Power Cut in Bengaluru : ಜ.17 ರಿಂದ 30ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ!
ಬೆಂಗಳೂರು ಜನವರಿ 16: ಬೆಂಗಳೂರಿನಲ್ಲಿ ವಿವಿದೆಡೆ ಕಾಮಗಾರಿ ಕೆಲಸಗಳು ನಡೆಯುತ್ತಿದ್ದು ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ. ನಾಳೆಯಿಂದ ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತದ ಬಿಸಿ ಗ್ರಾಹಕರಿಗೆ ತಟ್ಟಲಿದೆ ಎನ್ನುವುದನ್ನು ಬೆಸ್ಕಾಂ ಪ್ರಕಟಿಸಿದೆ.
ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಇಲ್ಲಿ ನಾವು ಯಾವ ದಿನ ಯಾವ ಸಮಯಕ್ಕೆ ಹಾಗೂ ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯಗೊಳ್ಳಲಿದೆ ಎನ್ನುವ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಜನವರಿಯಲ್ಲಿ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಎಲ್ಲೆಲ್ಲಿ?
ಜನವರಿ 17 ರಿಂದ 20: ಕೆಂಗೇರಿಯಲ್ಲಿ ಜನವರಿ 17 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ನೆಲಮಂಗಲದಲ್ಲಿ ಜನವರಿ 18 ಹಾಗೂ 19 ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 2ವರೆಗೆ, ಶಿವಾಜಿನಗರದಲ್ಲಿ ಜನವರಿ 17 ಮತ್ತು 19ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 3, ಹೆಚ್ಎಸ್ಆರ್ ಲೇಔಟ್ನಲ್ಲಿ ಜನವರಿ 19 ರಂದು ಬೆಳಿಗ್ಗೆ 10:30 ರಿಂದ ಸಂಜೆ 5:30 ಗಂಟೆಯವರೆಗೆ ಪವರ್ ಕಡಿತಗೊಳ್ಳಲಿದೆ.
ಕೆಂಗೇರಿಯ ಸೋಮನಹಳ್ಳಿ ಜನವರಿ 16 ಹಾಗೂ 18ರಂದು ಬೇಳಿಗ್ಗೆ 10ರಿಂದ ಮದ್ಯಾಹ್ನ 3ಗಂಟೆವರೆಗೆ, ನೆಲಮಂಗಲದಲ್ಲಿ ಜನವರಿ 19 ರಂದು ಬೆಳಿಗ್ಗೆ 10ರಿಂದ ಸಂಜೆ5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಜನವರಿ 21ರಿಂದ 25: ಮಾಗಡಿಯಲ್ಲಿ ಜನವರಿ22 ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 3, ನೆಲಮಂಗಲ ಜನವರಿ 25ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 2ಗಂಟೆವರೆಗೆ, ಶಿವಾಜಿನಗರ ಜನವರಿ 21 ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 3, ವೈಟ್ ಪೀಲ್ಡ್ ಜನವರಿ 20 ಹಾಗೂ 23ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ, ಪೀಣ್ಯದಲ್ಲಿ ಜನವರಿ 22ರಂದು ಬೆಳಿಗ್ಗೆ 11ರಿಂದ ಮದ್ಯಾಹ್ನ 2, ವಿಧಾನಸೌಧ ಜನವರಿ 21, 22ರಂದು ಬೆಳಿಗ್ಗೆ 10ರಿಂದ ಸಂಜೆ 5ಯವರೆಗೆ ವಿದ್ಯುತ್ ಕಡಿತವಾಗಲಿದೆ.
ಇನ್ನೂ ಜಯನಗರ ಜನವರಿ 25 ರಂದು ಬೆಳಿಗ್ಗೆ 10ರಿಂದ ಸಂಜೆ 4, ಜಯನಗರ ಎಸ್6 ಜನವರಿ 24ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 3ರವರೆಗೆ, ಕೆಂಗೇರಿಯ ಸೋಮನಹಳ್ಳಿ, ಜನವರಿ 21, 22, 24, 25ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 3ಗಂಟೆ, ಹೆಚ್ಎಸ್ಆರ್ ಜನವರಿ 23 ರಂದು ಬೆಳಿಗ್ಗೆ 10 ರಿಂದ 5ಗಂಟೆಯವರೆಗೆ ಪವರ್ ಕಡಿತಗೊಳ್ಳಲಿದೆ.

ಜನವರಿ 26ರಿಂದ 30: ನೆಲಮಂಗಲ 29 ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆವರೆಗೆ, ವೈಟ್ ಪೀಲ್ಡ್ ಜನವರಿ 30 ರಂದು ಬೆಳಿಗ್ಗೆ 10ರಿಂದ ಸಂಜೆ4ರವರೆಗೆ, ಪೀಣ್ಯದಲ್ಲಿ ಜನವರಿ 29ರಂದು ಬೆಳಿಗ್ಗೆ 11ರಿಂದ ಮದ್ಯಾಹ್ನ 2ಗಂಟೆಯವರೆಗೆ, ಜಯನಗರ ಜನವರಿ 28 ಹಾಗೂ 30ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications