ಬೆಂಗಳೂರಿನ ಹಲವೆಡೆ ಶನಿವಾರ-ಭಾನುವಾರ ವಿದ್ಯುತ್ ವ್ಯತ್ಯಯ

ಬೆಂಗಳೂರು, ಫೆಬ್ರವರಿ 08: ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ನಗರದ ಹಲವು ಪ್ರಮುಖ ಏರಿಯಾಗಳಲ್ಲಿ ಶನಿವಾರ ಮತ್ತು ಭಾನುವಾರಗಳಂದು ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಹೇಳಿದೆ.

ಸಹಕಾರ ನಗರ, ಕೆಎಚ್‌ಬಿ ಹಾಗೂ ಅಟ್ಟೂರು ವಿದ್ಯುತ್‌ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಾಗುತ್ತಿದೆ ಶನಿವಾರ ಫೆಬ್ರವರಿ 8ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಹಾಗೂ ಭಾನುವಾರ ವಿದ್ಯುತ್‌ ವ್ಯತ್ಯಯ ಆಗಲಿದೆ.

ವಿದ್ಯುತ್‌ ವ್ಯತ್ಯಯ ಎಲ್ಲೆಲ್ಲಿ
ಸಹಕಾರನಗರ, ಬ್ಯಾಟರಾಯನ ಪುರ, ಅಮೃತಹಳ್ಳಿ, ಜಕ್ಕೂರು, ಅಮೃತನಗರ, ಕಾಶಿನಗರ, ಭುವನೇಶ್ವರಿನಗರ, ಶ್ರೀರಾಮ ಪುರ, ಶಿವರಾಮಕಾರಂತ ನಗರ, ಸಂಪಿಗೆಹಳ್ಳಿ, ಚೊಕ್ಕನಹಳ್ಳಿ, ಹೆಗಡೆನಗರ, ಕೋಗಿಲು ಬಡಾವಣೆ, ಡಿಫೆನ್ಸ್‌ ಬಡಾವಣೆ, ಕೊಡಿಗೆಹಳ್ಳಿ ಮುಖ್ಯರಸ್ತೆ, ಶಿವನಹಳ್ಳಿ, ಹಾರೋಹಳ್ಳಿ, ಇಸ್ರೊ ಬಡಾವಣೆ, ಅನಂತಪುರ, ಯಲಹಂಕ, ಆವಲಹಳ್ಳಿ, ರಾಜಾನುಕುಂಟೆ, ನಾಗೇನಹಳ್ಳಿ, ಮೈಲಪ್ಪನಹಳ್ಳಿ, ನಾಗದಾಸನಹಳ್ಳಿ, ಪ್ರಕೃತಿನಗರ, ಗಾಂಧಿನಗರ, ಮಾರುತಿ ನಗರ, ಕೋಗಿಲು ಹಾಗೂ ಸುತ್ತಮುತ್ತಲಿನ ಪ್ರದೇಶ.

Power Cut On Saturday And Sunday Some Parts Of Bengaluru

ಬೃಂದಾವನ ವಿದ್ಯುತ್‌ ಉಪಕೇಂದ್ರ ವ್ಯಾಪ್ತಿಯ ಶಿವಪುರ, ನಾರಾಯಣಪುರ, ನೆಲಗದರನಹಳ್ಳಿ, ರುಕ್ಮಿಣಿನಗರ, ವಿದ್ಯಾನಗರ, ವಿಕಾಸನಗರಗಳಲ್ಲಿ ಇಂದಿನಿಂದ ಭಾನುವಾರ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+