ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ 20 ದಿನ ಕರೆಂಟ್ ಇರಲ್ಲ!

ಬೆಂಗಳೂರು, ಜನವರಿ 10 : ನಗರದ ಮುಖ್ಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ದುರಸ್ತಿ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಜನವರಿ 12 ರಿಂದ ಜನವರಿ 31 ರವರೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

66/11 ಕೆವಿ ವ್ಯಾಪ್ತಿಯಲ್ಲಿ ಬರುವ ಎಲ್.ಆರ್. ಬಂಡೆ, ಗೆದ್ದಲಹಳ್ಳಿ, ಬಾಣಸವಾಡಿ, ಎಚ್ ಬಿ ಆರ್ ಲೇಔಟ್, ವಿದ್ಯಾನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯ ನಡೆಯುವ ಕಾರಣ 20 ದಿನಗಳು ನಗರದ ಬಹತೇಕ ಪ್ರದೇಶಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸಂಕ್ರಾಂತಿ ವಿಶೇಷ ಪುಟ

ಜನವಸತಿ ಪ್ರದೇಶ ಹಾಗೂ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಎಲ್ಲ ಹಂತದ ಗ್ರಾಹಕರಿಗೆ 20 ದಿನಗಳ ಕಾಲ ತೊಂದರೆ ಉಂಟಾಗಲಿದ್ದು ಅದಕ್ಕಾಗಿ ಪೂರ್ವ ಮಾನಸಿಕವಾಗಿ ಸಿದ್ಧಗೊಳ್ಳಬೇಕಿದೆ. ಇದರ ಕುರಿತು ಪ್ರಕಟಣೆ ನೀಡಿರುವ ಬೆಸ್ಕಾಂ ವಿದ್ಯುತ್ ಮಾರ್ಗದ ದುರಸ್ತಿಯ ಕುರಿತು ವಿವರಗಳನ್ನು ನೀಡಿದೆ.

Power interrupt in Bengaluru for 20 days

ದುರಸ್ತಿ ಪ್ರದೇಶಗಳು: ಎಚ್ ಬಿ ಆರ್ 3 ನೇ ಬ್ಲಾಕ್, ಟೀಚರ್ಸ್ ಕಾಲೊನಿ, ಆಯಿಲ್ ಮಿಲ್ ರಸ್ತೆ, ಕಾಚರಕನ ಹಳ್ಳಿ, ಅರವಿಂದ ನಗರ, ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಕೆಲವು ಪ್ರದೇಶಗಳು, ಜಲ ವಾಯು ವಿಹಾರ, ಎಚ್ ಆರ್ ಬಿ ಆರ್ ಲೇಔಟ್ ನ ಎರಡು ಹಾಗೂ ಮೂರನೇ ಬ್ಲಾಕ್, ಬಿಟಿಎಸ್ ಡಿಪೋ ಹಿಂಭಾಗ, ರಾಮಯ್ಯ ಲೇಔಟ್, ನಾಗ ದೇವಿ ಇಂಡಸ್ಟ್ರೀಸ್, ಬಾಣಸವಾಡಿ ರೈಲ್ವೆ ನಿಲ್ದಾಣ, ಡಾನ್ ಬಾಸ್ಕೊ ಚರ್ಚ್ ಹೆಣ್ಣೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಚ್ ಕೆ ಬಿಕೆ ಕಾಲೇಜು, ಕೆಜಿ ಹಳ್ಳಿ, ನಾಗವಾರ ಮುಖ್ಯರಸ್ತೆ, ಭೈರನಕುಂಟೆ, ರಷದ್ ನಗರ, ಥಣಿಸಂಧ್ರ, , ಕೆ ನಾರಾಯಣಪುರ, ಆಶಾ ಟೌನ್ ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್ ಶಿಪ್, ದೊಡ್ಡ ಗುಬ್ಬಿ ಕ್ರಾಸ್, ಜಾನಕಿರಾಮ್ ಲೇಔಟ್, ಚಾಣಕ್ಯ ಲೇಔಟ್, ಭೈರತಿ ಕ್ರಾಸ್, ಶ್ರೀರಾಂಪುರ ವಿಲೇಜ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರಿಯ, ಆರ್.ಎಸ್. ಪಾಳ್ಯ, ಕಮ್ಮನಹಳ್ಳಿ ಮುಖ್ಯರಸ್ತೆ, ಲಿಂಗರಾಜಪುರ, ಹೊರಮಾವು, ಕಸ್ತೂರಿ ನಗರ, ವಿಜಯ ಬ್ಯಾಂಕ್ ಕಾಲೊನಿ ಸುತ್ತಮುತ್ತಲದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+