• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು; ಈ ಏರಿಯಾಗಳಲ್ಲಿ ಜೂ.23 ರಿಂದ 26ರ ತನಕ ಪವರ್ ಕಟ್

|
Google Oneindia Kannada News

ಬೆಂಗಳೂರು ಜೂ.23: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ನಗರದಲ್ಲಿನ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನೆಲದಡಿ ಕೇಬಲ ಅಳವಡಿಕೆ, ದುರಸ್ತಿ ಕಾರ್ಯ ಸೇರಿದಂತೆ ಹಲವು ಕಾಮಗಾರಿ ಕೈಗೆತ್ತಿಕೊಂಡಿದೆ. ಈಕಾರಣದಿಂದ ನಗರದಲ್ಲಿ ಕೆಲವು ಬಡಾವಣೆಗಳಲ್ಲಿ ಜೂ.23ರಿಂದ 26ರ ತನಕ ಪವರ್ ಕಟ್ ಮಾಡಲಾಗುತ್ತದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ನಗರದಲ್ಲಿ ಮಳೆ ಬಿಡುವು ನೀಡಿದಾಗಲ್ಲೆಲ್ಲ ಬೆಸ್ಕಾಂ ಓವರ್ ಹೆಡ್ ಕೇಬಲ್ ಗಳನ್ನು ನೆಲದಡಿ ಜೋಡಿಸುವ ಕೆಲಸ ಕೈಗೊಳ್ಳುತ್ತಿದೆ.

ಕೇವಲ ಬೆಸ್ಕಾಂ ಮಾತ್ರವಲ್ಲದೇ ಮೂಲಭೂತ ಸೌಕರ್ಯ ಒದಗಿಸುವ ವಿವಿಧ ಇಲಾಖೆಗಳು ಸಹ ವಿಸ್ತಾರಗೊಳ್ಳುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಒಂದಲ್ಲಾ ಒಂದು ಕಡೆ ಕಾಮಗಾರಿ ನಡೆಸುತ್ತಿರುತ್ತವೆ. ಇದು ಕೂಡ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗುತ್ತಿದೆ.

ಇನ್ನು ಮಳೆಗಾಲ ಮಳೆ ಬಂದಾಗಲ್ಲೆಲ್ಲ ಆಗಾಗ ವಿದ್ಯುತ್ ಕಡಿತಗೊಳಿಸುವುದು ಸಹಜ. ಕೆಲವೊಮ್ಮೆ ಮಳೆಯಿಂದಾಗಿ ಮರಗಳು ಬಿದ್ದು ಕೇಬಲ್ ತುಂಡಾಗುವ ಕಾರಣಕ್ಕೂ ವಿದ್ಯುತ್ ಸರಬರಾಜಿನಲ್ಲಿ ಕೊರತೆ ಉಂಟಾಗುತ್ತದೆ.

ಎಲ್ಲೆಲ್ಲಿ ವಿದ್ಯುತ್ ಕಡಿತ; ಗುರುವಾರ ಶಂಕರಪ್ಪ ಕೈಗಾರಿಕಾ ಪ್ರದೇಶ, ಸುಂಕದಕಟ್ಟೆ ಮುಖ್ಯರಸ್ತೆ, ಬೆಗ್ಗರ್ಸ್​ ಕಾಲೋನಿ, ಪ್ರೇಮ ನಗರ, ಬಿಎಂಟಿಸಿ ಡಿಪೋ, ಜಿಟಿ ಕಾಲೇಜು ಮುಖ್ಯರಸ್ತೆ, ಮೆಟ್ರೋ ಕ್ವಾಟ್ರರ್ಸ, ಎಚ್‌ಎಂಟಿ ಬಡಾವಣೆಯ ಮುಖ್ಯರಸ್ತೆ, ಸುಬೇದಾರ್‌ಪಾಳ್ಯ, ದಿವಾನರಪಾಳ್ಯ, ಗೋಕುಲ, ಕುಂದಲಹಳ್ಳಿ ಕೆರೆ, ರಯಾನ್ ಸ್ಕೂಲ್ ರಸ್ತೆ, ದಿವ್ಯಶ್ರೀ ಅಪಾರ್ಟಮೆಂಟ್ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

