Get Updates
Get notified of breaking news, exclusive insights, and must-see stories!

Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಡಿಸೆಂಬರ್ 6 ಮತ್ತು 7ರಂದು ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 6 ಮತ್ತು 7ರಂದು ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎಂದು ತಿಳಿಯಿರಿ.

ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 6 ಮತ್ತು 7ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

Power Cut in Bengaluru s These Areas on December 6 and 7 Know details

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11KV ಕಾಡುಗೋಡಿ ಉಪಕೇಂದ್ರ ವ್ಯಾಪ್ತಿಯಲ್ಲಿ ಡಿಸೆಂಬರ್ 6ರ ಶನಿವಾರ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಶನಿವಾರ ಎಲ್ಲೆಲ್ಲಿ ಕರೆಂಟ್‌ ಕಟ್‌?: ಅಯ್ಯಪ್ಪ ದೇವಸ್ಥಾನ, ಕುಂಬೇನ ಅಗ್ರಹಾರ, ಪಟ್ಟಲಮ್ಮ ಲೇಔಟ್, ವಿಎಸ್‌ಆರ್ ಲೇಔಟ್, ಕಾಡುಗೋಡಿ, ಚನ್ನಸಂದ್ರ, ಎಫ್‌ಸಿಐ ಗೋದಾಮು, ಸಫಲ್, ಶಂಕರಪುರ, ಸಿದ್ಧಾರ್ಥ ಲೇಔಟ್, ಸಾಯಿ ಆಶ್ರಮ, ಎಚ್‌ಡಿಎಫ್‌ಸಿ ಬ್ಯಾಂಕ್, ಅಲಾಂಬಿಕ್ ಅಪಾರ್ಟ್‌ಮೆಂಟ್, ಮಾರ್ವೆಲ್ ಅಪಾರ್ಟ್‌ಮೆಂಟ್, ಇಮ್ಮಡಿಹಳ್ಳಿ, ಕೈತೋಟ, ದಿನ್ನೂರು, ಜಿ.ಕೆ.ಲೇಔಟ್, ದಿನ್ನೂರು ಪೊಲೀಸ್ ಸ್ಟೇಷನ್, ಮೈತ್ರಿ ಲೇಔಟ್, ಸರ್ಕಾರಿ ಪಾಲಿಟೆಕ್ನಿಕ್, ಚನ್ನಸಂದ್ರ ಮೇನ್‌ ರೋಡ್, ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೊಮ್ಮರಪಾಳ್ಯ, ಪ್ರಶಾಂತ್ ಲೇಔಟ್, ಉಪ್ಕರ್ ಲೇಔಟ್.

ಪೃಥ್ವಿ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ, ವೈಟ್‌ಫೀಲ್ಡ್‌ ಮುಖ್ಯರಸ್ತೆ, ಇಸಿಸಿಸಿ ರಸ್ತೆ, ಇನರ್ ಸರ್ಕಲ್, ಕಾರಮ್ಮರಿಯಪ್ಪ ದೇವಸ್ಥಾನ ರಸ್ತೆ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಂಜಿ ಲೇಔಟ್, ಅಂಬೇಡ್ಕರ್ ನಗರ ಗುಡ್ಡ, ಪ್ರೆಸ್ಟೀಜ್ ಮೇಬೆರ್ರಿ ಅಪಾರ್ಟ್ಮೆಂಟ್, ಆದರ್ಶ ಫಾರ್ಮ್ ಮೆಡೋಸ್, ಬೋರ್ವೆಲ್ ರಸ್ತೆ, ಔಟರ್ ಸರ್ಕಲ್, ಹಗದುರ್, ಬಿಯರ್ ಸ್ಟ್ರೀಟ್ ಮತ್ತು ಸುತ್ತಮುತ್ತಲಿದ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

ಅಲ್ಲದೆ, ಬ್ರೂಕ್ ಬಾಂಡ್, ಹಗದುರ್ ಕಾನೆ, ವಿನಾಯಕನಗರ, ಬ್ರಿಗೇಡ್ ಕಾಸ್ಮೋಪೊಲೆಸ್ ಅಪಾರ್ಟ್‌ಮೆಂಟ್, ಗೋಯಲ್ ಹರಿಯಾಣಾ ಅಪಾರ್ಟ್‌ಮೆಂಟ್, ವಿಜಯನಗರ, ಗಾಂಧೀಪುರ, ಇಮ್ಮಡಿಹಳ್ಳಿ ಮೇನ್ ರೋಡ್, ದೊಬ್ಬರಪಾಳ್ಯ, ಸುಮಧುರಾ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಭಾನುವಾರ ಎಲ್ಲೆಲ್ಲಿ ಕರೆಂಟ್‌ ಕಟ್‌?: ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್‌, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್‌, ಶಿವಕುಮಾರ ಸ್ವಾಮೀಜಿ ಲೇಔಟ್‌, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ.

ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ, ಗುಣಿಅಗ್ರಹರ್, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಹುರುಳಿಚಿಕ್ಕನಹಳ್ಳಿ, ಕೆ.ಟಿ.ಪುರ, ಐಐಎಚ್‌ಆರ್, ಮಠಕೂರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ, ಸಾಸುವೆಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+