುಲ್ ಗಾಂಧಿ ಹೋಗಿ ಗೌಪ್ಯ ಸಭೆ ಮಾಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೆ ದೇಶ ಬಲಿಷ್ಠ ರಾಷ್ಟ್ರವಾಗುತ್ತದೆ. ಭಾರತ ದೇಶ ಎಲ್ಲ ವಿಷಯಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಗಟ್ಟಿಯಾಗಿ ಮಾತನಾಡುತ್ತದೆ. ಭಾರತ ಆರ್ಥಿಕವಾಗಿ ಮುನ್ನಡೆಯುತ್ತದೆ.
ನಮ್ಮ ದೇಶದ ಸಶಕ್ತ ಸೈನ್ಯ ಬಲಿಷ್ಟವಾಗಿದೆ ಮುಂದುವರಿಯುತ್ತಿದೆ. ಇದೆಲ್ಲ ಕಾರಣಗಳಿಂದ ಪ್ರಧಾನಿ ಮೋದಿಯವರು ಭಾರತದಲ್ಲಿ ಅಧಿಕಾರಕ್ಕೆ ಬಂದರೆ ದೇಶ ಉಚ್ಛ್ರಾಯ ಸ್ಥಿತಿಗೆ ತಲುಪುತ್ತದೆ ಎಂಬ ಕಾರಣದಿಂದಲೇ ವಿರೋಧ ಚೀನಾ ದೇಶ ಹೀಗೆಲ್ಲ ಷಡ್ಯಂತ್ರ ಮಾಡುತ್ತಿದೆ ಎಂದು ಅವು ಹೇಳಿದರು.
ಭಾರತದ ಜನ ಭಾರತದ ತಂತ್ರಜ್ಞರು ಸಶಕ್ತರಾಗಿದ್ದಾರೆ. ಯಾವುದೇ ಪಿತೂರಿಗಳಿದ್ದರೂ ಅದನ್ನು ವಿಫಲಗೊಳಿಸುತ್ತಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ತುಷ್ಠಿಕರಣ ರಾಜಕಾರಣ: ಜೋಶಿ
ಬೆಂಗಳೂರಿನ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸ್ ಹಾಕಿದವರ ಮೇಲೆ ಪ್ರಕರಣ ದಾಖಲು ವಿಚಾರ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಯಾವಾಗಲೂ ಹಿಂದು ವಿರೋಧಿ ನೀತಿ ಅನುಸರಿಸುತ್ತದೆ. ಇದಕ್ಕೆ ಇದೇ ಉದಾಹರಣೆ ಹನುಮಾನ್ ಚಾಲೀಸ್ ತನ್ನ ಅಂಗಡಿಯಲ್ಲಿ ಪ್ರಸಾರ ಮಾಡಿದಕ್ಕೆ ಅವರ ಮೇಲೆ ಹಲ್ಲೆ ಮಾಡಲಾಗಿತ್ತು.
ಯಾರು ಹಲ್ಲೆ ಮಾಡಿದ್ದಾರೆ ಅವರನ್ನು ಹಿಡಿಯಬೇಕು. ಅವರನ್ನ ಬಿಟ್ಟು ಹಲ್ಲೆಗೆ ಒಳಗಾಗಿದ್ದಾರೆ ಅವರ ಮೇಲೆ ದೂರು ದಾಖಲಿಸಲಾಗಿದೆ. ಇದೆಲ್ಲವು ತುಷ್ಟೀಕರಣದ ರಾಜಕಾರಣ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ತುಷ್ಟಿಕರಣ ರಾಜಕಾರಣ ಹೆಚ್ಚಾಗಿದ್ದು, ಇದೆಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.
ನನ್ನ ತೆರಿಗೆ ನನ್ನ ಹಣ ವಿಚಾರವಾಗಿ ರಾಜ್ಯ ಸರ್ಕಾರ ಹೋರಾಟ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಏನು ಮಾಡಲು ಆಗುತ್ತಿಲ್ಲ. ಈ ಕಾರಣಕ್ಕೆ ಕೇಂದ್ರದತ್ತ ಬೊಟ್ಟು ಮಾಡತ್ತಿದ್ದಾರೆ. ಈಗಾಗಲೇ ನಾವು ಹಲವು ಭಾರೀ ಹೇಳಿದ್ದೇವೆ. ಯುಪಿಎ ಸರ್ಕಾರ ಇದ್ದಾಗ ತೆರಿಗೆ ಸಂಗ್ರಹ ಆಗುತ್ತಿರಲಿಲ್ಲವಾ? ತೆರಿಗೆ ಅನುದಾನ ಮತ್ತು ಇತೆರೆ ಅಭಿವೃದ್ಧಿ ಅನುದಾನದಲ್ಲಿ ಕ್ರಮವಾಗಿ 40 ಸಾವಿರ ಹಾಗೂ 60 ಕೋಟಿ ಕೊಡುತ್ತಿದ್ದರು.
ಸರ್ಕಾರದ ನಡೆ ಸಮರ್ಥನೆ
ಸದ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು 2.60 ಲಕ್ಷ ಕೋಟಿ ಕೊಡುತ್ತಿದ್ದೇವೆ. 2.70 ಲಕ್ಷ ಕೋಟಿ ಕೊಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ನಡೆಯನ್ನು ಅವರು ಸಮರ್ಥಿಸಿಕೊಂಡರು.
ಹಣಕಾಸು ಆಯೋಗದವರು ಏನು ನಿರ್ಧಾರ ಮಾಡುತ್ತಾರೆ. ಆ ನಿರ್ಧಾರ ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ ಎಂದರು. ಜೊತೆಗೆ ಚುನಾವಣೆ ಪ್ರಚಾರ ಸಂಬಂಧ, ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತಾ ಶಾ, ಯೋಗಿ ಆದಿತ್ಯನಾಥ್, ರಾಜನಾಥ ಸಿಂಗ್ ಸೇರಿದಂತೆ ಅನೇಕ ನಾಯಕರು ಆಗಮನ ಕುರಿತು ಅವರು ಹೆಚ್ಚು ಏನು ಹೇಳಲಿಲ್ಲ. ಯಾವ ನಾಯಕರು ಎಲ್ಲೆಲ್ಲಿಗೆ ಹೋಗಬೇಕು ಎಂಬುದನ್ನು ರಾಜ್ಯ ಸಮಿತಿ ತೀರ್ಮಾನ ಮಾಡಲಿದೆ.












Click it and Unblock the Notifications