Bengaluru Power Theft: ಬೆಂಗಳೂರಲ್ಲಿ 1,781 ವಿದ್ಯುತ್ ಕಳ್ಳತನ ಕೇಸ್: ಬೆಸ್ಕಾಂ ಸಂಗ್ರಹವಾದ ದಂಡವೆಷ್ಟು?

ಬೆಂಗಳೂರು ಜನವರಿ 17: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದ್ಯುತ್ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕೇ ತಿಂಗಳಲ್ಲಿ ಒಟ್ಟು 2.59 ಕೋಟಿ ರೂಪಾಯಿ ದಂಡ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM)ಗೆ ಪಾವತಿಯಾಗಿದೆ.

ವಿದ್ಯುತ್ ಕಳ್ಳತನದ ವಿರುದ್ಧ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವಿಜಿಲೆನ್ಸ್ ವಿಭಾಗದ ಅಧಿಕಾರಿಗಳು ನಗರಾದ್ಯಂತ ಪರಿಶೀಲನೆ ನಡೆಸಿ ನಂತರ ದಂಡದ ರೂಪದಲ್ಲಿ ನಾಲ್ಕು ತಿಂಗಳಲ್ಲಿ ಒಟ್ಟು 2.59 ಕೋಟಿ ರೂ. ಹಣ ಸಂಗ್ರಹಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಬೆಸ್ಕಾಂ ಕಂಪನಿ ನೀಡಿದ ಅಂಕಿ ಅಂಶಗಳನ್ನು ನೋಡುವುದಾದರೆ, ಅಧಿಕಾರಿಗಳು ನಗರದಲ್ಲಿ ಕಳೆದ ವರ್ಷ 2022ರ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನ ನಾಲ್ಕು ತಿಂಗಳ ಅವಧಿಯಲ್ಲಿ 10,908 ವಿದ್ಯುತ್ ಪೂರೈಕೆ ಕೇಂದ್ರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 1,781 ಪ್ರಕರಣ ಬೆಳಕಿಗೆ ಬಂದಿದ್ದು, ಎಲ್ಲವನ್ನು ದಾಖಲಿಸಿಕೊಂಡಿದ್ದಾರೆ.

Power Theft: 1,781 electricity theft cases in Bengaluru, BESCOM How much collected fine

1,721 ಪ್ರಕರಣ ಪರಿಹರಿಸಿದ ಬೆಸ್ಕಾಂ

ಅಧಿಕಾರಿಗಳ ಗಮನಕ್ಕೆ ಬಂದ 1,781 ಪ್ರಕರಣಗಳ ಪೈಕಿ ಒಟ್ಟು 1,721 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಬೆಸ್ಕಾಂ ಗ್ರಾಹಕರಿಂದ ಬಾಕಿ ಉಳಿದಿರುವ ಬಾಕಿ ವಸೂಲಾತಿಗೂ ಚಾಲನೆಯಲ್ಲಿದೆ. ಅದರಿಂದ ಕಳೆದ ಮೂರು ತಿಂಗಳಲ್ಲಿ 358 ಕೋಟಿ ರೂಪಾಯಿ ಸಂಗ್ರಹಿಸಿದ್ದೇವೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಅವರು ಮಾಹಿತಿ ನೀಡಿದರು. ಬಿಲ್‌ಗಳನ್ನು ಪಾವತಿಸಲು ವಿಫಲವಾದ ಕನಿಷ್ಠ 23 ಲಕ್ಷ ಗ್ರಾಹಕರ ಸಂಪರ್ಕವನ್ನು ಬೆಸ್ಕಾಂಕ ಕಡಿತಗೊಳಿದೆ ಎಂದರು.

ವಿದ್ಯುತ್ ಕಳ್ಳತನ ಪ್ರಕರಣದ ಜೊತೆಗೆ ಬೆಸ್ಕಾಂ ಅಧಿಕಾರಿಗಳು ಕಳೆದ ಸೆಪ್ಟೆಂಬರ್ ಹಾಗೂ ನವೆಂಬರ್ 2022ರ ನಡುವೆ 2.373 ಮೀಟರ್‌ಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ವಿದ್ಯುತ್ ಸರಬರಾಜು, ಓವರ್‌ಲೋಡ್ ಮತ್ತಿತರ ಸಂಬಂಧಿತ ಉಲ್ಲಂಘನೆಗಳನ್ನು ಕಂಡು ಬಂದಿದ್ದು, ಆ ಪೈಕಿ ಒಟ್ಟು ಏಳು ಕೋಟಿ ರೂಪಾಯಿ ದಂಡ ವಿಧಿಸಿದ್ದಾರೆ.

Power Theft: 1,781 electricity theft cases in Bengaluru, BESCOM How much collected fine

ವಿದ್ಯುತ್ ಕಳ್ಳತನ ಮಾಡಿದ ತಪ್ಪಿತಸ್ಥರ ವಿರುದ್ಧ ವಿದ್ಯುತ್ ಕಾಯಿದೆ, 2003 ರ ಸೆಕ್ಷನ್ 135 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ರೀತಿ ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಕಳ್ಳತನ, ಬೆಸ್ಕಾಂ ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಲ್ಲಿ ಹತ್ತಿರದ ಜಾಗೃತ ಪೊಲೀಸ್ ಠಾಣೆ ಸಂಪರ್ಕಿಸಿ ಅಥವಾ ಬೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಿ ದೂರು ಸಲ್ಲಿಬಹುದು ಎಂದು ಬೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+