Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಸೆಪ್ಟೆಂಬರ್ 26 ಮತ್ತು 27ರಂದು ವಿದ್ಯುತ್ ವ್ಯತ್ಯಯ

Bengaluru Power Cut: ಸಾಮಾನ್ಯವಾಗಿ ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಹಾಗೂ ಮಳೆಯಾಗುವ ಸಂದರ್ಭಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಸೆಪ್ಟೆಂಬರ್ 26 ಮತ್ತು 27ರಂದು ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.

ತುರ್ತು ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 26 ಹಾಗೂ 27ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಗಂಟೆಯವರೆಗೂ ವಿದ್ಯುತ್ ಕಡಿತ ಆಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Power Cut in Bengaluru s These Areas on September 26 and 27 Know details

ಶುಕ್ರವಾರ ಎಲ್ಲೆಲ್ಲಿ ಪವರ್ ಕಟ್‌?: ಇಸ್ಕಾನ್ ಉಪಕೇಂದ್ರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 26ರ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಂತ್ರಿ ಅಪಾರ್ಟ್‌ಮೆಂಟ್‌, ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ವಿ.ವಿ.ಲೇಔಟ್, ಬಾಲಾಜಿ ಲೇಔಟ್, ರಾಯಲ್ ಫಾರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದ ಎಂದು ತಿಳಿಸಿದೆ.

ಶವಿವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಆರ್.ಎಂ.ವಿ ಉಪಕೇಂದ್ರ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎಂಎಸ್ಆರ್ ನಗರ, ಬಿಇಎಲ್ ರಸ್ತೆ, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಎಂಎಸ್ಆರ್ ನಗರ, ಜಲದರ್ಶಿನಿ ಲೇಔಟ್, ಎಂಎಸ್ಆರ್ ನಗರ.

ರಾಮಯ್ಯ ಬಾಲಕರ ಹಾಸ್ಟೆಲ್, ಎ.ಕೆ.ಕಾಲೋನಿ, ಶ್ರೀನಿಕೇತ್ ಅಪಾರ್ಟ್‌ಮೆಂಟ್, ಕಾಫಿ ಡೇ, ಪಿಜ್ಜಾ ಹಟ್ ರಾಮಯ್ಯ ಆಸ್ಪತ್ರೆ ಎದುರು, ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಇಸ್ರೋ, ಡಾಲರ್ಸ್ ಕಾಲೋನಿ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಸ್ಕಾಂ ಸಲಹೆ ಏನು?: ಇನ್ನು ಎಲ್ಲೆಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ವಿದ್ಯುತ್ ಸಂಬಂಧಿತ ಉಪಕರಣಗಳು ಮೊಬೈಲ್‌, ಫೋನ್‌, ಲ್ಯಾಪ್‌ ಟಾಪ್‌, ಬ್ಯಾಟರಿಗಳನ್ನು ಮುಂಚಿತವಾಗಿ ಚಾರ್ಜ್‌ ಮಾಡಿಕೊಳ್ಳುವುದು ಸೂಕ್ತ ಹಾಗೂ ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಗೆ ಸಂಪರ್ಕಿಸಬದು ಅಂತಲೂ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+