ಬೆಂಗಳೂರಿನ ಈ ಪ್ರದೇಶಗಳಲ್ಲಿ 3 ದಿನ ಪವರ್ ಕಟ್
ಬೆಂಗಳೂರು, ಜುಲೈ, 22: ಬೆಂಗಳೂರಿನ ಹಲವೆಡೆ ಜುಲೈ 22ರಿಂದ 24ರವರೆಗೆ ವಿದ್ಯುತ್ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಧೀರ್ಘಾವದಿಯ ಕಾಲ ವಿದ್ಯುತ್ ಕಡಿತವಾಗುವುದರಿಂದ ನಗರದ ನಿವಾಸಿಗಳು ಈ ವಾರಾಂತ್ಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುತ್ತದೆ. ಕೇಬಲ್‌ಗಳು, ರಸ್ತೆಗೆ ಅಡ್ಡಲಾದ ಮರಗಳನ್ನು ತೆರವು ಮಾಡಲಾಗುತ್ತದೆ. ಟ್ರಾನ್ಸ್‌ಫಾರ್ಮರ್ ಕೆಲಸ ಮತ್ತು ಮಾಸ್ಟರ್ ಟೆಸ್ಟಿಂಗ್, ಬೆಸ್ಕಾಂ ಪೋರ್ಟಲ್‌ನಲ್ಲಿ ಕೆಲಸಗಳನ್ನು ಮಾಡಲಾಗುತ್ತದೆ. ಆದ್ದರಿಂದ ಬೆಳಿಗ್ಗೆ 10 ರಿಂದ ಸಂಜೆ 6:30ರ ನಡುವೆ ವಿದ್ಯುತ್ ಕಡಿತವಾಗಬಹುದೆಂದು ತಿಳಿಸಿದೆ.
ಜುಲೈ 22ರಂದುಬೆಂಗಳೂರಿನಲ್ಲಿ ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ, ಸಬ್ ರಿಜಿಸ್ಟರ್ ಆಫೀಸ್, ವಿನಾಯಕ ನಗರ, ಸಾಯಿ ಇಂಟರ್ ನ್ಯಾಷನಲ್ ಹೋಟೆಲ್, ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ದೇವರಾಜ್ ಅರಸ್ ಲೇಔಟ್ ಬಿ ಬ್ಲಾಕ್, ಗಿರಿಯಪ್ಪ ಲೇಔಟ್, ಬಾಣಸವಾಡಿ ಮುಖ್ಯರಸ್ತೆ, ತ್ಯಾಗರಾಜ್ ಲೇಔಟ್, ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ಮುಕುಂದ ಥಿಯೇಟರ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಬಿಎಚ್‌ಇಎಲ್ ಲೇಔಟ್, ಉಳ್ಳಾಲ ನಗರ, ಮಾರುತಿ ನಗರ, ಅನುಪಮಾ ಸ್ಕೂಲ್ ರಸ್ತೆ ಸೇರದಂತೆ ಇನ್ನಿತರ ಸ್ಥಳಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ.

ಜುಲೈ 23ರ ಶನಿವಾರ ನಗರದ ನಿಟುವಳ್ಳಿ ರಸ್ತೆ, ಭಗೀರಥ ವೃತ್ತ, ಬಿಟಿ ಲೇಔಟ್, ಕೆಆರ್ ರಸ್ತೆ, ಇಮಾಮ್ ನಗರ, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಇನ್ನು ಬಂಬೂ ಬಜಾರ್, ಆನೆಕೊಂಡ, ಚೌಡೇಶ್ವರಿ ದೇವಸ್ಥಾನ, ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಕೆಬಿ ನಗರ ಗೋಶಾಲ, ರುದ್ರಪ್ಪ ರೈಸ್ ಮಿಲ್, ದೊಡ್ಡ ಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಬಿಎನ್ ಲೇಔಟ್, ಭಾಷಾ ನಗರದ 1-7ನೇ ಕ್ರಾಸ್, ರಾಜವುಲ್ಲಾ ಮುಸ್ತಫಾ ನಗರ, ಬಿಡಿ ಲೇಔಟ್, ಎಸ್‌ಎಸ್‌ಎಂ ನಗರ, ರಾಜ್‌ಕುಮಾರ್ ಲೇಔಟ್, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರಗಳು ಸೇರಿದಂತೆ ಬೇರೆ ಏರಿಯಾಗಳಲ್ಲೂ ವಿದ್ಯುತ್ ಕಡಿತವಾಗಲಿದೆ.

ಜುಲೈ 24ರ ಭಾನುವಾರ ನಗರದ ನಾಗರಹಳ್ಳಿ ವೃತ್ತ, ಪ್ರಸನ್ನ ಲೇಔಟ್, ನಾಗರಹಳ್ಳಿ ವೃತ್ತ, ವಿಘ್ನೇಶ್ವರ ನಗರ, ನೀಲಗಿರಿ ತೋಪು ರಸ್ತೆ, ಓಂಕಾರ ಆಶ್ರಮ, ಟಿ.ಜಿ.ಪಾಳ್ಯ ಮುಖ್ಯರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರದ 1-4 ನೇ ಬ್ಲಾಕ್, ಚಿಕ್ಕದೇವಸಂದ್ರದ ಮುಖ್ಯ ರಸ್ತೆ, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ಸಾಯಿಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ಪವರ್ ಕಟ್.












Click it and Unblock the Notifications