ಬೆಂಗಳೂರಿನ ಈ ಪ್ರದೇಶಗಳಲ್ಲಿ ಭಾನುವಾರ 5 ಗಂಟೆಗಳ ಕಾಲ ವಿದ್ಯುತ್ ಕಡಿತ
ಬೆಂಗಳೂರು ಡಿಸೆಂಬರ್ 10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಳಿಯೊಂದಿಗೆ ಮಳೆ ಪ್ರಾರಂಭವಾಗಿದೆ. ಕಳೆದ ದಿನದಿಂದ ಮೋಡ ಕವಿದ ವಾತಾವರಣವಿದ್ದು ತುಸು ಗಾಳಿಯೊಂದಿಗೆ ಚಳಿಯೂ ಹೆಚ್ಚಾಗಿದೆ. ಇದರ ನಡುವೆ ಅಲ್ಲಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಸಾಮಾನ್ಯ ಆಗಿಬಿಟ್ಟಿದೆ.
ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಗಾಳಿ, ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಬೆಸ್ಕಾಂ ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

ಭಾನುವಾರ (11 ಡಿಸೆಂಬರ್) ಬೆಳಿಗ್ಗೆ 10 ರಿಂದ 3ಗಂಟೆಯವರೆಗೆ ಬೆಂಗಳೂರು ಕಂಟೋನ್ಮೆಂಟ್, CBD ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ 5 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳಲಿದೆ. ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

Several areas in and around #Bengaluru Cantonment and CBD areas to witness 5 hours of power cut on Sunday. @TOIBengaluru #Energy #Electricity @mdbescom pic.twitter.com/f5ap1VsCqC
— Niranjan Kaggere (@nkaggere) December 10, 2022
ಸ್ಟೇಷನ್ ರಸ್ತೆ, ಕ್ವಿನ್ಸ್ ರೋಡ್, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್ ರಸ್ತೆ, ಕನ್ನಿಂಗ್ ಹ್ಯಾಮ್ ರೋಡ್, ಅಲಿಯಾಸ್ಕರ್ ರಸ್ತೆ, ಚಿಕ್ ಬಜಾರ್ ರಸ್ತೆ, ಮುನಿಸ್ವಾಮಿ ರಸ್ತೆ, ಪಾರ್ಕ್ ರೋಡ್, ಚಾಂದನಿ ಚೌಕ್, ಮಿಲ್ಲರ ಟ್ಯಾಂಕ್, ಪ್ಯಾಲೆಸ್ ಟಾಕೀಸ್, ಬೌರಿಂಗ್ ಆಸ್ಪತ್ರೆ, ಚಿಕ್ ಬಜಾರ್ ರಸ್ತೆ, ಇಂಡಿಯನ್ ಎಕ್ಸಪ್ರೆಸ್ ರಸ್ತೆ, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಕಮೀಷ್ನರ್ ಆಫೀಸ್, ಕೆಎಸ್‌ಎಫ್‌ಸಿ ಬಿಲ್ಡಿಂಗ್, ಯುಎನ್‌ಐ, ಹೊಯ್ಸಳ ಅಪಾರ್ಟ್‌ಮೆಂಟ್, ಆರ್‌ಬಿಐ ಕ್ವಾಟ್ರಸ್, ಕಾಂಗ್ರೆಸ್ ಆಫೀಸ್, ಎಲ್,, ಬಿಎಸ್‌ಎನ್‌ಎಲ್ ಎಮ್‌ಎಸ್ ಬೀಲ್ಡಿಂಗ್, ಕಾರ್ಪೋರೇಟ್ ಆಫೀಸ್, ಕೆಪಿಎಸ್‌ಸಿ, ಸಿಒಡಿ, ಚೀಫ್ ಜಸ್ಟಿಸ್ ಹೌಸ್, ವಸಂತ್‌ನಗರ ಇತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.












Click it and Unblock the Notifications