Power Cut In Bengaluru From June 23 to 26; Check Areas List

ಶುಕ್ರವಾರ ಪವರ್ ಕಟ್; ಪ್ರಶಾಂತ ನಗರ, ಕಾಮಾಕ್ಷಿಪಾಳ್ಯ, ರಂಗನಾಥಪುರ, ಬ್ಯಾಂಕ್ ಲೇಔಟ್‌, ಸುಂಕದಕಟ್ಟೆ ಮುಖ್ಯರಸ್ತೆ, ಜಿಟಿ ಕಾಲೇಜು ಮುಖ್ಯರಸ್ತೆ, ಮೀನಾಕ್ಷಿ ನಗರ, ನಂಜಪ್ಪ ಬಡಾವಣೆ, ಮೂರ್ತಿ ನಗರ, ಬೆಗ್ಗರ್ಸ ಕಾಲೋನಿ, ಪ್ರೇಮನಗರ, ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಕೈಗಾರಿಕಾ ಪ್ರದೇಶ ತಿಮ್ಮೇನಹಳ್ಳಿ, ಕೆಎಚ್ ಬಿಕಾಲೋನಿ, ಗೋವಿಂದ ರಾಜನಗರ ಭಾಗ, ಮೆಟ್ರೋ ಕಾಟ್ರರ್ಸ, ಸಂಜಯನಗರ, 80ಅಡಿ ರಸ್ತೆ, ದೇವಸಂದ್ರ, ಚಿಕ್ಕಆಡುಗೋಡಿ,ಮಾರುತಿ ನಗರ ಎಂಟನೇ ಅಡ್ಡರಸ್ತೆ, ಎನ್ ಜಿವಿ, ನೇತ್ರವತಿ,ಕೃಷ್ಣ, ಯಮುನಾ ಗಂಗಾ ಬ್ಲಾಕ್ ಗಳು, ಆಡುಗೋಡಿ ಕೆಎಂಎಲ್, ಗುರಪ್ಪನ ರಸ್ತೆ ಸುತ್ತಮುತ್ತಲಿನ ಪ್ರದೇಶ ಮತ್ತು ಎಚ್.ವಿ.ಆರ್.ಡಿಸಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕೊರತೆ ಉಂಟಾಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಶನಿವಾರ -ಭಾನುವಾರ: ಶನಿವಾರದಂದು ಡಾಲರ್ಸ್‌ ಕಾಲೋನಿ, ಮೆಟ್ರೋ ಕ್ವಾಟರ್ಸ್‌, ಸುಂಕದ ಕಟ್ಟೆ ಮುಖ್ಯರಸ್ತೆ, ಜಿಟಿ ಕಾಲೇಜು ಮುಖ್ಯ ರಸ್ತೆ, ಇಸ್ರೋ, ನ್ಯೂ ಬಿಇಎಲ್ ರಸ್ತೆ, ಸಿ.ಎಂ.ಹಳ್ಳಿ, ಕುಂಬರ್ಮುಕ ಪ್ರದೇಶದ ಭಾಗಗಳು, ಮಾರತ್ತಹಳ್ಳಿ, ಮೂರನೇ ಬ್ಲಾಕ್, ಜೆ ಬ್ಲಾಕ್, ಮೂರನೇ ಬ್ಲಾಕ್ ಕೈಗಾರಿಕಾ ಪ್ರದೇಶ, ದಿವ್ಯಶ್ರೀ ಅಪಾರ್ಟಮೆಂಟ್ ಮತ್ತು ವಿಲ್ಲಾಗಳು, ಎಸ್.ಬಿ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಪಿಸಿ ಕೈಗಾರಿಕಾ ಪ್ರದೇಶ, ಕಾವೇರಿಪುರ ರಂಗನಾಥಪುರ, ಕೆಸಿಜಿ ಇಂಡಿ ಪ್ರದೇಶ, ಶಿವಾ ಫಾರ್ಮ್ ಇಂಡಿ ಪ್ರದೇಶ, ನಂಜಪ್ಪ ಇಂಡಿ ಕೈಗಾರಿಕೆ ಪ್ರದೇಶಗಳಲ್ಲಿ ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಈ ಸಂಬಂಧ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಒಟ್ಟು ನಾಲ್ಕು ದಿನಗಳಲ್ಲಿ ಪ್ರೇಮನಗರ, ಬಿಎಂಟಿಸಿ ಬಸ್ ಡಿಪೋ, ಸುಂಕದಕಟ್ಟೆ ಮುಖ್ಯರಸ್ತೆ, ಜಿಟಿ ಕಾಲೇಜು ಮುಖ್ಯರಸ್ತೆ, ಮೆಟ್ರೋ ಕ್ವಾರ್ಟರ್ಸ್ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಹೆಚ್ಚಾಗಿ ವಿದ್ಯುತ್ ಕಡಿತಗೊಳ್ಳಲಿದೆ. ಉಳಿದ ಪ್ರದೇಶಗಳಲ್ಲಿ ನಿಗದಿತ ದಿನಗಳಲ್ಲಿ ಮಾತ್ರ ಬೆಳಗ್ಗೆಯಿಂದ ಸಂಜೆವರೆ ವಿದ್ಯುತ್ ವ್ಯತ್ಯಯವಾಲಿದೆ ಎಂದು ತಿಳಿದು ಬಂದಿದೆ.

   oga ದಿನದಂದು Pakistan Govt Tweet ಗೆ ಪಾಕ್ ಪ್ರಜೆ ಗಳಿಂದಲೇ ಟೀಕೆ!! | *Politics | OneIndia Kannada

   English summary
   Power cut in Bengaluru severals areas from 10 am to 5pm from June 23 to 26, 2022 said BESCOM official. Here are the list of areas.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X