ಜನವರಿ 9ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು, ಜನವರಿ 04: ಜಯದೇವ ಮತ್ತು ಸಾರಕ್ಕಿ ಉಪ ವಿಭಾಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಜನವರಿ 9ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಳಗ್ಗೆ 10.30ಯಿಂದ ಸಂಜೆ 6.30ರವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಯಾದವನಹಳ್ಳಿ, ಅತ್ತಿಬೆಲೆ, ಶಾಕಾಂಭರಿ ಲೇಔಟ್, ಸೂರ್ಯ ನಗರ ಹಂತ 3, ಆದಿಗೊಂಡನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದಾಜು ಪುನಃಸ್ಥಾಪನೆ ಸಮಯ: 11:30 ಗಂಟೆ 05.01.2021.
ಕಗ್ಗಲೀಪುರ, ಕನಕಪುರ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದಾಜು ಪುನಃಸ್ಥಾಪನೆ ಸಮಯ: 10:00 ಗಂಟೆ 05.01.2021,ಶ್ರೀರಾಮ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಅಂದಾಜು ಪುನಃಸ್ಥಾಪನೆ ಸಮಯ: 10:00 ಗಂಟೆ 05.01.2021,ಬಸವ ನಗರ, ರಮೇಶ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿಸಲಾಗಿದೆ.
ಜನವರಿ 6 ರಂದು ಬ್ಯಾಟರಿ ಚಾರ್ಜರ್ ಬಲಾವಣೆ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಮಧ್ಯಾಹ್ನ 12 ರಿಂದ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬಸವೇಶ್ವರನಗರ, ಕೋಟೆ ಪಾಟೀಲಪ್ಪ ಅಪಾರ್ಟ್‌ಮೆಂಟ್ ಸಮುಚ್ಛಯ, ಡಾಲರ್ಸ್ ಕಾಲೊನಿ, ಮಂಜುನಾಥ ಬಡಾವಣೆ, ನಾಗಶೆಟ್ಟಿಹಳ್ಳಿ, ಎಂಎಸ್ ರಾಮಯ್ಯ ಆಸ್ಪತ್ರೆ, ಆರ್‌ಎಂವಿ ಬಡಾವಣೆ, ಪೂಜಾರಿ ಬಡಾವಣೆ, ಐಟಿಐ ಬಡಾವಣೆ, ಸಂದರ್ಯ ಪಾರ್ಕ್, ಕಾಫಿಡೇ, ನ್ಯೂ ಬಿಇಎಲ್ ರಸ್ತೆ, ಇಸ್ರೋ ಕಚೇರಿ, ಸೀನಪ್ಪ ಬಡಾವಣೆ, ನ್ಯಾಯಾಧೀಶರ ಬಡಾವಣೆ, ಅಮರಜ್ಯೋತಿ ಬಡಾವಣೆ, ಹನುಮಯ್ಯ ಬಡಾವಣೆ, ರಾಜ್ ಮಹಲ್ ವಿಲಾಸ್ ರಸ್ತೆ, ಪೋಸ್ಟಲ್ ಕಾಲೊನಿ, ಸಂಜಯನಗರ ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.